ಹಣದುಬ್ಬರ ಸಮಸ್ಯೆ ಕುರಿತಂತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿಯೊಂದಿಗೆ ಕೈ ಜೋಡಿಸುವ ಸಾಧ್ಯತೆಯನ್ನು ಸಿಪಿಐ ತಳ್ಳಿ ಹಾಕಿದೆ.
ನಾವು ಬಿಜೆಪಿಯ ಜೊತೆ ಕೈ ಜೋಡಿಸಲು ಸಿದ್ದವಿಲ್ಲ. ಎನ್‌ಡಿಎ ಸರಕಾರ ಆರಂಭಿಸಿದ ವ್ಯಾಪಾರ ನಿಯಮಗಳನ್ನು ತಡೆಯುವಂತೆ ಬಿಜೆಪಿ ೆಂದಾದರೂ ಒತ್ತಾಯಿಸಿದೇಯೇ, ಎನ್‌ಡಿಎ ಸರಕಾರ ಕೂಡಾ ಹಣದುಬ್ಬರಕ್ಕೆ ಕಾರಣಿಭೂತವಾದ ಬೃಹತ್ ಚಿಲ್ಲರೆ ವಹಿವಾಟದರರನ್ನು ಬೆಂಬಲಿಸಿದೆ ಎಂದು ಸಿಪಿಐ ನಾಯಕ ಬರ್ದನ್ ತಿಳಿಸಿದ್ದಾರೆ.
ಹಣದುಬ್ಬರ ಹಾಗೂ ಅಣುಒಪ್ಪಂದ ಕುರಿತಂತೆ ಸಿಪಿಐ ಸರಕಾರಕ್ಕೆ ನೀಡದ ಬೆಂಬಲವನ್ನು ಹಿಂತೆಗೆದುಕೊಳ್ಳಲು ಸಿದ್ದವಾಗಿದೇಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಯಾವುದೇ ಹೇಳಿಕೆ ನೀಡಲು ಸಿದ್ದವಿಲ್ಲವೆಂದು ಹೇಳಿದ್ದಾರೆ.
ಹಿಮಾಲಯ ರಾಷ್ಟ್ರವಾದ ನೇಪಾಳದಲ್ಲಿ ಮಾವೋವಾದಿಗಳ ವಿಜಯದ ಬಗ್ಗೆ ಕೇಳಿದಾಗ ಸಮಯ ಬದಲಾಗುತ್ತಿದೆ ಮತದಾರರಿಗೆ ಬೇರೆ ದಾರಿ ಇಲ್ಲ. ಎಡಪಕ್ಷಗಳನ್ನು ಬಹುಮತದಿಂದ ಆರಿಸಿ ಅಧಿಕಾರ ನೀಡುವ ಸಂದರ್ಭ ಒದಗಿ ಬಂದಿದೆ ಎಂದು ಹೇಳಿದ್ದಾರೆ.
|