ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ವರಾಹ ಪ್ರದಕ್ಷಿಣೆಗೆ ಮೆದುಳಿನ ಖಾಯಿಲೆ ಕಾರಣ: ಪಶುವೈದ್ಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರಾಹ ಪ್ರದಕ್ಷಿಣೆಗೆ ಮೆದುಳಿನ ಖಾಯಿಲೆ ಕಾರಣ: ಪಶುವೈದ್ಯ
ಆಂಧ್ರ ಪ್ರದೇಶದ ಪೆನುಗೊಂಡ ಜಿಲ್ಲೆಯ ಪಶ್ಚಿಮಗೋದಾವರಿ ತಟದಲ್ಲಿರುವ ಸಿದ್ದಾಂತಂ ಎಂಬ ಗ್ರಾಮದಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ನಿರಂತರ ಪ್ರದರ್ಶನ ಹಾಕುತ್ತಿರುವ ಹಂದಿ ಎನ್‌ಸಪೋಲೋ ಮೆನಿಜೈಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿದೆ ಎಂದು ಪಶುವೈದ್ಯರು ಹೇಳಿದ್ದಾರೆ.

ನಿರಂತರ ಪ್ರದಕ್ಷಿಣೆಯಿಂದ ಸುಸ್ತಾಗಿ ಬಿದ್ದಿದ್ದ ವರಾಹವನ್ನು ಚಿಕಿತ್ಸೆಗಾಗಿ ಒಯ್ದಿದ್ದು, ಇದಕ್ಕೆ ಚಿಕಿತ್ಸೆ ನೀಡಿರುವ ಪಶುವೈದ್ಯ ಡಾ| ಸುಧಾಕರ ಅವರು ಇದು ಮೆದುಳಿನ ಖಾಯಿಲೆಯಿಂದ ಬಳಲುತ್ತಿರುವ ಕಾರಣ ನಿರಂತರ ಸುತ್ತು ಹಾಕುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಇದು ಹೆಚ್ಚೆಂದರೆ ಇನ್ನೆರಡು ದಿನ ಬದುಕಬಹುದು ಎಂದೂ ತಿಳಿಸಿದ್ದಾರೆ.

ಆದರೆ ಭಕ್ತರು ದೇವಾಲಯದಲ್ಲಿ ಜಮಾಯಿಸಿದ್ದು ವರಾಹ ದರ್ಶನಕ್ಕೆ ಹಾತೋರೆಯುತ್ತಿದ್ದಾರೆ. ಗುಂಪುಚದುರಿಸಲು ಪೊಲೀಸರು ಲಾಠಿ ಚಾರ್ಚ್ ನಡೆಸಿದ ಘಟನೆಯೂ ಸಂಭವಿಸಿದೆ. ಒಂದೊಮ್ಮೆ ಹಂದಿ ತೀರಿಕೊಂಡರೆ, ದೇವಾಲಯವನ್ನು ಪುನರ್ ನಿರ್ಮಿಸಿ ದೇವಾಲಯಕ್ಕೆ ವರಾಹ ವೆಂಕಟೇಶ್ವರ ದೇವಾಲಯವೆಂದು ಮರು ನಾಮಕರಣ ಮಾಡಲೂ ಊರಿನವರು ಮುಂದಾಗಿದ್ದಾರೆ.

ಘಟನೆಯ ಹಿನ್ನೆಲೆ
ಇತರ ಹಂದಿಗಳೊಂದಿಗೆ ಗುಂಪಿನಲ್ಲಿ ತೆರಳುತ್ತಿದ್ದ ಬಡಕಲು ದೇಹದ ಬಿಳಿಯ ಬಣ್ಣದ ಹಂದಿಯೊಂದು ಗುಂಪಿನಿಂದ ತಪ್ಪಿಸಿಕೊಂಡು ದೇವಾಲಯದತ್ತ ತೆರಳಿ ಪ್ರದಕ್ಷಿಣೆ ಹಾಕಲಾರಂಭಿಸಿತ್ತು. ದೇವಾಲಯಕ್ಕೆ ತೆರಳುವ ಮುನ್ನ ಗೋದಾವರಿ ನದಿಯಲ್ಲಿ ಮುಳುಗಿ ದೇವಾಲಯದತ್ತ ತೆರಳಿ ದೇವಾಲಯಕ್ಕೆ ಸುತ್ತುಬರುತ್ತಿರುವ ದೃಶ್ಯವು ದೂರದರ್ಶನ ವಾಹಿನಿಗಳಲ್ಲಿ ಬಿತ್ತರವಾಗುತ್ತಿದೆ.

