ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ದಿಢೀರ್ ಶ್ರೀಮಂತರಾಗಬೇಕೇ? ಸಂಸದರಾಗಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಿಢೀರ್ ಶ್ರೀಮಂತರಾಗಬೇಕೇ? ಸಂಸದರಾಗಿ!
ಸಂಸತ್ತಿನಲ್ಲಿ ಹಲವು ರಾಜಕೀಯ ಪಕ್ಷಗಳು ರಾಜಕೀಯವಾಗಿ ಪ್ರಭಾವಿ ಎಂಬಂತಹ ಅಭಿವೃದ್ಧಿಯನ್ನು ಪ್ರಮಾಣೀಕರಿಸಿರಬಹುದು. ಇದರೊಂದಿಗೆ ಕೆಲವು ಲೋಕಸಭಾ ಸದಸ್ಯರ ಶ್ರೀಮಂತಿಕೆಯಲ್ಲೂ ಗಮನೀಯ ಅಭಿವೃದ್ಧಿ ದಾಖಲಾಗಿದೆ! 2004ರಲ್ಲಿ ಆಯ್ಕೆಯಾಗಿರುವ ಸಂಸದರ ಆಗಿನ ಆಸ್ತಿ ಹಾಗೂ ಈಗಿನ ಆಸ್ತಿಯನ್ನು ಗಮನಿಸಿದರೆ ಅಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ.

ಪ್ರಸಕ್ತ ಚುನಾವಣೆಯಲ್ಲಿ ಸ್ಫರ್ಧಿಸಿರುವ ಸುಮಾರು 258 ಹಾಲಿ ಸಂಸದರ ಪ್ರಮಾಣಪತ್ರಗಳ ವಿಶ್ಲೇಷಣೆಯೊಂದು, ಇವರಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿಯ ಆಸ್ತಿಯು ಶೇ.100ರಿಂದ ಶೇ.9,100ರಷ್ಟು ಹೆಚ್ಚಿದೆ. ಇದು ಅವರು 2004ರಲ್ಲಿ ಸಲ್ಲಿಸಲಾಗಿರುವ ಪ್ರಮಾಣ ಪತ್ರಕ್ಕೂ ಪ್ರಸ್ತುತ ಸಲ್ಲಿಸಿರುವ ಆಸ್ತಿ ಪ್ರಮಾಣ ಪತ್ರಕ್ಕೂ ಇರುವ ವ್ಯತ್ಯಾಸ.

ಈ ವಿಶ್ಲೇಷಣೆಯನ್ನು ಚುನಾವಣಾ ಕಾವಲು ಸಂಸ್ಥೆಯಾಗಿರುವ ಡೆಮಾಕ್ರೆಟಿಕ್ ರಿಫಾರ್ಮ್ಸ್ ಸಂಸ್ಥೆ ಮಾಡಿದೆ. ಈ ಸಂಘಟನೆಯಲ್ಲಿ ಬೆಂಗಳೂರಿನ ಐಐಎಂನ ಡೀನ್ ತ್ರಿಲೋಚನ್ ಶಾಸ್ತ್ರಿ ಮತ್ತು ಮಾಜಿ ಮುಖ್ಯಚುನಾವಣಾಧಿಕಾರಿ ಜೆ.ಎಂ. ಲಿಂಗ್ಡೋ ಸೇರಿದಂತೆ ಶೈಕ್ಷಣಿಕ, ನ್ಯಾಯಾಂಗ ಹಾಗೂ ಅಧಿಕಾರಿ ವರ್ಗದ ಪ್ರಮುಖ ವ್ಯಕ್ತಿಗಳು ಸದಸ್ಯರಾಗಿದ್ದಾರೆ.

