ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಪರಿವರ್ತಿತ ಶಾಸಕ ಅರುಣ್ ಗಾವ್ಳಿಯವರನ್ನು ಪೊಲೀಸರು ಬಂಧಿಸಿದ್ದು, ಗಾವ್ಳಿಯ ಕಿರಿಯ ಸಹೋದರ ವಿಜಯ್ ಆಹಿರ್ ಅವರನ್ನು ಕೂಡಾ ಮುಂಚಿತವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಶಾಸಕ ಅರುಣ್ ಗಾವ್ಳಿಯವರ ಪರವಾಗಿ ಸುಲಿಗೆ ನಡೆದಿರುವುದು ಖಚಿತವಾದ ಹಿನ್ನೆಲೆಯಲ್ಲಿ ಗಾವ್ಳಿಯವರನ್ನು ಬಂಧಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ತಿಳಿಸಿದ್ದಾರೆ.
ಶಾಸಕ ಅರುಣ್ ಗಾವ್ಳಿ ಬೈಕುಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಅಖಿಲ್ ಭಾರತೀಯ ಸೇನಾ ಪಕ್ಷದ ಮುಖ್ಯಸ್ಥರಾಗಿದ್ದಾರೆ.
2005ರಲ್ಲಿ ನಗರದ ನಿವಾಸಿಯಾಗಿದ್ದ ಬಿಲ್ಡರ್ ಅವರನ್ನು ಸುಲಿಗೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 26ರಂದು ಪೊಲೀಸರು ವಿಜಯ್ ಆಹಿರ್ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದಾರೆ.
|