ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಡುಗೆ ಸ್ಪರ್ಧೆಯಲ್ಲಿ 45 ಲಕ್ಷ ರೂ. ತಂದುಕೊಟ್ಟ ಉಪ್ಪಿಟ್ಟು (Upma dish | wins | $100,000 prize | Floyd Cardoz)
ಒಂದು ಪ್ಲೇಟ್ ಉಪ್ಪಿಟ್ಟಿಗೆ ಅಬ್ಬಬ್ಬಾ ಎಂದರೆ 50-60 ರೂಪಾಯಿ ಇರಬಹುದು. ಆದರೆ ಈತ ತಯಾರಿಸಿದ ಉಪ್ಪಿಟ್ಟು 45 ಲಕ್ಷ ರೂಪಾಯಿಯನ್ನೇ ಗಳಿಸಿಕೊಟ್ಟಿದೆ ಎಂದರೆ ನೀವು ನಂಬಲೇಬೇಕು.

ಹೌದು, ನ್ಯೂಯಾರ್ಕಿನಲ್ಲಿ ಈಗ ಮುಚ್ಚಲಾಗಿರುವ ಡ್ಯಾನಿ ಮೆಯೆರ್ ಭಾರತೀಯ ರೆಸ್ಟೋರೆಂಟ್ 'ತಬ್ಲಾ'ದ ಪ್ರೇರಣಾ ಶಕ್ತಿಯಾಗಿದ್ದ ಭಾರತೀಯ ಸಂಜಾತ ಅಮೆರಿಕನ್ ಬಾಣಸಿಗ (ಚೆಫ್) ಫ್ಲಾಯ್ಡ್‌ ಕಾರ್ಡೋಜ್‌ ತಯಾರಿಸಿದ ಉಪ್ಪಿಟ್ಟು ಅಡುಗೆ ಸ್ಪರ್ಧೆಯಲ್ಲಿ 1 ಲಕ್ಷ ಡಾಲರ್ ಬಹುಮಾನಕ್ಕೆ ಪಾತ್ರವಾಗಿದೆ.

ಈ ಅಡುಗೆ ಸ್ಪರ್ಧೆಯಲ್ಲಿ, ಮುಂಬೈಯಲ್ಲಿ ಜನಿಸಿದ್ದ ಕಾರ್ಡೋಜ್‌ ಅವರು ಕ್ಯಾಲಿಫೋರ್ನಿಯಾದ ಪ್ರತಿಷ್ಠಿತ ಟ್ರಾಸಿ ಡೇಸ್‌ ಜಾರ್ಡಿನ್ಸ್‌ ಹಾಗೂ ಮೇರಿ ಸ್ಯೂ ಮಿಲ್ಲಿಕೇನ್‌ ಅವರನ್ನು ಹಿಂದಿಕ್ಕುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದು, ಬಹುಮಾನದ ಹಣವನ್ನು ಕ್ಯಾನ್ಸರ್‌ನಿಂದ ಮೃತಪಟ್ಟ ತಮ್ಮ ತಂದೆಯ ಸ್ಮರಣಾರ್ಥ ನ್ಯೂಯಾರ್ಕ್‌‌ನ ಮೌಂಟ್‌ ಸಿನಾಯ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿರುವ ಯುವ ವಿಜ್ಞಾನಿಗಳ ಕ್ಯಾನ್ಸರ್ ಸಂಶೋಧನಾ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ.

ಭಾರತದ ಪ್ರಸಿದ್ಧ ಉಪಾಹಾರ ಉಪ್ಪಿಟ್ಟು ತಯಾರಿಸುವ ಮೂಲಕ ಕಾರ್ಡೋಜ್ ಅವರು ತೀರ್ಪುಗಾರರಲ್ಲಿ ಅಭಿಪ್ರಾಯಭೇದ ಮೂಡಿಸಿದರು. ಆದರೆ ಅಂತಿಮವಾಗಿ ಆಹಾರದಲ್ಲಿ ಬಳಸಿದ ಸಾಂಬಾರ ಪದಾರ್ಥಗಳು ತೀರ್ಪುಗಾರರ ಮೇಲೆ ಪ್ರಭಾವ ಬೀರಿದವು ಎಂದು ವಾಲ್‌ಸ್ಟ್ರೀಟ್‌ ಜರ್ನಲ್‌ ಹೇಳಿದೆ.

'ಅವರ ಖಾದ್ಯದಲ್ಲಿ ರೈಸ್‌ ಕ್ರಸ್ಟೆಡ್ ಸ್ನಾಪರ್ ಹಾಗೂ ಮಲೇಶಿಯನ್‌ ಬೀಫ್‌ ಕೂಡ ಸೇರಿತ್ತು. ತಬ್ಲಾದಲ್ಲಿ ಉತ್ತಮ ಅಡುಗೆ ಮಾಡುತ್ತಿದ್ದ ಕಾರ್ಡೋಜ್‌, ಅದನ್ನೇ ಮುಂದುವರಿಸುತ್ತಾರೆ, ಮತ್ತು ತಮ್ಮ ಭಾರತೀಯ ಅಭಿರುಚಿಯೊಂದಿಗೆ ಸ್ಥಳೀಯ ಪಾಕಶಾಸ್ತ್ರವನ್ನೂ ಸೇರಿಸಿ ವಿಶೇಷವಾದುದನ್ನು ತಯಾರಿಸುತ್ತಾರೆ ಎಂಬುದು ನಮ್ಮ ಊಹೆಯಾಗಿತ್ತು' ಎಂದು ಪತ್ರಿಕೆ ಹೇಳಿದೆ.

ಕಾರ್ಡೋಜ್‌ ಅವರು ಜಯಗಳಿಸುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದ ಚಿಕಾಗೋದ ಫ್ರಾಂಟೆರಾ ಗ್ರಿಲ್‌ನ ರಿಕ್‌ ಬೇಯ್ಲೆಸ್‌ ಹಾಗೂ ನ್ಯೂಯಾರ್ಕಿನ ರೆಡ್ ರೂಸ್ಟರ್‌ನ ಮಾರ್ಕಸ್‌ ಸ್ಯಾಮ್ಯುಯೆಲ್ಸನ್‌ ಅವರನ್ನು ಸೇರಿಕೊಂಡಿದ್ದಾರೆ ಎಂದು ಹಫಿಂಗ್ಟನ್‌ ಪೋಸ್ಟ್‌ ವರದಿ ಮಾಡಿದೆ.

ಮುಂಬರುವ ದಿನಗಳಲ್ಲಿ ನ್ಯೂಯಾರ್ಕ್‌‌ನ ಬ್ಯಾಟರಿ ಪಾರ್ಕ್‌ ಸಿಟಿಯಲ್ಲಿರುವ, ಡ್ಯಾನಿ ಮೆಯೆರ್ ಕಂಪನಿಯ ನಾರ್ತ್ ಎಂಡ್ ಅಮೆರಿಕನ್ ಗ್ರಿಲ್‌ನ ಮುಂದಾಳುತ್ವ ವಹಿಸಿಕೊಳ್ಳಲಿದ್ದಾರೆ.