ಈ ವಿಶ್ಲೇಷಣೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದು ಉತ್ತರ ಪ್ರದೇಶದ ಬಿಎಸ್ಪಿ ಅಭ್ಯರ್ಥಿ ಮೊಹಮದ್ ತಾಹಿರ್. ಅವರ ಆಸ್ತಿಯ ಬೆಳವಣಿಗೆ ಯಾವ ವೇಗದಲ್ಲಿ ಬೆಳೆದಿದೆ ಎಂದರೆ ಅಂದಿಗೂ ಇಂದಿಗೂ(2004 ಹಾಗೂ 2009ರ ವೇಳೆಗೆ) ಶೇ.9,100ರಷ್ಟು ವ್ಯತ್ಯಾಸ ಕಾಣುತ್ತಿದೆ. ನಂತರದ ಸ್ಥಾನ ನಮ್ಮ ಕರ್ನಾಟಕಕ್ಕೆ ಸಲ್ಲುತ್ತದೆ. ಮೈಸೂರು ಸಂಸದರಾಗಿರುವ ಬಿಜೆಪಿಯ ಸಿ.ಎಚ್. ವಿಜಯ್‌ಶಂಕರ್ ಅವರ ಆಸ್ತಿಯಲ್ಲಿ ಶೇ.6,500 ಪಟ್ಟು ಬೆಳವಣಿಗೆ ದಾಖಲಾಗಿದೆ. ಕಾಂಗ್ರೆಸ್‌ನ ಸಚಿನ್ ಪೈಲಟ್ ಮತ್ತು ಆಂಧ್ರಪ್ರದೇಶದ ಬಿ.ವಲ್ಲಭನೇನಿ ಅವರ ಆಸ್ತಿಪಾಸ್ತಿಯು ಅನುಕ್ರಮವಾಗಿ ಶೇ.1,700 ಹಾಗೂ ಶೇ.1,100ರಷ್ಟು ಅಭಿವೃದ್ಧಿ ಕಂಡಿದೆ.

ಆದರೆ ಎಲ್ಲಾ ಸಂಸದರೂ ಅದೃಷ್ಟವಂತರು ಎಂಬುದಾಗಿ ಸಾರಸಗಟಾಗಿ ಹೇಳುವಂತಿಲ್ಲ. ನಮ್ಮ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಅಭಿವೃದ್ಧಿ ಮಾತ್ರ ಹಿಂಚಲನೆ ಕಂಡಿದೆ. ಪಕ್ಷದಿಂದ ಪಕ್ಷಕ್ಕೆ ಹಾರುತ್ತಲೇ ಇದ್ದ ಅವರಿಗೆ ಬಹುಶಃ ಬಹುಸಮಯ ಆಯಕಟ್ಟಿನ ಅಧಿಕಾರ ಲಭಿಸದೇ ಇದ್ದುದೇ ಇದಕ್ಕೆ ಕಾರಣವೋ ಗೊತ್ತಿಲ್ಲ. 2004ಕ್ಕೆ ಹೋಲಿಸಿದರೆ ಈ ಸರ್ತಿ ಅವರ ಆದಾಯದಲ್ಲಿ ಶೇ.80ರಷ್ಟು ಇಳಿಕೆ ಕಂಡಿದೆ. ಅಂತೆಯೇ ಜಮ್ಮು ಕಾಶ್ಮೀರದ ಸಂದದ ಲಾಲ್ ಸಿಂಗ್ ಅವರ ಕಥೆಯೂ ಭಿನ್ನವಾಗಿದೆ. ಇಳಿಕೆಯಲ್ಲಿ ಪ್ರಥಮ ಸ್ಥಾನ ಬಂಗಾರಪ್ಪರದಾದರೆ ದ್ವಿತೀಯ ಸ್ಥಾನ ಲಾಲ್ ಸಿಂಗ್ ಅವರದ್ದು. ಸುಮಾರು ಶೇ.70 ರಷ್ಟು ಇವರ ಆಸ್ತಿ ಇಳಿದಿದೆ.

'ಆಸ್ತಿ ಹಿಂಸರಿತ' ದಾಖಲಿಸಿದವರಲ್ಲಿ ಪ್ರಮುಖರೆಂದರೆ, ಬಿಜೆಡಿಯ ಪ್ರಸನ್ನ ಕುಮಾರ್ (ಶೇ.66) ಇತ್ತೀಚೆಗೆ ಬಿಹಾರದಲ್ಲಿ ಕಾಂಗ್ರೆಸ್ ಸೇರಿರುವ ರಂಜಿತಾ ರಂಜನ್ (ಶೇ.40) ದೆಹಲಿಯ ಮಾಜಿ ಸೂಪರ್ ಕಾಪ್ ಕಾಂಗ್ರೆಸ್‌ನ ನಿಖಿಲ್ ಕುಮಾರ್(ಶೇ.33), ಸಿಪಿಐನ ಗುರುದಾಸ್ ದಾಸ್ ಗುಪ್ತಾ(ಶೇ.9) ಮತ್ತು ಆರ್‌ಜೆಡಿಯ ಮೊಹಮ್ಮದ್ ತಸ್ಲಿಮುದ್ದೀನ್. ಇವರ ಆದಾಯದಲ್ಲಿ ಹೆಚ್ಚೂ ಇಲ್ಲ, ಕಮ್ಮಿಯೂ ಇಲ್ಲ ಹಾಗಾಗಿ ಅಭಿವೃದ್ಧಿ ಶೇ.0.

