ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಖ್ಯಾತಿಯ ಹೆಸರು ಕಳೆದುಕೊಳ್ಳುವತ್ತ ಧಾರಾವಿ
ಮದರ್ ಇಂಡಿಯಾ ಖ್ಯಾತಿಯ ದಿವಂಗತ ಸುನಿಲ್ ದತ್ ಪ್ರತಿನಿಧಿಸುತ್ತಿದ್ದ ಏಷಿಯಾದ ಅತಿ ದೊಡ್ಡ ಸ್ಲಮ್ (ಕೊಳಗೇರಿ) ಇಂದು ಬದಲಾವಣೆಯ ಹಾದಿಯಲ್ಲಿ ಸಾಗುತ್ತಿದೆ. ಈಗ ಅಲ್ಲಿ ನಡೆಯುತ್ತಿರುವ ಅಭಿವೃದ್ದಿ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡಲ್ಲಿ ಏಷಿಯಾದ ಅತಿದೊಡ್ಡ ಸ್ಲಮ್ ಶೀಘ್ರದಲ್ಲಿ ತನ್ನ ಕುಖ್ಯಾತಿಯ ಹೆಸರನ್ನು ಕಳೆದುಕೊಳ್ಳಲಿದೆ.

ಸ್ಥಳೀಯ ಕಂಪನಿಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಂಪನಿಗಳು ಧಾರಾವಿ ಸ್ಲಮ್ ಅಭಿವೃದ್ದಿಗೆ ಗುತ್ತಿಗೆ ಪಡೆಯುವುದಕ್ಕೆ ಮುಗಿಬಿಳುತ್ತಿದ್ದು. ರಾಜ್ಯ ಸರಕಾರ ಕೂಡ ಹಂತ ಹಂತವಾಗಿ ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದೆ.

ಲಕ್ಷದ ಸಂಖ್ಯೆಯಲ್ಲಿ ಇರುವ ಸ್ಲಮ್ ವಾಸಿಗಳಿಗೆ ಪುನರ್ ವಸತಿ ಕಲ್ಪಿಸುವುದು ಸರಕಾರದ ಪಾಲಿಗೆ ಭಗಿರಥ ಪ್ರಯತ್ನದಂತೆ ಕಾಣುತ್ತಿದೆ. ಇದರೊಂದಿಗೆ ಕೊಳಗೇರಿ ವಾಸಿಗಳು 225 ಚದುರ ಅಡಿ ಮನೆ ಬೇಡ ಐನೂರು ಚದುರ ಅಡಿ ಮನೆಗಳನ್ನು ನೀಡಿ ಎಂದು ಕೇಳುತ್ತಿರುವುದನ್ನು ನೋಡಿದರೆ.

ಧಾರಾವಿ ಕೊಳಗೇರಿಯನ್ನು ಅಭಿವೃದ್ದಿ ಪಡೆಸುವ ನಿಟ್ಟಿನಲ್ಲಿ ಸರಕಾರ ಮತ್ತು ಕೊಳಗೇರಿ ನಿರ್ಮೂಲನಾ ಮಂಡಳಿಗಳು ಕ್ರಮ ತೆಗೆದುಕೊಳ್ಳುತ್ತಿದ್ದರೆ, ಶಿವಸೇನೆಯ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಭವ ಠಾಕ್ರೆಯವರು ಕೊಳಗೇರಿ ವಾಸಿಗಳಿಗೆ ವಾಣಿಜ್ಯ ಉಪಯೋಗಕ್ಕೆ ಸ್ಥಳ ಮತ್ತು ಇತರ ನಾಗರಿಕ ಸೌಲಭ್ಯಗಳನ್ನು ಸರಕಾರ ನೀಡಬೇಕು ಇಲ್ಲದೇ ಹೋದಲ್ಲಿ ಶಿವಸೇನೆ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿಯಾಗಿದೆ.

ಧಾರಾವಿ ಈಗ ನಿಧಾನವಾಗಿ ಬದಲಾಗುತ್ತಿದೆ. ಸುತ್ತಲಿನ ಪ್ರದೇಶಗಳಲ್ಲಿನ ಕಟ್ಟಡ ನಿರ್ಮಾಣ ಮತ್ತು ಅಭಿವೃದ್ದಿ ಕಾಮಗಾರಿಗಳಿಂದ ಏಷಿಯಾದ ಅತಿದೊಡ್ಡ ಸ್ಲಮ್ ಎಂಬ ಹೆಸರು ಅಳಿಸಿಹೋಗಲಿದೆ ಎಂದವರು ಧಾರಾವಿಯನ್ನು ಮೊದಲು ವಿಧಾನ ಸಭೆಯಲ್ಲಿ ಪ್ರತಿನಿಧಿಸುತ್ತಿದ್ದ ಎಕನಾಥ್ ಗಾಯಕವಾಡ್. ಈಗ ಅವರು ಮುಂಬೈ ವಾಯವ್ಯ ಸಂಸದೀಯ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಮತ್ತಷ್ಟು
ಹವಾಮಾನ ವೈಪರೀತ್ಯ ತಡೆಗೆ ಯೋಜನೆ
ವಲಸಿಗರ ಸಂಖ್ಯೆಯಲ್ಲಿ ಇಳಿಕೆ ಹಾಸ್ಯಾಸ್ಪದ-ಠಾಕ್ರೆ
ಹೆಚ್ಚಿನ ಡ್ರಗ್ ಸೇವನೆ ಸ್ಕಾರ್ಲೆಟ್ ಸಾವಿಗೆ ನಾಂದಿ
ಪತಿ ಬದಲಿಗೆ ಉಗ್ರರ ಬಿಡುಗಡೆ ಅಗತ್ಯವಿಲ್ಲ-ಕೌರ್
ಸೋಹಾ ಅಲಿ ಮೇಲೆ ಶಸ್ತ್ರಾಸ್ತ್ರ ಪರವಾನಗಿ ಆರೋಪ
ಜಿನ್ನಾ ಹೇಳಿಕೆ, ವಿಷಾದವಿಲ್ಲ: ಅಡ್ವಾಣಿ