ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾಂಸ್ಥಿಕ ಸ್ಥಾನಗಳಿಗೆ ಮುಂಡೆ ರಾಜೀನಾಮೆ
ಮಹಾರಾಷ್ಟ್ರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಗೋಪಿನಾಥ ಮುಂಡೆ ತನ್ನೆಲ್ಲಾ ಸಾಂಸ್ಥಿಕ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಪಕ್ಷದೊಳಗಿನ ಆಂತರಿಕ ಕಚ್ಚಾಟವು ಬಯಲಿಗೆ ಬಂದಿದೆ.

ಬಿಜೆಪಿಯಲ್ಲಿ ಪ್ರಜಾತಂತ್ರದ ಕೊರತೆಯ ಕಾರಣ ನೀಡಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮುಂಡೆ, ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸಲು ಆಶಿಸುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ಪಕ್ಷದಿಂದ ಯಾರನ್ನೂ ತೆಗೆದು ಹಾಕುವುದು ತನಗೆ ಬೇಕಿಲ್ಲ, ಪಕ್ಷದ ನಿರ್ಣಯ ಕೈಗೊಳ್ಳುವಿಕೆ ಪ್ರಕ್ರಿಯೆ ಉತ್ತಮಗೊಳ್ಳಬೇಕು ಎಂಬುದು ತನ್ನ ಅಭಿಲಾಷೆ. ಕಳೆದ ಒಂದೂವರೆ ವರ್ಷದಿಂದಲೂ ಇದೂ ಹೀಗಿದೆ. ಆದರೆ ನನ್ನನ್ನು ಬದಿಗೆ ತಳ್ಳಲಾಗಿದೆ"ಎಂದು ತಾನು ಹೇಳುವುದಿಲ್ಲ ಎಂದು ಮುಂಡೆ ಹೇಳಿದ್ದಾರೆ.

ಮುಂಡೆಯವರ ಕ್ರಮಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯು, ಇದೊಂದು ತಪ್ಪುತಿಳುವಳಿಕೆ ಅಷ್ಟೆ. ಅವರ ರಾಜೀನಾಮೆಯನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದೆ. ಇದು ಪಕ್ಷದ ಆಂತರಿಕ ವಿಚಾರವಾಗಿದ್ದು, ಕೂಡಲೇ ಪರಿಹರಿಸಲಾಗುವುದು ಎಂದು ಪಕ್ಷದ ವಕ್ತಾರ ಅರುಣ್ ಜೈಟ್ಲಿ ಹೇಳಿದ್ದಾರೆ.
ಮತ್ತಷ್ಟು
ಸುಲಿಗೆ ಪ್ರಕರಣ : ಶಾಸಕ ಗಾವ್ಳಿ ಬಂಧನ
ಮುಂಬೈ: ಕಾಂಗ್ರೆಸ್ ಕಾರ್ಪೋರೇಟರ್ ಹತ್ಯೆ
ಹೊಸ ಕೃಷಿಸಾಲ ಮನ್ನಾ ಇಲ್ಲ: ಪವಾರ್
ಮಾಜಿ ರಾಜ್ಯಸಭಾ ಸದಸ್ಯೆ ಸರೋಜಿನಿ ಬಾಬರ್ ನಿಧನ
ಗವರ್ನರ್‌ ಹುದ್ದಗೆ ನಿವೃತ್ತ ಕಾರ್ಯದರ್ಶಿಗಳ ಲಾಬಿ
ಘಡ್ಕರಿ, ಮುಂಡೆಗೆ ಬಿಜೆಪಿಯ ತುರ್ತು ಸಮನ್ಸ್