ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ ಜೈಲಿನಿಂದ 24 ಭಾರತೀಯರು ಬಂಧಮುಕ್ತ (24 Indians | Set free | Pak jail |Return home)
ಪಾಕಿಸ್ತಾನದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ 24 ಮಂದಿ ಭಾರತೀಯರನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಭಾರತ- ಪಾಕ್‌ ನ್ಯಾಯಾಂಗ ಸಮಿತಿಯು ಉಭಯ ದೇಶಗಳಲ್ಲಿ ಬಂಧನದಲ್ಲಿರುವ ಮೀನುಗಾರರನ್ನು ಆದಷ್ಟು ಬೇಗ ಬಿಡುಗಡೆ ಮಾಡುವ ಮೂಲಕ ಬಲಿಪಶುಗಳಾಗುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಬಿಡುಗಡೆಯಾದ ಭಾರತೀಯರು ವಾಘಾ ಗಡಿಯ ಮೂಲಕ ಭಾರತಕ್ಕೆ ಆಗಮಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಾಕಿಸ್ತಾನದ ಜೈಲಿನಲ್ಲಿ ಕಳೆದ 15 ತಿಂಗಳಿನಿಂದ ಕರಾಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 14 ಮಂದಿ ಮೀನುಗಾರರನ್ನು ಸಕಾರಾತ್ಮಕ ಭಾವನೆಯಿಂದ ಬಿಡುಗಡೆಗೊಳಿಸುವುದಾಗಿ ಪಾಕಿಸ್ತಾನ ಸರಕಾರವು ಹೇಳಿತ್ತು. ಇದಾದ ನಂತರ ಇಬ್ಬರು ಮಹಿಳೆಯರು ಸೇರಿದಂತೆ ಇನ್ನೂ 10 ಮಂದಿ ಬಂಧಿತರನ್ನೂ ಬಿಡುಗಡೆ ಮಾಡಲು ಪಾಕ್‌ ಅಧಿಕಾರಿಗಳು ನಿರ್ಧರಿಸಿದ್ದರು.

ನಾವು ಇಬ್ಬರು ಮಹಿಳೆಯರೂ ಸೇರಿದಂತೆ 24 ಮಂದಿ ಭಾರತೀಯರನ್ನು ಬಿಎಸ್‌ಎಫ್‌ಗೆ ಹಸ್ತಾಂತರಿಸಿದ್ದೇವೆ ಎಂದು ಪಾಕಿಸ್ತಾನ ರೇಜಂರ್‌ ವಕ್ತಾರ ಮಹಬೂಬ್‌ ಹಸನ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಭಾರತ- ಪಾಕ್‌ ವಿದೇಶಾಂಗ ಸಚಿವರ ಮಾತುಕತೆಗೂ ಮುನ್ನ ದೇಶದ ವಿವಿಧ ಜೈಲುಗಳಲ್ಲಿದ್ದ 87ಪಾಕ್ ಮೀನುಗಾರರನ್ನು ಭಾರತ ಬಿಡುಗಡೆ ಮಾಡಿತ್ತು.

ಬಿಡುಗಡೆಯಾದ ಬಹುತೇಕ ಮೀನುಗಾರರು 25ರಿಂದ 30 ವರ್ಷ ಒಳಗಿನವರಾಗಿದ್ದು, ಇವರೆಲ್ಲರೂ ಗುಜರಾತ್‌ ರಾಜ್ಯದ ಜುನಾಗಢದವರಾಗಿದ್ದಾರೆ.

ಮೀನುಗಾರರು ಕಳೆದ 8 ತಿಂಗಳ ಹಿಂದೆ ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದಾಗ ಅಂತಾರಾಷ್ಟ್ರೀಯ ಗಡಿ ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ರಕ್ಷಣಾ ಪಡೆಯಿಂದ ಬಂಧನಕ್ಕೊಳಗಾಗಿದ್ದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಜೈಲಿನಿಂದ, 24 ಭಾರತೀಯರು ಬಂಧಮುಕ್ತ, ಲಾಹೋರ್