100ಕ್ಕೂ ಹೆಚ್ಚು ಶಾಲಾಬಾಲಕಿಯರ ಅಪಹರಣ, ಬಿಡುಗಡೆ

ಗುರುವಾರ, 17 ಏಪ್ರಿಲ್ 2014 (15:35 IST)

Widgets Magazine

PR
PR
ಬಂಧೂಕುದಾರಿಗಳು ಅಪಹರಿಸಿದ 100ಕ್ಕೂ ಹೆಚ್ಚು ನೈಜೀರಿಯಾ ಶಾಲಾಮಕ್ಕಳನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ಈ ಮಕ್ಕಳನ್ನು ಮುಸ್ಲಿಂ ಭದ್ರಕೋಟೆಯ ಪ್ರದೇಶಕ್ಕೆ ಕರೆದೊಯ್ಯಲಾಗಿತ್ತು. 129 ಶಾಲಾಬಾಲಕಿಯರನ್ನು ಅಪಹರಿಸಿ ಈಶಾನ್ಯ ಬೋರ್ನೊಗೊ ಒಯ್ಯಲಾಗಿದ್ದು, 8 ಬಾಲಕಿಯರನ್ನು ಹೊರತು ಪಡಿಸಿ ಉಳಿದ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆ.ಕೆಲವು ಬಾಲಕಿಯರು ಬಿಡುಗಡೆಗೆ ಮುಂಚಿತವಾಗಿ ತಪ್ಪಿಸಿಕೊಂಡಿದ್ದರು. ಅಪಹೃತ ಬಾಲಕಿಯರನ್ನು ಇಸ್ಲಾಂ ತೀವ್ರವಾದಿ ಗುಂಪು ಬೋಕೋ ಹರಾಂ ಪ್ರದೇಶಕ್ಕೆ ಒಯ್ಯಲಾಗಿತ್ತು.

ನೈಜೀರಿಯಾದ ರಾಜಧಾನಿ ಅಬುಜಾದಲ್ಲಿ ಸಂಭವಿಸಿದ ಬಾಂಬ್ ದಾಳಿಗೆ ಬೋಕೋ ಹರಾಂ ಗುಂಪು ಕಾರಣವೆಂದು ನೈಜೀರಿಯಾದ ಅಧಿಕಾರಿಗಳು ಆರೋಪಿಸಿದ್ದು, ಉಳಿದ ಒತ್ತೆಯಾಳುಗಳ ಬಿಡುಗಡೆಗೆ ಮಾಹಿತಿ ನೀಡುವವರಿಗೆ 300,000 ಡಾಲರ್ ಬಹುಮಾನವನ್ನು ಘೋಷಿಸಿದ್ದಾರೆ. ಕಳೆದ ಮಂಗಳವಾರ ಬಂಧೂಕುದಾರಿಗಳು ಕಟ್ಟಡಗಳಿಗೆ ಬೆಂಕಿಹಚ್ಚಿ ಸರ್ಕಾರಿ ಬಾಲಕಿಯರ ಸೆಕೆಂಡರಿ ಶಾಲೆಯಲ್ಲಿ ಕಾವಲುಗಾರರ ಮೇಲೆ ಗುಂಡುಹಾರಿಸಿ ಶಾಲೆಯೊಳಗೆ ಪ್ರವೇಶಿಸಿದರು. ನಂತರ ನೂರಾರು ಶಾಲಾಬಾಲಕಿಯರನ್ನು ಟ್ರಕ್‌ಗಳಿಗೆ ತುಂಬಿ ಒಯ್ಯುತ್ತಿದ್ದಾಗ, ಕೆಲವು ಬಾಲಕಿಯರು ವಾಹನಗಳಿಂದ ಕೆಳಕ್ಕೆ ಹಾರಿದ್ದರು.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

ಈಕೆಗಿಲ್ಲ ಜನನಾಂಗ, ಆದರೂ ಕೂಡ ಮಗುವಿಗೆ ಜನ್ಮ ನೀಡಳಿದ್ದಾಳೆ

ದೆಹಲಿ : ಮೆಕ್ಸಿಕೋದಲ್ಲಿ ಒಬ್ಬ ಮಹಿಳೆ ಇದ್ದಾಳೆ, ಈಕೆಗೆ ಜಜನಾಂಗವೇ ಇಲ್ಲವಂತೆ. ವಿಶ್ವದಲ್ಲಿ ಜನನಾಂಗ ...

ಕನಕಪೂರದಲ್ಲಿ ಕಂಪಿಸಿದ ಭೂಮಿ

ಕನಕಪುರ: ಇಂದು ಬೆಳ್ಳಿಗ್ಗೆ ಕನಕಪುರ ತಾಲೂಕಿನಲ್ಲಿ ಭೂಮಿ ಕಂಪಿಸಿದೆ. ರಾಮನಗರ ಜಿಲ್ಲೆಯ ಕನಕಪುರದ ...

ನೀತಿ ಸಂಹಿತೆ ಉಲ್ಲಂಘಿಸಿದ ರಾಮದೇವ ಬಾಬಾ

ಫತೆಹಪುರ : ಯೋಗ ಗುರು ರಾಮದೇವರ ವಿರುದ್ದ ನೀತಿ ಸಂಹಿತೆ ಉಲ್ಲಂಘನೆಯ ಕೇಸು ದಾಖಲಾಗಿದೆ. ಉತ್ತರ ಪ್ರದೇಶದ ...

ಪಾಕಿಸ್ತಾನದಲ್ಲಿ ರಸ್ತೆ ಅಫಘಾತ: 30 ಜನರು ಸಾವು

ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿ ಸುಕುರ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಒಂದು ಟ್ರೇಲರ್ ...

Widgets Magazine