ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕ್‌: ಐದೇ ನಿಮಿಷದಲ್ಲಿ 46 ಲಕ್ಷ ರೂ. ದರೋಡೆ (Pakistan | Bank robbed | In five minutes | Rs 4.6m)
ಬಂದರು ನಗರವಾದ ಕರಾಚಿಯ ಖಾಸಗಿ ಬ್ಯಾಂಕೊಂದಕ್ಕೆ ನುಗ್ಗಿದ ಆರು ಮಂದಿ ದರೋಡೆಕೋರರು ಕೇವಲ 5 ನಿಮಿಷದಲ್ಲಿ 46 ಲಕ್ಷ ರೂ. ದೋಚಿರುವ ಘಟನೆ ನಡೆದಿರುವುದಾಗಿ ಡೈಲಿ ಟೈಮ್ಸ್‌ ದೈನಿಕ ವರದಿ ಮಾಡಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಶುಕ್ರವಾರ ಬೆಳಿಗ್ಗೆ 9.10ಕ್ಕೆ ಬ್ಯಾಂಕಿನೊಳಗೆ ನುಗ್ಗಿದ ದರೋಡೆಕೋರರು ಸಿಸಿ ಟಿವಿ ಕ್ಯಾಮರಾಗಳನ್ನು ಒಡೆದು ಹಾಕಿ ಬ್ಯಾಂಕ್‌ ಸಿಬ್ಬಂದಿಗಳನ್ನು ಒತ್ತೆಯಾಳುಗಳನ್ನಾಗಿಸಿಕೊಂಡು ಕೇವಲ ಐದೇ ನಿಮಿಷದಲ್ಲಿ 46 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ. ಕರಾಚಿಯ ಸೌದಾಬಾದ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲೇ ಈ ದರೋಡೆ ನಡೆದಿರುವುದು ಗಮನಾರ್ಹ.

ಐದು ಮಂದಿ ದರೋಡೆಕೋರರು ಬ್ಯಾಂಕಿನೊಳಗೆ ಬಂದಿದ್ದರು, ಒಬ್ಬ ದರೋಡೆಕೋರ ಹೊರಗಿನಿಂದಲೇ ಎಲ್ಲ ಸಹಕಾರ ನೀಡುತ್ತಿದ್ದ. ದರೋಡೆಕೋರರು 46 ಲಕ್ಷ ರೂ. ದೋಚುವುದರೊಂದಿಗೆ ಬ್ಯಾಂಕಿನ ಏಳು ಮಂದಿ ಸಿಬ್ಬಂದಿಯ ಮೊಬೈಲ್‌ ಫೋನ್‌ಗಳನ್ನು ಕದ್ದೊಯ್ದಿದ್ದಾರೆ. ಈ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಪಾಕಿಸ್ತಾನ, ಖಾಸಗಿ ಬ್ಯಾಂಕ್, ಐದೇ ನಿಮಿಷದಲ್ಲಿ, 46 ಲಕ್ಷ ರೂ ದರೋಡೆ