ಸರ್ವಜ್ಞ | ಪ್ರಚಲಿತ | ವಿಮಾನ ದುರಂತ | ರಾಷ್ಟ್ರೀಯ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಅಂತಾರಾಷ್ಟ್ರೀಯ | ಕರ್ನಾಟಕ ಸುದ್ದಿ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಅಂತಾರಾಷ್ಟ್ರೀಯ » ಜಪಾನ್‌ನಲ್ಲಿ ಇನ್ನೊಂದು ಅಣು ರಿಯಾಕ್ಟರ್ ಕ್ಲೋಸ್ (Japan | Nuclear Reactor | Sunami | Earth Quake | International News)
PR
ಜಪಾನಿನ ಇನ್ನೊಂದು ಅಣು ರಿಯಾಕ್ಟರನ್ನು ದುರಸ್ತಿಗಾಗಿ ಸೋಮವಾರ ಮುಚ್ಚಲಾಯಿತು. ಇದರೊಂದಿಗೆ ಕಳೆದ ವರ್ಷದ ವಿನಾಶಕ ಭೂಕಂಪ ಮತ್ತು ಸುನಾಮಿಯನ್ನನುಸರಿಸಿ ದೇಶದ 54 ರಿಯಾಕ್ಟರ್‌ಗಳ ಪೈಕಿ ಕೇವಲ ಒಂದು ರಿಯಾಕ್ಟರ್‌ ಮಾತ್ರ ಈಗ ಕಾರ್ಯಾಚರಿಸುತ್ತಿದೆ.

ಕೊನೆಯ ರಿಯಾಕ್ಟರ್‌ ಮೇ ಆದಿಭಾಗದಲ್ಲಿ ಮುಚ್ಚಲ್ಪಡುವ ನಿರೀಕ್ಷೆಯಿದೆ. ಇದರಿಂದಾಗಿ ದೇಶಾದ್ಯಂತ ವಿದ್ಯುತ್‌ ಕೊರತೆ ತಲೆದೋರುವ ಸಾಧ್ಯತೆಯಿದೆ.

ಟೋಕಿಯೊ ಇಲೆಕ್ಟ್ರಿಕ್‌ ಪವರ್‌ ಕಂಪೆನಿ ಕಾಶಿವಾಝಕಿ-ಕರಿವಾ ಸಂಕೀರ್ಣದ ಸಂಖ್ಯೆ 6 ರಿಯಾಕ್ಟರನ್ನು ಸೋಮವಾರ ಮುಂಜಾನೆ ಮುಚ್ಚಿತು. ಜಪಾನಿನ ರಿಯಾಕ್ಟರ್‌ಗಳನ್ನು ಪ್ರತಿ 13 ತಿಂಗಳುಗಳಿಗೊಮ್ಮೆ ಮಾಮೂಲಿ ತಪಾಸಣೆಗಾಗಿ ಮುಚ್ಚಲಾಗುತ್ತದೆ.

ಫ‌ುಕುಶಿಮಾ ದುರಂತ ವೇಳೆ ಮುಚ್ಚಲಾಗಿದ್ದ ಮತ್ತು ಅನಂತರ ತಪಾಸಣೆಗಾಗಿ ಮುಚ್ಚಲಾಗಿರುವ ಯಾವುದೇ ರಿಯಾಕ್ಟರನ್ನು ಮರು ಆರಂಭಿಸಲು ಅವಕಾಶ ನೀಡಲಾಗಿಲ್ಲ. ಎಲ್ಲ ರಿಯಾಕ್ಟರ್‌ಗಳನ್ನು ಒತ್ತಡ ಪರೀಕ್ಷೆಗೆ ಒಳಪಡಿಸುವಂತೆ ಮತ್ತು ಸುರಕ್ಷತೆಯನ್ನು ಸುಧಾರಿಸಲು ಅಗತ್ಯ ಪರಿಷ್ಕರಣೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇವನ್ನೂ ಓದಿ
Feedback Print