ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಎಷ್ಟೇ ಮಕ್ಕಳನ್ನ ಹಡೆಯಿರಿ, ಭೂಮಿ ಫ್ರೀ: ರಷ್ಯಾ ಆಫರ್ (Produce kids | Russia | Dmitry Medvedev | population | families)
ತಂದೆ ಯಾರೆಂದು ತಿಳಿಯದ ಅನಾಥ ಮಕ್ಕಳು ತಂದೆಯ ಹೆಸರಿನ ಸ್ಥಳದಲ್ಲಿ ತಮ್ಮ ಹೆಸರನ್ನು ನಮೂದಿಸುವಂತೆ ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ ಬೆನ್ನಲ್ಲೇ ಇದೀಗ ರಷ್ಯಾ ಕೂಡ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹಡೆಯುವ ಮೂಲಕ ಪುಕ್ಕಟ್ಟೆಯಾಗಿ ಭೂಮಿ ಪಡೆದುಕೊಳ್ಳಿ ಎಂದು ಆಫರ್ ನೀಡಿದೆ!

ರಷ್ಯಾದಲ್ಲಿರುವ ದಂಪತಿಗಳು ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳು ಹಡೆಯುವ ನಿಟ್ಟಿನಲ್ಲಿ ದೇಶದ ಭೂ ಕಾಯ್ದೆಗೆ ತಿದ್ದುಪಡಿ ತರುವುದಕ್ಕೆ ಅಧ್ಯಕ್ಷ ಡೆಮಿಟ್ರಿ ಮೆಡ್ವೆಡೇವ್ ಸಹಿ ಹಾಕಿರುವುದಾಗಿ ದಿ ಕ್ರೆಮ್ಲಿನ್ ಗುರುವಾರ ತಿಳಿಸಿದೆ.

ರಷ್ಯಾದ ಪ್ರಜೆಗಳು ಮೂರು ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳು ಹೊಂದಿದ್ದಲ್ಲಿ ಅವರಿಗೆ ಉಚಿತವಾಗಿ ಭೂಮಿಯನ್ನು ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದು, ಇದರಲ್ಲಿ ವೈಯಕ್ತಿಕ ಗೃಹ ನಿರ್ಮಾಣದ ಉದ್ದೇಶ ಕೂಡ ಇರುವುದಾಗಿ ರಷ್ಯಾ ಸರಕಾರ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ.

ಜನಸಂಖ್ಯೆ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ಹೇಳಿದೆ. ಹಾಗಾಗಿ ಮುಂದಿನ ಪೀಳಿಗೆ ದೇಶಕ್ಕೆ ಯೋಗ್ಯವಾದದ್ದಾಗಿದೆ, ಅಷ್ಟೇ ಅಲ್ಲ ಬುದ್ದಿವಂತಿಕೆ ಮತ್ತು ಶ್ರೇಷ್ಠ ಹೂಡಿಕೆಯಾಗಿದೆ ಎಂದು ಮೆಡ್ವೆಡೇವ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ರಷ್ಯಾದಲ್ಲಿ ಜನಸಂಖ್ಯೆಯದ್ದೇ ದೊಡ್ಡ ಸಮಸ್ಯೆಯಾಗಿದೆ. 1990ರ ಸುಮಾರಿಗೆ ರಷ್ಯಾದ ಜನಸಂಖ್ಯೆ ತುಂಬಾ ಅಧಿಕವಾಗಿತ್ತು. ಆಗ 148 ಮಿಲಿಯನ್ ಇದ್ದ ಜನಸಂಖ್ಯೆ, ಇದೀಗ 143 ಮಿಲಿಯನ್‌ಗೆ ಕುಸಿದಿದೆ. ಅಲ್ಲದೇ 2050ರ ಹೊತ್ತಿಗೆ ಇದು 111ಮಿಲಿಯನ್‌ಗೆ ಕುಸಿಯುವ ಸಾಧ್ಯತೆ ಹೆಚ್ಚಳವಾಗಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