ಬಾಲಿವುಡ್ ಸಿನಿಮಾ ತಾರೆ ಸಂಜಯ್ ದತ್ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಅಖಾಡಕ್ಕೆ ಇಳಿಯಲಿದ್ದು, ಅವರು ಸಮಾಜವಾದಿ ಪಕ್ಷದ ಲಕ್ನೋ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.ಈ ವಿಚಾರವನ್ನು ಗುರವಾರ ಇಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅಮರ್ ಸಿಂಗ್ ಪ್ರಕಟಿಸಿದ್ದಾರೆ. ಒಂದು ವೇಳೆ ದತ್ ವಿರುದ್ಧ ಕ್ರಿಮಿನಲ್ ಕೇಸ್ ಇರುವ ಕಾರಣ ಚುನಾವಣೆಯಲ್ಲಿ ಸ್ಫರ್ಧಿಸಲು ಅವಕಾಶ ನೀಡದಿದ್ದರೆ ಪಕ್ಷವು ಚುನಾವಣಾ ಆಯೋಗ ಇಲ್ಲವೇ ಸುಪ್ರೀಂ ಕೋರ್ಟಿಗೆ ದೂರೊಯ್ಯಲಿದೆ ಎಂದು ಅವರು ಸಿಂಗ್ ಈ ಸಂದರ್ಭದಲ್ಲಿ ಹೇಳಿದರು." ನೀವು ನನಗೆ ಅಣ್ಣನಿದ್ದಂತೆ ಎಂದು ಸಂಜಯ್ ದತ್ ಹೇಲಿದ್ದಾರೆ. ತಾನೊಬ್ಬ ರಾಜಕಾರಣಿ ಅಲ್ಲದಿದ್ದರೂ, ನೀವೇನೇ ಹೇಳಿದರೂ ತಾನು ಮಾಡಲು ಸಿದ್ಧ ಎಂದು ದತ್ ಹೇಳಿದ್ದಾರೆ" ಎಂಬುದಾಗಿ ಸಿಂಗ್ ಈ ವರದಿಗಾರರೊಂದಿಗೆ ಮಾತನಾಡುತ್ತಾ ನುಡಿದರು.ಈ ಕ್ಷೇತ್ರದ ಹಾಲಿ ಸಂಸದ ಯಾರೆಂದರೆ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ. |