ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಮಾಹಿತಿ ಪ್ರಸಾರ ಖಾತೆ ಪ್ರಧಾನಿ ತೆಕ್ಕೆಗೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾಹಿತಿ ಪ್ರಸಾರ ಖಾತೆ ಪ್ರಧಾನಿ ತೆಕ್ಕೆಗೆ
ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್‌ಮುನ್ಶಿ ತೀವ್ರ ಅಸ್ವಸ್ಥರಾಗಿರುವ ಕಾರಣ ಅವರ ವಶದಲ್ಲಿದ್ದ ಖಾತೆಯ ಜವಾಬ್ದಾರಿಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ವಹಿಸಲಾಗಿದೆ. ದಾಸ್‌ಮುನ್ಶಿ ಅವರು ಸಚಿವರಾಗಿ ಮುಂದುವರಿಯಲಿದ್ದಾರೆ.

ದಾಸ್‌ಮುನ್ಶಿ ಅವರು ಕಚೇರಿಗೆ ಮರಳುವ ತನಕ ಮಾಹಿತಿ ಮತ್ತು ಪ್ರಸಾರ ಖಾತೆಯ ಜವಾಬ್ದಾರಿಯನ್ನು ಪ್ರಧಾನಿಯವರು ವಹಿಸಿಕೊಳ್ಳವಂತೆ, ಪ್ರಧಾನ ಮಂತ್ರಿಯವರ ಸಲಹೆಯ ಮೇರೆಗೆ ರಾಷ್ಟ್ರಪತಿಯವರು ನಿರ್ದೇಶನ ನೀಡಿರುವುದಾಗಿ ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.

ದಾಸ್‌ಮುನ್ಶಿ ಅವರು ಖಾತೆ ರಹಿತ ಸಚಿವರಾಗಿ ಸಂಪುಟದಲ್ಲಿ ಮುಂದುವರಿಯಲಿದ್ದಾರೆ ಎಂದೂ ಹೇಳಿಕೆ ತಿಳಿಸಿದೆ.

ತೀವ್ರ ಅಸ್ವಸ್ಥರಾಗಿರುವ ದಾಸ್‌ಮುನ್ಶಿ ಅವರು ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಕ್ಟೋಬರ್ 13ರಂದು ಅವರನ್ನು ಎಐಐಎಂಎಸ್‌ಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು ಅಪೊಲೋ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಅವರಿಗೆ ಕೃತಕ ಉಸಿರಾಟ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಜುಲೈ ಆರರಂದು ಸಭೆಯೊಂದರಲ್ಲಿ ಪಾಲ್ಗೊಂಡ ಬಳಿಕ ಮಲ್ದಾದಿಂದ ಕೊಲ್ಕತಾಗೆ ತೆರಳುವ ಹಾದಿಯಲ್ಲಿ ಅವರಿಗೆ ಹೃದಯಾಘಾತ ಉಂಟಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸ್ಫೋಟ: ಸರ್ಕಾರ ಉಲ್ಫಾ ಅಂದರೆ, ಉಲ್ಫಾ ಆರೆಸ್ಸೆಸ್ ಅನ್ನುತ್ತಿದೆ
ಮುಂಬೈ ಕಟ್ಟಡ ಕುಸಿತ: 6 ಮಂದಿ ಸಾವಿನ ಶಂಕೆ
ಮಾರ್ಗರೆಟ್ ಆಕ್ರೋಶ: ಕಾಂಗ್ರೆಸ್ ಇಬ್ಭಾಗ
ಚಂದ್ರನ ಮತ್ತಷ್ಟು ಸಮೀಪಕ್ಕೆ ಚಂದ್ರಯಾನ-1
ನಿತೀಶ್ ರಾಜೀನಾಮೆ ನೀಡಲಿ: ಲಾಲೂ ಸವಾಲು
ಆಳ್ವಾ ವಿರುದ್ಧ ಶಿಸ್ತು ಕ್ರಮ: ಮೊಯ್ಲಿ