ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » 77ರ ಮುದುಕಿ ಮೇಲೆ ಅತ್ಯಾಚಾರ ಮಾಡುತ್ತಿದ್ದಾಗಲೇ ಗೊಟಕ್ (Man dies | while raping | 77-year-old woman | Isabel Chavelo Gutierrez)
ಚಾಕು ತೋರಿಸಿ 77ರ ವೃದ್ಧೆಯ ಮೇಲೆ ಅತ್ಯಾಚಾರ ಮಾಡುತ್ತಿದ್ದ ವ್ಯಕ್ತಿಯೊಬ್ಬ ದಿಢೀರ್ ಸಾವನ್ನಪ್ಪಿದ್ದಾನೆ.ಟೆಕ್ಸಾಸ್‌ನ ಟಿವೋಲಿ ಎಂಬಲ್ಲಿಯವನಾದ ಇಸಾಬೆಲ್‌ ಚವೆಲೋ ಗುಟಿರೆಜ್‌ (53) ಎಂಬಾತ ಈ 'ದುರಂತ' ಸಾವನ್ನಪ್ಪಿದವ.

ವೃದ್ಧೆಗೆ ಚಾಕು ತೋರಿಸಿ ಅತ್ಯಾಚಾರ ಮಾಡುತ್ತಿದ್ದಾಗಲೇ, ನನಗೇನೋ ಸುಸ್ತಾಗುತ್ತಿದೆ ಎನ್ನುತ್ತಾ ಹೇಳಿ ಅತ್ಯಾಚಾರ ನಿಲ್ಲಿಸಿ ಆತ ವಿಶ್ರಾಂತಿ ತೆಗೆದುಕೊಳ್ಳತೊಡಗಿದ. ಆದರೆ ಚೇತರಿಸಿಕೊಂಡ ತಕ್ಷಣ ಪುನಃ ಆಕೆಯ ಮೇಲೆರಗಿದಾಗ, ಅಲ್ಲೇ ಉರುಳಿಬಿದ್ದು ಸಾವನ್ನಪ್ಪಿದ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.

ಆರೋಪಿಯು ತನ್ನ ಮನೆಯಿಂದ ಎರಡು ಮೈಲಿ ದೂರ ಸೈಕಲ್‌ ತುಳಿದುಕೊಂಡು ಬಂದಿದ್ದರಿಂದಾಗಿಯೇ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ರೆಫ್ಯೂಜಿಯೋ ಕೌಂಟಿ ಶರೀಫರ ಕಚೇರಿಯ ಸಾರ್ಜಂಟ್‌ ಗ್ಯಾರಿ ರೈಟ್‌ ತಿಳಿಸಿದ್ದಾರೆ.

ಗುಟಿರೆಜ್‌ ಮೃತ ದೇಹವನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ.

ಜೂನ್‌ 2 ರಂದು ಈ ಮಹಿಳೆಯ ಮೇಲೆ ಆಕ್ರಮಣ ನಡೆದಿತ್ತು. ಇದಕ್ಕೆ ಒಂದು ದಿನಕ್ಕೆ ಮೊದಲು ಗುಟಿರೆಜ್‌ನನ್ನು ಸ್ಥಳೀಯ ಅಂಚೆ ಕಚೇರಿಯೊಂದರಲ್ಲಿ ನೋಡಿದ್ದಾಗಿ ಮಹಿಳೆ ತಿಳಿಸಿದ್ದಾಳೆ.

ಗುಟಿರೆಜ್‌ ಬಾಯಿಂದ ಆಲ್ಕೋಹಾಲ್ ವಾಸನೆ ಬರುತ್ತಿದ್ದುದರಿಂದ, ವಿಪರೀತ ಕುಡಿತದಿಂದಲೇ ಸಾವನ್ನಪ್ಪಿದ ಎಂದು ತಾನು ಭಾವಿಸಿದ್ದಾಗಿಯೂ ಆಕೆ ಹೇಳಿದ್ದಾಳೆ.

ಅತ್ಯಾಚಾರಕ್ಕೆ ಬಂದ ವ್ಯಕ್ತಿ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಮಹಿಳೆಯು ತನ್ನ ಮನೆಯಿಂದ ಹೊರಗೆ ಓಡಿಬಂದು ತನ್ನ ಮಗಳನ್ನು ಕರೆದಳು. ಕೂಡಲೇ ಆಕೆ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿದಳು. ಅವರು ಮರಳಿ ಬಂದು ನೋಡುವಾಗ ಗುಟಿರೆಜ್‌ ಮೃತಪಟ್ಟಿದ್ದ. ವಿಶೇಷವೆಂದರೆ, ಈ ಅತ್ಯಾಚಾರಿಯು ಹಿಂದೆ 7 ವರ್ಷದ ಮಗುವಿನ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮತ್ತು ಪೆರೋಲ್ ಮೇಲೆ ಬಿಡುಗಡೆಯಾಗಿದ್ದ.