ಸೋನಿಯಾಗಾಂಧಿಯವರು ಈ ವಿಚಾರದಲ್ಲಿ ಅಂತಹ ಪ್ರಗತಿ ಸಾಧಿಸಿಲ್ಲ. ಅವರ ಏರಿಕೆ ಶೇ.60 ಮಾತ್ರ. ಅವರ ಪುತ್ರ ರಾಹುಲ್ ಪರ್ವಾಗಿಲ್ಲ. ಶೇ.414ರಷ್ಟು ಅಭಿವೃದ್ದಿ ದಾಖಲಿಸಿದ್ದಾರೆ. ಇವರ ವೃದ್ಧಿಯು ದೆಹಲಿ ಮುಖ್ಯಮಂತ್ರಿ ಶೀಲಾದೀಕ್ಷಿತರ ಪುತ್ರ ಸಂದೀಪ್ ದೀಕ್ಷಿತ್ (ಶೇ.377) ಅವರಿಗಿಂತ ಉತ್ತಮವಾಗಿದೆ. 300 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ ಎಂದು ಸುದ್ದಿ ಮಾಡಿದ್ದ ಆಂಧ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್. ರಾಜಗೋಪಾಲ್ ಅವರ ಆಸ್ತಿಯು ಕೇವಲ ಶೇ.43ರಷ್ಟು ಮಾತ್ರ ಬೆಳೆದಿದೆ.

ಆಸ್ತಿ ಅಭಿವೃದ್ಧಿ ಸ್ಪರ್ಧೆಯಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ತಮ್ಮ ಅಧಿನಾಯಕಿ ಸೋನಿಯಾಗಾಂಧಿಯನ್ನು ಹಿಂದಿಕ್ಕಿದ್ದಾರೆ. ಪೈಲಟ್ ಅವರಲ್ಲದೆ, ಸಂತೋಷ್ ಮೋಹನ್ ದೇವ್(ಶೇ.700), ಜ್ಯೋತಿರಾಧಿತ್ಯ ಸಿಂಧ್ಯ(ಶೇ.430) ಅಸ್ಸಾಮಿನ ಲಾಟರಿ ರಾಜ ಮೋನಿ ಕುಮಾರ್ ಸುಬ್ಬಾ (ಶೇ.214), ಕಪಿಲ್ ಸಿಬಾಲ್ (ಶೇ.101), ಪ್ರಣಬ್ ಮುಖರ್ಜಿ (ಶೇ.77)ರಷ್ಟು ಏಳಿಗೆ ದಾಖಲಿಸಿದ್ದಾರೆ!
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿಎಸ್ಪಿ ಕಿಂಗ್ ಮೇಕರ್ ಆಗಲಿದೆ: ಮಾಯಾವತಿ
ಕಾಶ್ಮೀರಿ ಪಂಡಿತರಮೇಲೆ ದೌರ್ಜನ್ಯ: ವೇದಿಕೆ ಖಂಡನೆ
ನೆರೆರಾಷ್ಟ್ರಗಳ ಬಿಕ್ಕಟ್ಟು: ಪ್ರಧಾನಿ ಕಳವಳ
ಅಲ್ಪಸಂಖ್ಯಾತರನ್ನು 'ವೋಟ್ ಬ್ಯಾಂಕ್' ಮಾಡಿರುವ ಕಾಂಗ್ರೆಸ್: ಮೋದಿ ಟೀಕೆ
ಜಮ್ಮು: ನದಿಗೆ ಬಿದ್ದ ವ್ಯಾನ್‌; 30 ಸಾವು
ಪ್ರಧಾನಿಯಾಗೋ ಕರ್ತವ್ಯವಿದೆ, ಮಹಾತ್ವಾಕಾಂಕ್ಷೆಯಲ್ಲ: ಮೋದಿ