Widgets Magazine
Widgets Magazine

ದಕ್ಷಿಣ ಆಫ್ರಿಕಾ; ಇದೀಗ ಮಹಾತ್ಮ ಗಾಂಧಿ ಮನೆ ಮ್ಯೂಸಿಯಂ

ಜೋಹಾನ್ಸ್‌ ಬರ್ಗ್‌, ಭಾನುವಾರ, 20 ನವೆಂಬರ್ 2011 (13:02 IST)

Widgets Magazine

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಜೋಹಾನ್ಸ್‌ಬರ್ಗ್‌ನ ಉಪ ನಗರವಾದ ಆರ್ಚರ್ಡ್‌‌ನಲ್ಲಿ ತಂಗಿದ್ದ ಮನೆ ಈಗ ಮ್ಯೂಸಿಯಂ ಆಗಿ ಪರಿವರ್ತನೆಯಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮಹಾತ್ಮ ಗಾಂಧಿ ಅವರು ತಂಗಿದ್ದ ಸತ್ಯಾಗ್ರಹ ಹೌಸ್ ಅನ್ನು ಫ್ರೆಂಚ್‌ ಟ್ರಾವೆಲ್‌ ಕಂಪನಿ ವೊಯಾಗೆರಸ್‌ ಡ್ಯೂ ಮೊಂಡೆಯ ಮುಖ್ಯ ಅಧಿಕಾರಿಯಾಗಿರುವ ಜೀನ್‌ ಫ್ರಾನ್ಸಿಸ್‌ ರಿಯಲ್‌ ಅವರು ಖರೀದಿಸಿದ್ದು, ಮ್ಯೂಸಿಯಂ ಆಗಿ ಪರಿವರ್ತಿಸಿದ ಮನೆಯನ್ನು ಇತ್ತೀಚೆಗೆ ಅಧಿಕೃತವಾಗಿ ಉದ್ಘಾಟಿಸಲಾಗಿತ್ತು.

ಸ್ಥಳೀಯ ಇತಿಹಾಸ ತಜ್ಞರ ಸಹಾಯದಿಂದ ಮಹಾತ್ಮ ಗಾಂಧಿ ಅವರು ವಸಾಹತು ಶಾಹಿ ಹಾಗೂ ವರ್ಣ ಭೇದ ನೀತಿಯ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲಿ ಇದ್ದ ದಾಖಲೆಗಳನ್ನು ಇಲ್ಲಿ ಸಂಗ್ರಹಿಸಲಾಗಿದ್ದು, ಮಹಾತ್ಮ ಗಾಂಧಿ ಅವರ ಅನುಭವಗಳನ್ನು ಪ್ರವಾಸಿಗರಿಗೆ ನೀಡುವುದೇ ನಮ್ಮ ಉದ್ದೇಶವಾಗಿದೆ ಎಂದು ರಿಯಲ್‌ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜೋಹಾನ್ಸ್‌ ಬರ್ಗ್‌‌ನ ಸ್ಥಿರ ಪಾರಂಪರಿಕ ಸಂಸ್ಥೆಯ ಉಪ ನಿರ್ದೇಶಕ ಎರಿಕ್‌ ಇಟ್ಜ್‌ಕಿನ್‌, ಮಹಾತ್ಮ ಗಾಂಧಿ ಅವರ ಮನೆ ದಕ್ಷಿಣ ಆಫ್ರಿಕಾ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸಲಿದೆ ಎಂದು ಹೇಳಿದ್ದಾರೆ.

ಮಹಾತ್ಮ ಗಾಂಧಿ ಅವರ ಮನೆ ತನ್ನದೇ ಆದ ಹಿನ್ನೆಲೆ ಹೊಂದಿದೆ. ಇದರೊಂದಿಗೆ ಮಹಾತ್ಮ ಗಾಂಧಿ ಮತ್ತು ದಕ್ಷಿಣ ಆಫ್ರಿಕಾದ ಮುಖಂಡ ನೆಲ್ಸನ್‌ ಮಂಡೇಲಾ ಅವರನ್ನು ಬಂಧಿಸಿಟ್ಟಿದ್ದ ಹಳೇ ಕೊಟೆಯಲ್ಲಿರುವ ಬಂಧೀಖಾನೆಯೂ ಸಹಾ ಪ್ರವಾಸಿಗರನ್ನು ಆಕರ್ಷಿಸುತ್ತಿದೆ ಎಂದು ಹೇಳಿದ್ದಾರೆ.

ಆರ್ಚಡ್ಸ್‌ ಹೌಸನ್ನು 1907ರಲ್ಲಿ ನಿರ್ಮಿಸಲಾಗಿತ್ತು. ಈ ಮನೆಯಲ್ಲೇ ತಂಗಿದ್ದ ಮಹಾತ್ಮ ಗಾಂಧಿ ಅವರು ವರ್ಣಭೇಧ ನೀತಿ ಹಾಗೂ ವಸಾಹತು ಶಾಹಿಯ ವಿರುದ್ಧ ಹೋರಾಟ ನಡೆಸಿದ್ದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಈ ಬೆತ್ತಲೆ ಮಹಿಳೆ ಮಾಡಿದಳು ಗದ್ದಲ

ಸೇಂಟ್‌‌‌‌‌ ಪೀಟರ್ಸ್‌‌‌ಬರ್ಗ್‌‌‌‌ : ಒಬ್ಬ ಮಹಿಳೆ ಬೆತ್ತಲಾಗಿ ಮ್ಯಾಕ್‌‌‌ಡೊನಾಲ್ಡ್‌ ಒಳಗಡೆ ಬಂದು ಗದ್ದಲ ...

ಬಿಸಿಲಿನ ಬೇಗೆಯಿಂದ ಬಸವಳಿದ ಜನರಿಗೆ ತಂಪೆರೆದ ಮಳೆರಾಯ

ಬೆಂಗಳೂರು: ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಬೆಂಗಳೂರಿನಲ್ಲಿ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ...

ಮೋದಿ ಪ್ರಧಾನಿಯಾಗೋಲ್ಲ, ಯುಪಿಎ ಅಧಿಕಾರಕ್ಕೆ ಬರ್ತದೆ: ಇಬ್ರಾಹಿಂ ಭವಿಷ್ಯ

ಮಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿ ಆಗೋದಿಲ್ಲ. ಯುಪಿಎ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ. ಈ ಬಾರಿ ...

ಹಾಸನದಲ್ಲಿ ಮತ್ತೆ ದೇವೇಗೌಡರ ಕೊರಳಿಗೆ ವಿಜಯಮಾಲೆ ಬೀಳುತ್ತಾ?

ಮಾಜಿ ಪ್ರಧಾನಿಯ ಕ್ಷೇತ್ರ ಹಾಸನ ಕೂಡ ಸಮಸ್ಯೆಗಳಿಂದ ಹೊರತಾಗಿಲ್ಲ. ಮಾಜಿ ಪ್ರಧಾನಿಯ ತವರು ಎನ್ನುವ ಖ್ಯಾತಿ ...

Widgets Magazine
Widgets Magazine Widgets Magazine