ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ನಾಯಿ'ಗೆ ಕ್ಷಮೆಯಾಚಿಸಿದ ಅಚ್ಯುತಾನಂದನ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನಾಯಿ'ಗೆ ಕ್ಷಮೆಯಾಚಿಸಿದ ಅಚ್ಯುತಾನಂದನ್
ಮುಂಬೈ ದಾಳಿಗಿಂತಲೂ ಹೆಚ್ಚಿನ ಸದ್ದು ಮಾಡಿದ್ದ, ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ಅವರ 'ನಾಯಿ' ಹೇಳಿಕೆಯ ಸದ್ದಡಗುವ ಕಾಲ ಸನ್ನಿಹಿತವಾಗಿದೆ.

ಅಚ್ಯುತಾನಂದನ್ ಅವರು ಕೊನೆಗೂ ಕ್ಷಮೆಯಾಚಿಸಿದ್ದಾರೆ. ಬುಧವಾರ ಕೇರಳ ವಿಧಾನಸಭಾ ಅಧಿವೇಶನದಲ್ಲಿ ಶೂನ್ಯ ಅವಧಿಯಲ್ಲಿ ಈ ವಿಷಯವನ್ನು ಯುಡಿಎಫ್ ಸದಸ್ಯರು ಎತ್ತಿದ ವೇಳೆ ಅವರು ಕ್ಷಮೆಯಾಚಿಸಿದರು. ತನ್ನ ಹೇಳಿಕೆಗೆ ತೀವ್ರವಾಗಿ ವಿಶಾದಿಸುವುದಾಗಿ ಅವರು ನುಡಿದರು.

'ನನ್ನ ಹೇಳಿಕೆಯಿಂದ ಮೇಜರ್ ಉನ್ನಿಕೃಷ್ಣನ್ ಕುಟುಂಬಕ್ಕೆ ನೋವಾಗಿದ್ದಲ್ಲಿ ಕ್ಷಮೆಯಾಚಿಸುತ್ತೇನೆ" ಎಂದು ಅವರು ನುಡಿದರು.

ಬುಧವಾರ ಮುಂಜಾನೆಯಷ್ಟೆ ಅವರು ತನ್ನ ಹೇಳಿಕೆಗಳನ್ನು ಮಾಧ್ಯಮಗಳು ತಿರುಚಿವೆ ಎಂದು ವಿವಾದಕ್ಕೆ ಮತ್ತಷ್ಟು ಇಂಧನ ಸುರಿಯಲು ಯತ್ನಿಸಿದ್ದರು.

ಆದರೆ, ಎಲ್ಲೆಡೆಯಿಂದ ತೀವ್ರ ಒತ್ತಡ ಎದುರಿಸಿದ್ದ ಅವರೀಗ ಕ್ಷಮೆ ಯಾಚನೆಸಿದ್ದಾರೆ. ತಾನು ಮತ್ತು ತನ್ನ ಸಹೋದ್ಯೋಗಿ ಕೊಡಿಯೇರಿ ಬಾಲಕೃಷ್ಣನ್ ಅವರುಗಳು ರಾಜ್ಯವನ್ನು ಪ್ರತಿನಿಧಿಸಿದ್ದಾಗಿ ನುಡಿದ ಅಚ್ಯುತಾನಂದನ್, ಮೃತ ಸಂದೀಪ್ ಮತ್ತು ಅವರ ಕುಟುಂಬದ ಮೇಲೆ ಗೌರವ ಹೊಂದಿರುವುದಾಗಿ ಹೇಳಿದ್ದಾರೆ.

ಮುಂಬೈಯಲ್ಲಿ ದಾಳಿನಡೆಸಿದ್ದ ಉಗ್ರರೊಂದಿಗೆ ಹೋರಾಡುವ ವೇಳೆ ಪ್ರಾಣಕಳೆದುಕೊಂಡ ಯೋಧ ಸಂದೀಪ್ ಕುಟುಂಬಕ್ಕೆ ಸಂತಾಪ ಸೂಚಿಸಲು ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್, ಗೃಹಸಚಿವ ಕೊಡಿಯೆರಿ ಬಾಲಕೃಷ್ಣನ್ ಅವರೊಂದಿಗೆ ಆಗಮಿಸಿದ್ದ ವೇಳೆ, ಸಂದೀಪ್ ತಂದೆ ಉನ್ನಿಕೃಷ್ಣನ್ ತನ್ನಮನೆಯ ಬಾಗಿಲು ಹಾಕಿ, ಜಾಗ ಖಾಲಿಮಾಡುವಂತೆ ಹೇಳಿದ್ದರು.

ಇದರಿಂದ ಕ್ರೋಧಗೊಂಡ ಅಚ್ಯುತಾನಂದನ್, ಅದು ಮೇಜರ್ ಸಂದೀಪ್‌ನ ಮನೆಯಲ್ಲದಿದ್ದರೆ, ಅತ್ತ ಒಂದು ನಾಯಿಯೂ ತಿರುಗಿನೋಡುತ್ತಿರಲಿಲ್ಲ ಎಂಬ ಪ್ರತಿಕ್ರಿಯೆ ನೀಡಿ ತೀವ್ರ ಖಂಡನೆಗೀಡಾಗಿದ್ದರು.

ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
'ನಾಯಿ' ಹೇಳಿಕೆಗೆ ವಿಕ್ಷಿಪ್ತ ಪ್ರತಿಭಟನೆ
ಮಾಧ್ಯಮಗಳ ಮೇಲೆ ಅಚ್ಯುತಾನಂದನ್ ಗೂಬೆ
ಕೋಟ್ಯಂತರ ಜನತೆಯ ಜೀವಕ್ಕಿಲ್ಲಿ 'ಬೆಲೆ' ಕಮ್ಮಿ!
ಅಚ್ಯುತಾನಂದನ್ ಹೇಳಿಕೆಗೆ ಕಾರಟ್ ಕ್ಷಮೆ ಯಾಚನೆ
ಪಾಕ್ ವಿರುದ್ಧ ಸೇನಾಕಾರ್ಯಾಚರಣೆ ತಳ್ಳಿಹಾಕುವಂತಿಲ್ಲ: ಭಾರತ
ನಾನು ರಾಜಕಾರಣಿಗಳ ವಿರೋಧಿಯಲ್ಲ: ಉನ್ನಿಕೃಷ್ಣನ್