ಮಂಗಳವಾರ ಇಲ್ಲಿನ ಮೋಕಾ(ಸಂಘಟಿತ ಕಾಯ್ದೆಗಳಿಗೆ ಮಹಾರಾಷ್ಟ್ರ ಕಾಯ್ದೆ) ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುವ ಮಾಲೆಗಾಂವ್ ಸ್ಫೋಟ ಆರೋಪಿ ಲೆಫ್ಟಿನೆಂಟ್ ಕರ್ನಲ್ ಶ್ರೀಕಾಂತ್ ಪುರೋಹಿತ್ ಅವರನ್ನು ಡಿಸೆಂಬರ್ 18ರ ತನಕ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಕುರ್ಲಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ಈ ಸಂಬಂಧ ಆದೇಶ ನೀಡಿದ್ದಾರೆ. ಪುರೋಹಿತ್ ಅವರು ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಮಾತುಂಗ ಪೊಲೀಸ್ ವಶದಲ್ಲಿದ್ದಾರೆ.
ಈ ಮಧ್ಯೆ, ವಿಶೇಷ ಮೋಕಾ ನ್ಯಾಯಾಲಯವು ಇನ್ನೋರ್ವ ಮಾಲೆಗಾಂವ್ ಸ್ಫೋಟ ಆರೋಪಿ ಅಜಯ್ ರಾಹಿರ್‌ಕಾರ್ ಪೊಲೀಸ್ ಕಸ್ಟಡಿಯನ್ನು ಡಿಸೆಂಬರ್ 20ರ ತನಕ ವಿಸ್ತರಿಸಲಾಗಿದೆ. |