ರಾಷ್ಟ್ರೀಯ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಅಮೆರಿಕದ ವಿದ್ಯಾರ್ಥಿನಿ ಜಗತ್ತಿನ ಅತೀ ಕುಳ್ಳಿ! (US student | Shortest woman | Guinness World Record | Bridgette Jordan)
ಅಮೆರಿಕದ 22 ವರ್ಷದ ವಿದ್ಯಾರ್ಥಿನಿ ಜಗತ್ತಿನ ಅತ್ಯಂತ ಕುಳ್ಳಿ ಎಂದು ಗಿನ್ನಿಸ್‌ ಬುಕ್‌ ದಾಖಲೆಯಲ್ಲಿ ಈಕೆಯ ಹೆಸರು ದಾಖಲಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಎರಡು ಅಡಿ ಮೂರು ಇಂಚು ಎತ್ತರ ಇರುವ ಬ್ರಿಡ್‌ಗೆಟ್ಟೆ ಜೋರ್ಡಾನ್‌ ಗಿನ್ನೆಸ್‌ ದಾಖಲೆಗೆ ಸೇರಿದ್ದಾಳೆ. ಈಕೆ ಮೂರು ಅಡಿ ಮೂರು ಇಂಚು ಎತ್ತರ ಇರುವ ತನ್ನ ಸಹೋದರ 20 ವರ್ಷದ ಬ್ರಾಡ್‌ ಜೋರ್ಡಾನ್‌ ಜೊತೆ ವಾಸಿಸುತ್ತಿದ್ದಾಳೆ ಎಂದು ಎಬಿಸಿ 7 ಟಿವಿ ಚಾನಲ್‌ ವರದಿ ಮಾಡಿದೆ.

ಇತ್ತೀಚೆಗೆ 2012ನೇ ಸಾಲಿನ ಗಿನ್ನಿಸ್‌ ದಾಖಲೆಗಳನ್ನು ಬಿಡುಗಡೆ ಮಾಡಿದ್ದ ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಜಗತ್ತಿನ ಅತೀ ಕುಳ್ಳ ಮಹಿಳೆ ಹಾಗೂ ಸಹೋದರ ಸಹೋದರಿಯರ ಬಗ್ಗೆ ಮಾಹಿತಿ ನೀಡಿತ್ತು.

ಈ ಕುಬ್ಜ ಸಹೋದರ ಸಹೋದರಿಯರು ಮಾಜೆವ್ಸ್ಕಿ ಓಸ್ಟೆಡೋ ಸ್ಪಾಸ್ಟಿಕ್ಸ್‌ನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ.

ಬ್ರಿಡ್‌ಗೆಟ್ಟಿಎ ಮತ್ತು ಬ್ರಾಡ್‌ ಇಲಿನಾಯ್ಸ್‌ನಲ್ಲಿರುವ ಕಸ್ಕಾಸಿಯಾ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಬ್ರಾಡ್‌ ಜಿಮ್ನಾಸ್ಟಿಕ್ಸ್‌, ಕರಾಟೆ, ಬಾಸ್ಕೆಟ್‌ಬಾಲ್‌ ಆಡುವುದರೊಂದಿಗೆ ಮ್ಯಾಜಿಕ್‌ ಮಾಡುವ ಹವ್ಯಾಸ ಹೊಂದಿದ್ದಾನೆ. ಬ್ರಿಡ್‌ಗೆಟ್ಟೆ ಡ್ಯಾನ್ಸ್‌ ಮಾಡುವುದು ಹಾಗೂ ಚಿಯರ್‌ ಲೀಡಿಂಗ್‌ ಮಾಡುವುದೆಂದರೆ ಆಕೆಗೆ ಇಷ್ಟ.

ಪ್ರತಿಯೊಬ್ಬರಿಗೂ ತಮ್ಮ ಬಗ್ಗೆ ಆತ್ಮವಿಶ್ವಾಸವಿರಬೇಕು ಎಂದು ಬ್ರಿಡ್‌ಗೆಟ್ಟೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಎಬಿಸಿ ನ್ಯೂಸ್‌ ವರದಿ ಮಾಡಿದೆ.

28.5 ಇಂಚ್‌ ಎತ್ತರ ಇರುವ ಟರ್ಕಿಯ ಎಲಿಫ್‌ ಕಾದಿರ್ಲಿ, ಎರಡು ಅಡಿ ಎತ್ತರ ಇರುವ ಭಾರತದ ನಾಗ್ಪುರದ ವಾಸಿ 17 ವರ್ಷದ ಜ್ಯೋತಿ ಆಮ್ಗೆ ಅವರ ಹೆಸರು ವಿಶ್ವದ ಅತ್ಯಂತ ಕಡಿಮೆ ಎತ್ತರ ಹೊಂದಿರುವವ ಗಿನ್ನಿಸ್‌ ದಾಖಲೆಯಲ್ಲಿ ಸೇರಿದೆ.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಮೆರಿಕದ ವಿದ್ಯಾರ್ಥಿನಿ, ಜಗತ್ತಿನ ಅತೀ ಕುಳ್ಳಿ, ಬ್ರಿಡ್ಗೆಟ್ಟೆ ಜೋರ್ಡಾನ್, ಬ್ರೇಕಿಂಗ್ ನ್ಯೂಸ್, ತಾಜಾ ಕನ್ನಡ ಸುದ್ದಿ, ಫಾರಿನ್ ಸುದ್ದಿ, ಅಂತಾರಾಷ್ಟ್ರೀಯ, ಅಂತರರಾಷ್ಟ್ರೀಯ, ಅಂತರ್ರಾಷ್ಟ್ರೀಯ ಸುದ್ದಿ