ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಮರನಾಥ್ ಭೂವಿವಾದ: ಮಾತುಕತೆಗೆ ಸೋನಿಯಾ ಕರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮರನಾಥ್ ಭೂವಿವಾದ: ಮಾತುಕತೆಗೆ ಸೋನಿಯಾ ಕರೆ Search similar articles
ಅಮರನಾಥ ಭೂ ವಿವಾದಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಕರೆ ನೀಡಿದ್ದು, ಭೂವಿವಾದದಿಂದ ಕಳೆದ ಕೆಲವು ದಿನಗಳಿಂದ ಕ್ಷೋಭೆಗೊಂಡಿದ್ದ ಜಮ್ಮುವಿನಲ್ಲಿ ಶಾಂತಿ ಮೂಡಿಸುವಲ್ಲಿ ವಿರೋಧ ಪಕ್ಷಗಳ ಸಹಕಾರವನ್ನು ಕೋರಿದ್ದಾರೆ.

ಜಮ್ಮುವಿನ ಹದಗೆಟ್ಟ ಪರಿಸ್ಥಿತಿಯನ್ನು ಶಾಂತರೀತಿಗೆ ತರಲು ಸೋನಿಯಾಗಾಂಧಿ ರಾಜನಾಥ್ ಸಿಂಗ್ ಅವರಿಗೆ ಕರೆ ನೀಡಿರುವುದಾಗಿ ಬಿಜೆಪಿ ಮೂಲಗಳು ತಿಳಿಸಿವೆ.

ಅಮರನಾಥ ಮಂಡಳಿಗೆ ಮಂಜೂರಾಗಿದ್ದ ಭೂಮಿಯ ಹಿಂತೆಗೆತದ ವಿರುದ್ಧ ನಡೆಯುತ್ತಿರುವ ಭಾರೀ ಪ್ರತಿಭಟನೆಯನ್ನು ನಿಯಂತ್ರಿಸಲು ಸರಕಾರವು ಉಪಕ್ರಮಗಳನ್ನು ಆರಂಭಿಸಲಾಗುವುದು ಎಂಬುದಾಗಿ ಪ್ರಧಾನಿ ಸಿಂಗ್, ಸೋನಿಯಾಗಾಂಧಿಯವರಿಗೆ ತಿಳಿಸಿದ್ದಾರೆ.

ಅಮರನಾಥ್ ದೇವಾಲಯಕ್ಕೆ ನೀಡಲಾಗಿದ್ದ 100 ಎಕರೆ ಭೂಮಿಯನ್ನು ದೇವಾಲಯಕ್ಕೆ ಹಿಂತಿರುಗಿಸುವಂತೆ ಬಿಜೆಪಿಯು ಆಗ್ರಹಿಸುತ್ತಿದ್ದು, ಇದಕ್ಕಾಗಿ ಅಮರನಾಥ್ ಸಂಘರ್ಷ ಸಮಿತಿಯ ಬೆಂಬಲವನ್ನೂ ಪಡೆದುಕೊಳ್ಳುತ್ತಿದೆ.

ಕಳೆದ ವಾರ, ಈ ಕುರಿತು ಮಾತುಕತೆ ನಡೆಸಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್, ವಿರೋಧ ಪಕ್ಷದ ನಾಯಕ ಎಲ್.ಕೆ.ಆಡ್ವಾಣಿ ಅವರನ್ನು ಆಮಂತ್ರಿಸಿದ್ದರು.
ಮತ್ತಷ್ಟು
ಹಿಮಾಚಲ ಪ್ರದೇಶ ಕಾಲ್ತುಳಿತ: ಸಾವಿನ ಸಂಖ್ಯೆ 145
ಅಮರನಾಥ್- ಮಾಧ್ಯಮಗಳ ವಿರುದ್ದ ಸೇನೆ ಅಕ್ರೋಶ
ನೈನಾ ದೇವಿ ಮಂದಿರದಲ್ಲಿ ಕಾಲ್ತುಳಿತ: 100 ಭಕ್ತರ ಸಾವು
ಸಚಿವ ಅರ್ಜುನ್‌ಸಿಂಗ್ ಆಸ್ಪತ್ರೆಗೆ ದಾಖಲು
ಟ್ರಕ್ ದುರಂತದಲ್ಲಿ ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಜಮ್ಮುವಿನಲ್ಲಿ ಉಮಾಭಾರತಿ ಬಂಧನ