ಸರ್ವಜ್ಞ | ಪ್ರಚಲಿತ | ವಿಮಾನ ದುರಂತ | ರಾಷ್ಟ್ರೀಯ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಪಾಕಿಸ್ತಾನ: ಸೇನೆ ಉಗ್ರರ ಗುಂಡಿನ ಚಕಮಕಿ- 18 ಉಗ್ರರ ಸಾವು (Pakistan | Taliban Attack | Shidano Dand Post | Kurram Region)
ಪಾಕಿಸ್ತಾನದ ಈಶಾನ್ಯ ಭಾಗದ ಬುಡಕಟ್ಟು ಪ್ರದೇಶದಲ್ಲಿ ತಾಲಿಬಾನ್‌ ಉಗ್ರರು ಹಾಗೂ ಭದ್ರತಾ ಪಡೆ ಸಿಬ್ಬಂದಿಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 18 ಉಗ್ರರು ಹಾಗೂ 7 ಮಂದಿ ಸೈನಿಕರು ಮೃತಪಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕುರ್ರಂ ವಲಯದಲ್ಲಿರುವ ಶಿಂಡಾನೋ ದಾಂಡ್‌ ಪ್ರದೇಶದಲ್ಲಿ ಗುರುವಾರ ರಾತ್ರಿಯಿಡೀ ನಡೆದ ಗುಂಡಿನ ಕಾಳಗದಲ್ಲಿ 18 ಉಗ್ರರು ಮೃತಪಟ್ಟಿದ್ದಾರೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ಶಸ್ತ್ರ ಸಜ್ಜಿತರಾಗಿದ್ದ ಯೋಧರು ಸೇನಾ ಕೇಂದ್ರದ ಮೇಲೆ ಮಧ್ಯರಾತ್ರಿ ದಾಳಿ ನಡೆಸಿದರು ಎಂದು ಹೆಸರು ಹೇಳಲಿಚ್ಛಿಸದ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಲಿಬಾನ್‌ ವಕ್ತಾರ ಎಶಾನುಲ್ಲಾ ಎಹಸಾನ್‌ ಅವರೂ ಸೇನಾ ಪಡೆಯ ಮೇಲೆ ನಡೆದ ದಾಳಿಯ ಹೊಣೆ ಹೊತ್ತಿರುವುದಾಗಿ ದೂರವಾಣಿ ಮೂಲಕ ತಿಳಿಸಿದ್ದಾರೆ.
ಇವನ್ನೂ ಓದಿ
WebduniaWebdunia