ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಪ್ಪ ಯಾರೆಂದು ಗೊತ್ತಿಲ್ಲವೇ? ನನ್ನ ಹೆಸರು ಹಾಕಿ: ಜರ್ದಾರಿ (Zardari | Father | All Unknown Parentage Kids | Pak)
PTI
ತಂದೆ ಯಾರೆಂದು ತಿಳಿಯದೆ ಅನಾಥರಾಗಿರುವ ಮಕ್ಕಳ ತಂದೆಯ ಹೆಸರಿನ ಸ್ಥಳದಲ್ಲಿ ತಮ್ಮ ಹೆಸರನ್ನು ನಮೂದಿಸುವಂತೆ ರಾಷ್ಟ್ರೀಯ ಮಾಹಿತಿ ಸಂಚಯನ ಅಧಿಕಾರಿಗಳಿಗೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಆಲಿ ಜರ್ದಾರಿ ಸೂಚಿಸಿದ್ದಾರೆ.

ಅಧಿಕೃತವಾಗಿ ಜನಿಸಿದರೂ, ಪೋಷಕರು ಯಾರು ಎಂದು ಗೊತ್ತಾಗದೇ ಇರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಕ್ಕಳ ಸ್ಥಾನಮಾನವನ್ನು ಕಾನೂನು ಬದ್ಧಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ದತ್ತಾಂಶ ಸಂಚಯ ಮತ್ತು ನೋಂದಣಿ ಪ್ರಾಧಿಕಾರ (ಎನ್‌ಎಡಿಆರ್ಎ) ಅಧ್ಯಕ್ಷ ಮಲಿಕ್‌ ತಾರಿಕ್‌ ತಿಳಿಸಿದ್ದಾರೆ.

ಪೋಷಕರಿಲ್ಲದೇ ಅನಾಥರಾಗಿ ಸಾಮಾಜಿಕ ಸೇವಾ ಕೇಂದ್ರಗಳಲ್ಲಿರುವ ಸಾವಿರಾರು ಮಕ್ಕಳಿಗೆ ಗುರುತಿನ ಚೀಟಿ ನೀಡಲು ಎನ್‌ಎಡಿಆರ್ಎ ಯೋಜನೆ ರೂಪಿಸಿದೆ ಎಂದು ತಾರಿಕ್‌ ದಿ ನೇಷನ್ ದೈನಿಕಕ್ಕೆ ತಿಳಿಸಿದ್ದಾರೆ.

2005ರಲ್ಲಿ ಭೂಕಂಪ ಹಾಗೂ ಕಳೆದ ವರ್ಷ ನಡೆದ ಪ್ರವಾಹದ ಸಂದರ್ಭದಲ್ಲಿ ತಮ್ಮ ಪೋಷಕರನ್ನು ಕಳೆದುಕೊಂಡ ಹೆಚ್ಚಿನ ಸಂಖ್ಯೆಯ ಮಕ್ಕಳು ಅನಾಥಾಲಯಗಳಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅನಾಥ ಮಕ್ಕಳ ನೋಂದಣಿ ಸಂದರ್ಭದಲ್ಲಿ ತಂದೆ ಹಾಗೂ ತಾಯಿಯರ ಹೆಸರನ್ನು ನಮೂದಿಸುವುದು ಕಡ್ಡಾಯಗೊಳಿಸಿರುವುದರಿಂದ ಎನ್‌ಎಡಿಆರ್ಎ ಗೊಂದಲದಲ್ಲಿ ಸಿಲುಕಿತ್ತು ಎಂದು ಅವರು ತಿಳಿಸಿದ್ದಾರೆ.

'ಈ ವಿಷಯವು ಅಧ್ಯಕ್ಷ ಜರ್ದಾರಿ ಅವರ ತಮ್ಮ ಗಮನಕ್ಕೆ ಬಂದಾಗ, ಕೂಡಲೇ ಅವರು ಅನಾಥ ಮಕ್ಕಳ ತಂದೆಯ ಹೆಸರಿನ ಸ್ಥಳದಲ್ಲಿ ತಮ್ಮ ಹೆಸರನ್ನು ನಮೂದಿಸುವಂತೆ ಸ್ವಯಂ ಪ್ರೇರಣೆಯಿಂದ ತಿಳಿಸಿದ್ದಾರೆ' ಎಂದು ತಾರಿಕ್‌ ಹೇಳಿದ್ದಾರೆ.

'ಪೋಷಕರಿಲ್ಲದೇ ಅನಾಥರಾಗಿರುವ ಸಾವಿರಾರು ಮಕ್ಕಳನ್ನು ದೇಶದ ಜವಾಬ್ದಾರಿಯುತ ನಾಗರಿಕರಾಗಿ ರೂಪಿಸಬೇಕು. ಇಂತಹಾ ಮಕ್ಕಳಿಗೆ ಗುರುತಿನ ಚೀಟಿ ನೀಡುವಂತಾಗಲು, ಎನ್‌ಎಡಿಆರ್ಎ ತಂದೆಯ ಹೆಸರಿನ ಸ್ಥಳದಲ್ಲಿ ತಮ್ಮ ಹೆಸರನ್ನು ನಮೂದಿಸಬಹುದು' ಎಂದು ಜರ್ದಾರಿ ಅವರು ಹೇಳಿದ್ದನ್ನು ತಾರಿಕ್‌ ಉಲ್ಲೇಖಿಸಿದ್ದಾರೆ.
ಇವನ್ನೂ ಓದಿ