ಪ್ರಸಿದ್ಧ ಮರಾಠಿ ಬರಹಗಾರ್ತಿ ಮತ್ತು ಮಾಜೀ ರಾಜ್ಯಸಭಾ ಸದಸ್ಯೆ ಡಾ. ಸರೋಜಿನಿ ಬಾಬರ್ ಭಾನುವಾರದಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಮಹಾರಾಷ್ಟ್ರದ ಜಾನಪದ ಸಾಹಿತ್ಯವನ್ನು ಅಧ್ಯಯನ ಮಾಡಿರುವ ಬಾಬರ್, ನಿರ್ದಿಷ್ಟವಾಗಿ ಗ್ರಾಮೀಣ ಮಹಿಳೆಗೆ ಸಂಬಂಧಿಸಿದಂತೆ ಜಾನಪದ ಸಾಹಿತ್ಯದ ವಿವಿಧ ರೂಪಗಳ ಸಾಮಾಜಿಕ ಸಂಶೋಧನೆಯನ್ನು ಕೈಗೊಂಡಿದ್ದರು.
ಸ್ವಾತಂತ್ರ್ಯ ಹೊರಾಟ ಗಾರ್ತಿಯಾದ ಬಾಬರ್ ವಿಧಾನ ಸಭೆಯ ಸದಸ್ಯರಾಗಿ ಸಹ ನೇಮಕಗೊಂಡಿದ್ದರು ಮತ್ತು ಸಹಕಾರ ಚಳುವಳಿಯ ಪ್ರಬಲ ವ್ಯಕ್ತಿ ಹಾಗೂ ಮಹಾರಾಷ್ಟ್ರದ ಮಾಜೀ ಮುಖ್ಯ ಮಂತ್ರಿಯಾಗಿದ್ದ ವಸಂತ್‌ದಾದ ಪಾಟಿಲ್‌ರ ಆಪ್ತ ಸಹಾಯಕಿಯಾಗಿ ಕರ್ತವ್ಯನಿರ್ವಹಿಸಿದ್ದರು.
|