ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > 'ಯುದ್ಧೋನ್ಮಾದ ಸೃಷ್ಟಿಸುತ್ತಿರುವುದು ಭಾರತ, ಪಾಕಿಸ್ತಾನವಲ್ಲ'
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಯುದ್ಧೋನ್ಮಾದ ಸೃಷ್ಟಿಸುತ್ತಿರುವುದು ಭಾರತ, ಪಾಕಿಸ್ತಾನವಲ್ಲ'
ಪಾಕಿಸ್ತಾನ ತನ್ನ ಸೇನಾಪಡೆಗಳನ್ನು ಗಡಿರೇಖೆಯ ಬಳಿ ಅಣಿಗೊಳಿಸಿ, ತಮ್ಮ ಯೋಧರ ರಜೆಗಳನ್ನು ರದ್ದುಗೊಳಿಸುವ ಮೂಲಕ ಯುದ್ಧೋನ್ಮಾದ ಹುಟ್ಟಿಸುತ್ತಿದೆ ಮತ್ತು ಮುಂಬಯಿ ದಾಳಿಯ ಕಡೆಯಿಂದ ಗಮನವನ್ನು ಬೇರೆಡೆ ಹೊರಳಿಸಲು ಪ್ರಯತ್ನಿಸುತ್ತಿದೆ ಎಂದು ಭಾರತ ಶುಕ್ರವಾರ ಅಪಾದಿಸಿದೆ.

"ಪಾಕಿಸ್ತಾನಿ ಮಿತ್ರರಲ್ಲಿ ನನ್ನ ಮನವಿಯೆಂದರೆ, ನಿಜವಾದ ವಿಷಯದಿಂದ ಗಮನವನ್ನು ಬೇರೆಡೆ ಹೊರಳಿಸಲು ಪ್ರಯತ್ನಿಸುವ ಬದಲು ಅವರು ಉಗ್ರವಾದವನ್ನು ಹೇಗೆ ಮಟ್ಟಹಾಕಬೇಕೆಂಬುದರ ಬಗ್ಗೆ ಮತ್ತು ಮುಂಬಯಿ ದಾಳಿ ಸಂಘಟಿಸಿದವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸುವ ಬಗ್ಗೆ ಹೆಚ್ಚಿನ ಗಮನ ನೀಡಬೇಕು" ಎಂದು ಭಾರತದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದರು.

ಪಾಕಿಸ್ತಾನ ಜವಾಬ್ದಾರಿಯುತವಾಗಿ ವರ್ತಿಸುತ್ತಿದೆಯೇ ಎಂದು ಯುಕೆಗೆ ಪಾಕಿಸ್ತಾನದ ಹೈಕಮಿಷರ್ ಮತ್ತು ಪಾಕ್ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ ಅವರ ಸಲಹಾಗಾರರಾಗಿರುವ ವಾಜಿದ್ ಶಂಶುಲ್ಲಾ ಹಸನ್ ಅವರಲ್ಲಿ ಪ್ರಶ್ನಿಸಿದಾಗ, ಅವರು ಯುದ್ಧೋನ್ಮಾದ ಸೃಷ್ಟಿಸುತ್ತಿರುವುದು ಭಾರತ ಹೊರತಾಗಿ ಪಾಕಿಸ್ತಾನವಲ್ಲ ಎಂದುತ್ತರಿಸಿದ್ದಾರೆ.

"ಇದು ತನ್ನಲ್ಲೇ ತಪ್ಪಿದ್ದರೂ ಇನ್ನೊಬ್ಬರನ್ನು ಅದೇ ತಪ್ಪಿಗಾಗಿ ದೂಷಿಸುವುದು ಎಂಬಂತಾಗಿದೆ. ಯುದ್ಧೋನ್ಮಾದ ಸೃಷ್ಟಿಸುವುದನ್ನು ನೀವು(ಭಾರತ) ಆರಂಭಿಸಿದಿರಿ. ಭಾರತೀಯ ಮಾಧ್ಯಮಗಳು ಭಾರತದ ವಾಯುಪಡೆ ಪಾಕ್ ಮೇಲೆ ಆಕ್ರಮಣ ನಡೆಸಲು ಸನ್ನದ್ಧವಾಗಿದೆ; ಆಕ್ರಮಣ ನಡೆಸಬೇಕಾದ ತಾಣಗಳನ್ನು ಗುರುತಿಸಿಕೊಳ್ಳಲಾಗಿದೆ ಮತ್ತು ಪಾಕಿಸ್ತಾನಕ್ಕೆ ಅಂತಿಮ ಗಡುವು ನೀಡಲಾಗಿದೆ ಮುಂತಾದ ವರದಿಗಳನ್ನು ಪ್ರಕಟಿಸುತ್ತಿವೆ" ಎಂದು ಅವರು ದೂರಿದರು.

