ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಭಯೋತ್ಪಾದನೆ: ಇಂಡೋನೇಷ್ಯಾ ಮೌಲ್ವಿಗೆ 15 ವರ್ಷ ಜೈಲು (Jakarta | Indonesia | Muslim cleric | Bali bombings | Abu Bakar Bashir)
ಬಾಲಿ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಉಗ್ರಗಾಮಿ ಸಂಘಟನೆಗೆ ಬೆಂಬಲ ನೀಡಿರುವಆರೋಪದಲ್ಲಿ ಇಂಡೋನೇಷ್ಯಾದ ಮುಸ್ಲಿಮ್ ಮೌಲ್ವಿ, ಧಾರ್ಮಿಕ ಮುಖಂಡ ಅಬು ಬಕರ್ ಬಶೀರ್‌ಗೆ ನ್ಯಾಯಾಲಯ ಗುರುವಾರ 15 ವರ್ಷ ಜೈಲುಶಿಕ್ಷೆ ವಿಧಿಸಿದೆ.

ಉಗ್ರ ಸಂಘಟನೆ ಅಲ್ ಖಾಯಿದಾ ಮಾದರಿಯಲ್ಲೇ ಇಂಡೋನೇಷ್ಯಾದಲ್ಲೂ ಉಗ್ರಗಾಮಿ ಚಟುವಟಿಕೆಗೆ ಇಸ್ಲಾಮ್ ಭಯೋತ್ಪಾದಕರ ಧಾರ್ಮಿಕರ ಗುರು, ಮೌಲ್ವಿ ಅಬು ಬಕರ್ ವಿರುದ್ಧ ಕಳೆದ ಎಂಟು ವರ್ಷಗಳಿಂದ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಅಲ್ಲದೇ 2002ರಲ್ಲಿ ನಡೆದ ಬಾಲಿ ಬಾಂಬ್ ಸ್ಫೋಟ ಪ್ರಕರಣದಲ್ಲೂ ದೋಷಿ ಎಂದು ತೀರ್ಪು ನೀಡಿತ್ತು. ಆ ನಿಟ್ಟಿನಲ್ಲಿ ಇದೀಗ 72ರ ಹರೆಯದ ಬಶೀರ್‌ಗೆ 15 ವರ್ಷಗಳ ಜೈಲುಶಿಕ್ಷೆ ವಿಧಿಸಿದೆ. ಈ ನೆಲೆಯಲ್ಲಿ ಇಂಡೋನೇಷ್ಯಾ ದೇಶದಲ್ಲಿ ನಡೆಯುತ್ತಿರುವ ಉಗ್ರಗಾಮಿ ಚಟುವಟಿಕೆಗೆ ಕಡಿವಾಣ ಹಾಕಲು ಹೊರಟಿದೆ.

ಬಿಗಿ ಬಂದೋಬಸ್ತ್ ನಡುವೆ ಜಕಾರ್ತಾ ನ್ಯಾಯಾಲಯದಲ್ಲಿ ಬಶೀರ್ ಪ್ರಕರಣದ ಕುರಿತು ನ್ಯಾಯಾಧೀಶರು ತೀರ್ಪು ಘೋಷಿಸಿದ ಸಂದರ್ಭದಲ್ಲಿ ಬಶೀರ್ ಅವರ ಸಾವಿರಾರು ಬೆಂಬಲಿಗರು ನೆರೆದಿದ್ದರು. ಅದರಲ್ಲಿ ಕೆಲವರು ಬಶೀರ್ ಅವರನ್ನು ಬಂಧಮುಕ್ತಗೊಳಿಸಿ ಎಂದು ಘೋಷಣೆ ಕೂಗಿದರು. ಬಶೀರ್ ಪ್ರಕರಣದ ತೀರ್ಪಿನ ಹಿನ್ನೆಲೆಯಲ್ಲಿ ಬಾಂಬ್ ದಾಳಿ ನಡೆಸಲಾಗುವುದು ಎಂಬ ಟ್ವಿಟರ್‌ನಲ್ಲಿ ಸಂದೇಶಗಳು ಹರಿದಾಡುತ್ತಿದ್ದರಿಂದ ಸುಮಾರು 3200 ಪೊಲೀಸರು ಮತ್ತು ಸೈನಿಕರನ್ನು ಕೋರ್ಟ್‌ ಸುತ್ತ ಭದ್ರತೆಗೆ ನಿಯೋಜಿಸಲಾಗಿತ್ತು.

ಕೋರ್ಟ್ ತೀರ್ಪಿನ ನಂತರ ಮಾತನಾಡಿದ ಬಶೀರ್, ತಾನು ಈ ತೀರ್ಪನ್ನು ತಿರಸ್ಕರಿಸುವುದಾಗಿ ಹೇಳಿದ್ದಾನೆ. ಅಲ್ಲದೇ ಈ ತೀರ್ಪನ್ನು ಪ್ರಶ್ನಿಸುವುದಾಗಿ ಆತನ ಪರ ವಕೀಲರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಪ್ರಜೆಗಳಿಂದ ಆಯ್ಕೆಯಾದ ಸರಕಾರ ವಿಷಕಾರಕ ಎಂದು ಇತ್ತೀಚೆಗೆ ನ್ಯಾಯಾಲಯಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಕಿಡಿಕಾರಿದ್ದ ಬಶೀರ್, ಇಸ್ಲಾಮ್ ಭಯೋತ್ಪಾದಕರಿಂದಲೇ ತೀವ್ರ ಹಿಂಸೆ, ಕಿರುಕುಳಕ್ಕೆ ಒಳಗಾದ ಮುಸಲ್ಮಾನರನ್ನು ರಕ್ಷಿಸಲು ಕಾನೂನು ರೂಪಿಸಲು ಈ ಸರಕಾರ ವಿಫಲವಾಗಿದೆ ಎಂದು ದೂರಿದ್ದ. ಇಸ್ಲಾಮ್‌ನ ಷರಿಯಾ ಕಾನೂನಿನಂತೆ ನಾನು ಪ್ರಭಾವಿತನಾಗಿದ್ದು, ಇಸ್ಲಾಮ್ ವಿರೋಧಿಗಳನ್ನು ಹತ್ತಿಕ್ಕಲು ದೇವರು ಆದೇಶಿಸಿರುವಂತೆ, ಏಕ್ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ದೈಹಿಕ ಮತ್ತು ಆಯುಧ ತರಬೇತಿ ನೀಡುವುದ ಆರಾಧನೆಯ ಒಂದು ಭಾಗವಷ್ಟೇ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದ.
ಇವನ್ನೂ ಓದಿ