ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಆಶ್ರಮ ವಿದ್ಯಾರ್ಥಿಗಳ ಸಾವು: ರಿತುರಾಜ್ ಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಶ್ರಮ ವಿದ್ಯಾರ್ಥಿಗಳ ಸಾವು: ರಿತುರಾಜ್ ಬಂಧನ Search similar articles
ಚಿಂದ್ವಾರದಲ್ಲಿರುವ ಧರ್ಮಗುರು ಅಸರಾಂ ಬಾಪು ಆಶ್ರಮದ ಆಧೀನದಲ್ಲಿರುವ ಹಾಸ್ಟೆಲ್‌ನಲ್ಲಿ ಎರಡು ಶಾಲಾಮಕ್ಕಳ ಸಾವಿಗೆ, ಮನೆಗೀಳಿನ ಸಮಸ್ಯೆಯನ್ನು ಹೊಂದಿದ್ದ 14 ವರ್ಷದ ವಿದ್ಯಾರ್ಥಿ ಕಾರಣ ಎಂದು ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

ದಿನೇಶ್ ಸಿಂಗ್ ಅವರ ಪುತ್ರನಾದ ರಿತುರಾಜ್ ಸಿಂಗ್ ದೀಕ್ಷಿತ್‌ನ್ನು 20 ದಿನಗಳ ಹಿಂದೆ ಈ ಶಾಲೆಗೆ ಸೇರಿಸಲಾಗಿತ್ತು. ಈತನನ್ನು ಅಪರಾಧಿಯೆಂದು ಕಂಡುಕೊಳ್ಳಲಾಗಿದೆ ಎಂದು ಪೊಲೀಸ್ ಪ್ರಧಾನ ಇನ್ಸ್ಪೆಕ್ಟರ್ ಎಂ.ಆರ್ ಕೃಷ್ಣನ್ ತಿಳಿಸಿದ್ದಾರೆ. ಈತನನ್ನು ಪೊಲೀಸರು ಬಂಧಿಸಿದ್ದಾರೆ.

ರಿತುರಾಜ್ ತುಂಬಾ ಸ್ಥೂಲಕಾಯದವನಾಗಿದ್ದನು ಮತ್ತು ಇದಕ್ಕಾಗಿ ಇತರ ವಿದ್ಯಾರ್ಥಿಗಳು ಈತನನ್ನು ಅಪಹಾಸ್ಯ ಮಾಡುತ್ತಿದ್ದರು. ಈ ಕಾರಣದಿಂದ ಬೇಸರಗೊಂಡಿದ್ದ ರಿತುರಾಜ್ ಮನೆಗೆ ಹೋಗಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ರಿತುರಾಜ್ ಪೋಷಕರನ್ನು ಅತ್ಯಂತ ಹಚ್ಚಿಕೊಂಡಿದ್ದು, ಮನೆಯಿಂದ ದೂರ ಉಳಿಯುವುದು ಆತನಿಗೆ ಇಷ್ಟವಿರಲಿಲ್ಲ. ಇದು ಈತನ ಮನಗೆ ಹೋಗುವ ಹಂಬಲಕ್ಕೆ ಇನ್ನೊಂದು ಕಾರಣವಾಗಿದೆ.

ಈ ಹಂಬಲವು ಶಾಲೆಯ ಎರಡು ವಿದ್ಯಾರ್ಥಿಗಳನ್ನು ಹತ್ಯೆಗೈಯಲು ಪ್ರಚೋದನೆ ನೀಡಿದ್ದು, ವಿದ್ಯಾರ್ಥಿಗಳ ಸಾವಿನಿಂದ ಶಾಲೆಗೆ ರಜೆಸಾರುವ ಕಾರಣ ತಾನು ಮನೆಗೆ ಹೋಗಬಹುದು ಎಂಬುದು ಈತನ ಯೋಚನೆಯಾಗಿತ್ತು ಎಂದು ಕೃಷ್ಣ ಹೇಳಿದ್ದಾರೆ.

ಗುರುವಾರ ಮೃತಪಟ್ಟ ವೇದಾಂತ‌ನ ದೇಹದಲ್ಲಿ ಹೊಡೆತದ ಗುರುತುಗಳು ಕಂಡುಬಂದಿದ್ದು, ಇದು ಅಪರಾಧಿಯನ್ನು ಪತ್ತೆಹಚ್ಚಲು ಸಹಾಯವಾಯಿತು ಎಂದು ಅವರು ಹೇಳಿದ್ದಾರೆ.

ಇದರೊಂದಿಗೆ, ರಿತುರಾಜ್‌ನ ಹಲ್ಲು ಗುರುತನ್ನು ತೆಗೆದುಕೊಂಡಿದ್ದು, ಇದು ಸಾವೀಗೀಡಾದ ಮಗುವಿನ ದೇಹದಲ್ಲಿನ ಗಾಯಕ್ಕೆ ಸಾಮ್ಯತೆಯಾಗಿತ್ತು. ನಂತರ ತೀವ್ರ ವಿಚಾರಣೆಯ ನಂತರ, ರಿತುರಾಜ್ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆಸರಾಂ ಬಾಪು ಅವರ ನಿಯಂತ್ರಣದ ಗುರುಕುಲದ ಬಾತ್‌ರೂಂನಲ್ಲಿ ಐದು ವರ್ಷ ಪ್ರಾಯದ ವೇದಾಂತ್ ಗುರುವಾರ ಪ್ರಜ್ಞೆಯಿಲ್ಲದೆ ಬಿದ್ದಿದ್ದ. ಮಂಗಳವಾರ ಸಂಜೆ ಐದು ವರ್ಷ ಪ್ರಾಯದ ಮೋಹನ್ ಯಾದವ್ ಇದೇ ಸ್ಥಿತಿಯಲ್ಲಿ ಶಾಲೆಯಲ್ಲಿ ಕಂಡುಬಂದಿದ್ದ.
ಮತ್ತಷ್ಟು
ಅಮರನಾಥ್ ಭೂವಿವಾದ: ಮಾತುಕತೆಗೆ ಸೋನಿಯಾ ಕರೆ
ರಾಜೀವ್ ಗಾಂಧಿ ಹತ್ಯೆ: ನಳಿನಿ ಪಶ್ಚಾತ್ತಾಪ
ಹಿಮಾಚಲ ಪ್ರದೇಶ ಕಾಲ್ತುಳಿತ: ಸಾವಿನ ಸಂಖ್ಯೆ 145
ಅಮರನಾಥ್- ಮಾಧ್ಯಮಗಳ ವಿರುದ್ದ ಸೇನೆ ಅಕ್ರೋಶ
ನೈನಾ ದೇವಿ ಮಂದಿರದಲ್ಲಿ ಕಾಲ್ತುಳಿತ: 100 ಭಕ್ತರ ಸಾವು
ಸಚಿವ ಅರ್ಜುನ್‌ಸಿಂಗ್ ಆಸ್ಪತ್ರೆಗೆ ದಾಖಲು