"ಪಾಕಿಸ್ತಾನ ಶಾಂತವಾಗಿ ವರ್ತಿಸುತ್ತಿದೆ ಮತ್ತು ಯಾವುದೇ ವಿವಾದಗಳಿಗೆ ಒಡ್ಡಿಕೊಂಡಿಲ್ಲ. ಭಾರತದ ರಾಜತಾಂತ್ರಿಕ ಒತ್ತಾಯಗಳಿಗೆ ಪಾಕ್ ಉತ್ತರಿಸಿಲ್ಲ. ಮಾತುಕತೆ ನಡೆಸೋಣವೆಂದು ಪಾಕ್ ಹೇಳುತ್ತಲೇ ಬಂದಿದೆ. ನಾವು ಮುಂಬಯಿ ದಾಳಿಯ ಬಗ್ಗೆ ಜಂಟಿ ತನಿಖೆ ಮಾಡುವ ಆಹ್ವಾನ ನೀಡಿದ್ದೆವು ಆದರೆ ಭಾರತ ಪ್ರತಿಕ್ರಿಯಿಸಿಲ್ಲ"

ತಮ್ಮ ರಾಷ್ಟ್ರ ಉಗ್ರವಾದದ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಶ್ಲಾಘಿಸದಿರುವ ಕುರಿತು ಹಸನ್ ಅಂತಾರಾಷ್ಟ್ರೀಯ ಸಮುದಾಯವನ್ನು ದೂಷಿಸಿದರು.

"ಬೇರೆ ಯಾವುದೇ ರಾಷ್ಟ್ರಗಳು ಮಾಡದಿರುವಂತೆ, ಪಾಕಿಸ್ತಾನ ಉಗ್ರವಾದದ ವಿರುದ್ಧ ಪೂರ್ಣ ಮಟ್ಟದಲ್ಲಿ ಯುದ್ದ ಸಾರಿದೆ. ಉಗ್ರವಾದದ ವಿರುದ್ಧ ಪಾಕಿಸ್ತಾನ ನಿರ್ವಹಿಸಬೇಕಿದ್ದ ಪಾತ್ರಕ್ಕಿಂತ ಹೆಚ್ಚಿನದನ್ನು ಮಾಡುತ್ತಿದೆ. ಅಂತಾರಾಷ್ಟ್ರೀಯ ಸಮುದಾಯ ನಮ್ಮನ್ನು ಬೆಂಬಲಿಸುವ ಬದಲು ದೋಷಾರೋಪಣೆ ಮಾಡುವುದರಲ್ಲಿ ತೊಡಗಿಕೊಂಡಿದೆ. ಅಮೆರಿಕನ್ನರು ಮತ್ತು ಸೌದಿಗಳು ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕೆಂದು ಬಯಸುತ್ತಿದ್ದಾರೆ ಆದರೆ ಅವರು ನಾವು ಎಷ್ಟೇ ಮಾಡಿದರು ಇನ್ನೂ ಹೆಚ್ಚು ಮಾಡಬೇಕೆಂದೇ ಬಯಸಿದ್ದಾರೆ. ನಾವು ಭಯೋತ್ಪಾದನೆಯ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಆದರೆ ಅವರು ಅದನ್ನು ಗುರುತಿಸುತ್ತಿಲ್ಲ"

"ಪಾಕಿಸ್ತಾನವನ್ನು ಮೂಲೆಗುಂಪು ಮಾಡಲು ಭಾರತ ಬಲತ್ಕಾರದ ರಾಜತಾಂತ್ರಿಕತೆಯನ್ನು ಉಪಯೋಗಿಸುತ್ತಿದೆ ಆದರೆ ಅದು ಯಶಸ್ವಿಯಾಗುವುದಿಲ್ಲ. ನಮ್ಮ ಮೇಲೆ ಯುದ್ಧ ಸಾರಲ್ಪಟ್ಟರೆ ನಾವು ಸುಮ್ಮನೆ ಕುಳಿತಿರುವುದಿಲ್ಲ, ನಾವು ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ" ಎಂದು ಹಸನ್ ಹೇಳಿದ್ದಾರೆ.

ಇಂಟರ್ ಪೋಲ್ ಮುಖ್ಯಸ್ಥ, ಮುಂಬಯಿ ದಾಳಿಯಲ್ಲಿ ಪಾಕಿಸ್ತಾನಿಗಳು ಪಾತ್ರ ವಹಿಸಿರುವ ಬಗ್ಗೆ ಅಥವಾ ಕಸಬ್ ಪಾಕಿಸ್ತಾನಿ ಎಂಬುದರ ಬಗ್ಗೆಯಾಗಲಿ ಭಾರತ ಯಾವುದೇ ಸಾಕ್ಷ್ಯಾಧಾರ ಒದಗಿಸಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ಹಸನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪಾಕ್‌‌ಗೆ ಭಾರತೀಯರು ಪ್ರಯಾಣ ಬೆಳೆಸಬೇಡಿ: ಭಾರತ
ಜನತೆಯ ಸಹಕಾರ ಕೋರಿದ ಗೃಹಸಚಿವ ಚಿದು
ಸೌದಿಗೆ ಪಾಕ್ ಕೈವಾಡದ ಬಗ್ಗೆ ಪುರಾವೆ ನೀಡಿದ ಭಾರತ
ಪ್ರಧಾನಿ - ಸೇನಾಮುಖ್ಯಸ್ಥರ ಉನ್ನತ ಸಭೆ
ಔರಯ್ಯಾಗೆ ಎಸ್ಪಿ ಸತ್ಯ ಶೋಧನಾ ತಂಡ
ನಂಬಿದರೆ ನಂಬಿ, ಬಿಟ್ಟರೆ ಬಿಡಿ: ತೈಲ ನೀರಿಗಿಂತ ಅಗ್ಗ!