ಈ ವಿಸ್ಮಯಕಾರಿ ಸುದ್ದಿಯು ಬಾಯಿಂದ ಬಾಯಿಗೆ ಹಬ್ಬಿದ್ದು, ದೇವಾಲಯದಲ್ಲೀಗ ಜನರ ಜಾತ್ರೆಯೇ ನೆರೆಯುತ್ತಿದೆ.

ಗುಂಪಿನಿಂದ ತಪ್ಪಿಸಿಕೊಂಡಿರುವ ಈ ಸೂಕರವನ್ನು ಮತ್ತೆ ಮಾಲಿಕರಿಗೆ ಒಪ್ಪಿಸಿದರೂ, ಅಲ್ಲಿಂದ ಮತ್ತೆಮತ್ತೆ ತಪ್ಪಿಸಿಕೊಂಡು ಅದು ದೇವಾಲಯದತ್ತಲೇ ಮರಳುತ್ತದೆ. ಅದನ್ನು ಯಾರಾದರೂ ಮುಟ್ಟಿದರೆ ಮತ್ತೆ ನದಿಗೆ ತೆರಳಿ ಮುಳುಗೆದ್ದು ಬರುತ್ತಿರುವುದು ಜನತೆಯಲ್ಲಿ ಕುತೂಹಲ ಮೂಡಿಸಿದೆ.

ದೇವಾಲಯದ ಗರ್ಭಗುಡಿಯ ಹೊರಭಾಗದ ಅಂಗಣದಲ್ಲಿ ಬಾಲಅಲ್ಲಾಡಿಸುತ್ತಾ ಮತ್ತೆತ್ತಲೂ ತೆರಳದೆ, ದೃಷ್ಟಿಹರಿಸದೆ ಈ ಹಂದಿ ಪ್ರದಕ್ಷಿಣೆ ಬರುತ್ತಿರುವುದು ಭಕ್ತರಲ್ಲಿ ಇದು ವಿಷ್ಣುವಿನ ಅವತಾರವೇನೋ ಎಂಬ ಭಾವ ಮೂಡಿಸಿದೆ. ಭಕ್ತರು ಈ ಹಂದಿಗೆ ಅರಶಿನ ಕುಂಕುಮ ಹಚ್ಚಿ ಪೂಜೆ ಸಲ್ಲಿಸಿ ನಮಸ್ಕರಿಸುತ್ತಿದ್ದಾರೆ.

ಪ್ರಜ್ಞೆ ತಪ್ಪಿದ ಹಂದಿಗೆ ಹಾಲು, ಗ್ಲೂಕೋಸ್ ಕುಡಿಸಿ ಚಿಕಿತ್ಸೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉದ್ದೇಶಿತ ಮಸೂದೆ ನಿರೀಕ್ಷಿತ ಮಟ್ಟಕ್ಕಿಲ್ಲ: ಬಿಜೆಪಿ
ಮಾಲೆಗಾಂವ್ ಆರೋಪಿ ಪುರೋಹಿತ್‌ ನ್ಯಾಯಾಂಗ ವಶಕ್ಕೆ
ಲೋಕಸಭೆಯೆಲ್ಲಿ ಎನ್ಐಎ ಮಸೂದೆ ಮಂಡನೆ
ದೇವಬಂದ್ ಕುರಿತ ಪಾಕ್‌ ಹೇಳಿಕೆಗೆ ಭಾರತ ವಿಷಾದ
ವೋಟಿಗಾಗಿ ನೋಟು: ತನಿಖೆಗೆ ಚಟರ್ಜಿ ಶಿಫಾರಸ್ಸು
ಮಾತು ಸಾಕು, ಮಾಡಿ ತೋರಿಸಿ: ಪಾಕಿಗೆ ಪ್ರಣಬ್