ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಜುಹೂ ಪಾರ್ಟಿಯಲ್ಲಿ 109 ಮಂದಿ ಡ್ರಗ್ ಸೇವನೆ: ವರದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜುಹೂ ಪಾರ್ಟಿಯಲ್ಲಿ 109 ಮಂದಿ ಡ್ರಗ್ ಸೇವನೆ: ವರದಿ
ಜುಹುವಿನಲ್ಲಿ ಅಕ್ಟೋಬರ್ ಐದರಂದು ದೊಡ್ಡ ಕ್ಲಬ್ ಒಂದು ನಡೆಸಿದ್ದ ರೇವ್ ಪಾರ್ಟಿಯಲ್ಲಿ ಬಂಧನಕ್ಕೀಡಾಗಿದ್ದವರಲ್ಲಿ 109ಕ್ಕೂ ಅಧಿಕ ಮಂದಿ ಮಾದಕ ದ್ರವ್ಯ ಸೇವಿಸಿದ್ದರು ಎಂಬುದಾಗಿ ದ್ರವ್ಯಸೇವನಾ ಪರಿಕ್ಷಾ ವರದಿ ತಿಳಿಸಿದೆ.

ನಂಗಾನಾಚ್ ರೇವ್‌ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು 231 ಮಂದಿಯನ್ನು ಮಾದಕ ದ್ರವ್ಯ ಸೇವನೆಗಾಗಿ ಬಂಧಿಸಿದ್ದರು. "ಇವರದಲ್ಲಿ 109 ಮಂದಿ ಮಾದಕ ದ್ರವ್ಯ ಸೇವಿಸಿರುವುದಾಗಿ ಪರೀಕ್ಷಾ ಫಲಿತಾಂಶ ತಿಳಿಸಿದೆ. ನಾವಿವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಯ್ಯಲಿದ್ದೇವೆ. ಆವರು ಆರು ತಿಂಗಳಕಾಲ ಶಿಕ್ಷೆ ಅನುಭವಿಸಬಹುದಾಗಿದೆ" ಎಂದು ಮುಂಬೈ ಡಿಸಿಪಿ ವಿಶ್ವಾಸ್ ನಗ್ರೆ ಹೇಳಿದ್ದಾರೆ.

ಕಳೆದ ತಿಂಗಳು ಜುಹುವಿನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ 100ಕ್ಕಿಂತಲೂ ಅಧಿಕ ಯವಕ-ಯವತಿಯರನ್ನು ಬಂಧಿಸಲಾಗಿತ್ತು. ಇದರಲ್ಲಿ ಮಾದಕ ದ್ರವ್ಯ ಸೇವನಾ ಪರೀಕ್ಷೆಯಲ್ಲಿ, ದ್ರವ್ಯ ಸೇವನೆ ಸಾಬೀತಾದವರ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಪೂನಾದಲ್ಲಿ ಸುಮಾರು 271 ಮಂದಿಯನ್ನು ಬಂಧಿಸಲಾಗಿತ್ತು. ಇಲ್ಲಿಂದ ಮರಿಜುವಾನ ಮತ್ತು ಹಶಿಸ್ ಸೇರಿದಂತೆ ದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿತ್ತು. ಇಲ್ಲಿ ಬಂಧನಕ್ಕೀಡಾದವರಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದ್ದು ಬಳಿಕ ಬಿಡುಗಡೆ ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಿಸ್ಟರ್ ಅಭಯ ಕೊಲೆ: ಇಬ್ಬರು ಪಾದ್ರಿಗಳ ಸೆರೆ
ಹಿಂದೂ ವ್ಯಕ್ತಿ ಕಾಪಾಡಿದ: ಅತ್ಯಾಚಾರಕ್ಕೊಳಗಾದ ಒರಿಸ್ಸಾ ಸನ್ಯಾಸಿನಿ
ಆರೆಸ್ಸೆಸ್, ಬಜರಂಗದಳ ಉಗ್ರವಾದಿ ಸಂಘಟನೆಗಳಲ್ಲ: ಬ್ರಿಟನ್
ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಲಿ: ರಾಹುಲ್
ಇಂದಿರಾ ಗಾಂಧಿ 91ನೆ ಜಯಂತಿ
ಮಹಾರಾಷ್ಟ್ರದಲ್ಲಿ 90% ಹುದ್ದೆ ಹೊಂದಿರುವ ಸ್ಥಳೀಯರು