ಚಾಕುವಿನಿಂದ ಇರಿದು 20 ಜನರನ್ನು ಗಾಯಗೊಳಿಸಿದ ಅಮೇರಿಕನ್ ವಿದ್ಯಾರ್ಥಿ

ಪಿಟ್ಸಬರ್ಗ್, ಗುರುವಾರ, 10 ಏಪ್ರಿಲ್ 2014 (13:08 IST)

ಅಮೇರಿಕಾದ ಪಿಟ್ಸಬರ್ಗ್ ಬಳಿಯ ಪ್ರೌಢಶಾಲೆಯೊಂದರಲ್ಲಿ ಬುಧವಾರ ಬೆಳಗ್ಗೆ ಆಕಸ್ಮಾತ್ ದಾಳಿ ನಡೆಸಿದ ವಿದ್ಯಾರ್ಥಿಯೊಬ್ಬ ಚಾಕುವಿನಿಂದ ಇರಿದು 20 ಜನರಿಗೆ ಗಾಯಗೊಳಿಸಿದ್ದಾನೆ ಎಂದು ವರದಿಯಾಗಿದೆ.

PTI

ಆತನಿಂದ ದಾಳಿಗೊಳಗಾದವರಲ್ಲಿ 4 ಜನ ವಿದ್ಯಾರ್ಥಿಗಳು ಕೂಡ ಇದ್ದು,ಅವರ ಸ್ಥಿತಿ ತೀವ್ರ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ದಾಳಿಕೋರನನ್ನು ಬಂಧಿಸಿರುವ ಪೋಲಿಸರು ತನಿಖೆಯನ್ನು ಕೈಗೊಂಡಿದ್ದಾರೆ.ಆದರೆ ಆತ ಈ ಭೀಕರ ಕೃತ್ಯಕ್ಕೆ ಏಕೆ ಮುಂದಾದ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.

ವರದಿಗಳ ಪ್ರಕಾರ, ಪಿಟ್ಸಬರ್ಗ್‌ನ ಉಪನಗರ ಮ್ರಿಸ್ವಲೆಯಲ್ಲಿರುವ ಫ್ರಾಂಕ್ಲಿನ್ ಪ್ರಾದೇಶಿಕ ಹೈಸ್ಕೂಲ್‌ನಲ್ಲಿ ಬೆಳಿಗ್ಗೆ ಸ್ಥಳೀಯ ಸಮಯ ಸುಮಾರು 7.15 ಕ್ಕೆ ವಿದ್ಯಾರ್ಥಿಯೊಬ್ಬ ಒಂದು ಚಾಕುವಿನಿಂದ ದಾಳಿ ಆರಂಭಿಸಿದ.

ಅರ್ಧ ಗಂಟೆಯ ನಂತರ ಸುಮಾರು 7.45 ಕ್ಕೆ ಶಂಕಿತ ದುಷ್ಕರ್ಮಿಯನ್ನು ಬಂಧಿಸಲಾಯಿತು ಎಂದು ವೆಸ್ಟರ್‌ಲ್ಯಾಂಡ್ ಕೌಂಟಿ ತುರ್ತು ನಿರ್ವಹಣಾ ಸೇವೆಯ ವಕ್ತಾರ ಡಾನ್ ಸ್ಟೀವನ್ಸ್ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

ಈಕೆಗಿಲ್ಲ ಜನನಾಂಗ, ಆದರೂ ಕೂಡ ಮಗುವಿಗೆ ಜನ್ಮ ನೀಡಳಿದ್ದಾಳೆ

ದೆಹಲಿ : ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ...

ಕನಕಪೂರದಲ್ಲಿ ಕಂಪಿಸಿದ ಭೂಮಿ

ಕನಕಪುರ: ಇಂದು ಬೆಳ್ಳಿಗ್ಗೆ ಕನಕಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ...

ನೀತಿ ಸಂಹಿತೆ ಉಲ್ಲಂಘಿಸಿದ ರಾಮದೇವ ಬಾಬಾ

ಫತೆಹಪುರ : ಯೋಗ ಗುರು ರಾಮದೇವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆಯ ಕೇಸು ದಾಖಲಾಗಿದೆ. ಉತ್ತರ ಪ್ರದೇಶದ ...

ಪಾಕಿಸ್ತಾನದಲ್ಲಿ ರಸ್ತೆ ಅಫಘಾತ: 30 ಜನರು ಸಾವು

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಸುಕುರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಒಂದು ಟ್ರೇಲರ್ ...

Widgets Magazine