ರಾಜಧಾನಿ ದೆಹಲಿಯಲ್ಲಿನ ತಾಜ್‌ಮಹಲ್ ಆವರಣದೊಳಗೆ 'ಕಳ್ಳರಂತೆ ನುಸುಳಿದ್ದ' ಶಿವಸೈನಿಕರ ಗುಂಪೊಂದು ಗುರುವಾರದಂದು ಆರತಿ ಎತ್ತಿ ಪೂಜೆ ನಡೆಸಿರುವ ಘಟನೆ ನಡೆದಿದ್ದು, ಶಿವಸೈನಿಕರನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
17ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ವಿಶ್ವವಿಖ್ಯಾತ ತಾಜ್‌ಮಹಲ್ ಪುರಾತನ ಕಾಲದ ಶಿವದೇವಾಲಯವಾಗಿದೆ ಎಂಬುದು ಶಿವಸೈನಿಕರ ಆರೋಪವಾಗಿದೆ.
ಸೋಮವಾರಂದು ಕೂಡ ಶಿವಸೈನಿಕರು ಮಾರ್ಬಲ್ ಸಮಾಧಿಯ ಸಮೀಪ ನುಗ್ಗಲು ಪ್ರಯತ್ನಿಸಿದ್ದರಾದರೂ ಕೂಡ ಆ ಸಂದರ್ಭದಲ್ಲಿ ಅವರನ್ನು ತಡೆ ಹಿಡಿಯಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುರುವಾರ ಮಧ್ನಾಹ್ನ ಶಿವಸೈನಿಕ ಕಾರ್ಯಕರ್ತರು ರಕ್ಷಣಾ ಸಿಬ್ಬಂದಿಗಳ ಕಣ್ಣತಪ್ಪಿಸಿ ಕಳ್ಳರಂತೆ ಒಬ್ಬೊಬ್ಬರೇ ಒಳನುಸುಳಿ ಸ್ಮಾರಕದ ಲಾನ್ ಮೇಲೆ ಪೂಜೆ ನಡೆಸಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
|