ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಟಿವಿ ಚುನಾವಣೋತ್ತರ ಸಮೀಕ್ಷೆಗಳು ಹೇಳುವುದೇನು?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಿವಿ ಚುನಾವಣೋತ್ತರ ಸಮೀಕ್ಷೆಗಳು ಹೇಳುವುದೇನು?
ಹಲವು ಟಿವಿ ಚಾನೆಲ್‌ಗಳು ನಡೆಸಿರುವ ಸಮೀಕ್ಷೆಗಳು ಎನ್‌ಡಿಎ ಮತ್ತು ಯುಪಿಎ ನಡುವಣ ಕತ್ತು ಕತ್ತಿನ ಹೋರಾಟದ ಸುಳಿವನ್ನು ನೀಡಿದ್ದು, ಯುಪಿಎ ಅಲ್ಪ ಮುನ್ನಡೆ ಸಾಧಿಸಲಿದೆ ಎಂಬ ಸುಳಿವನ್ನು ನೀಡಿವೆ. ಈ ಚುನಾವಣೋತ್ತರ ಸಮೀಕ್ಷೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ:

ಸ್ಟಾರ್ ನ್ಯೂಸ್-ನೀಲ್ಸನ್ ಸಮೀಕ್ಷೆ
ಕಾಂಗ್ರೆಸ್‌ಗೆ 155 ಮತ್ತು ಯುಪಿಎಯ ಒಟ್ಟು ಸ್ಥಾನಗಳ ಸಂಖ್ಯೆ 199.
ಬಿಜೆಪಿಗೆ 153 ಮತ್ತು ಎನ್‌ಡಿಎ ಮಿತ್ರಕೂಟದ ಒಟ್ಟು ಸಂಖ್ಯೆ 196
ತೃತೀಯ ರಂಗ (ಬಿಎಸ್ಪಿ 28, ಸಿಪಿಎಂ 25 ಸೇರಿ) 100
ಚತುರ್ಥ ರಂಗದಲ್ಲಿ ಸಮಾಜವಾದಿ ಪಕ್ಷದ 26, ಆರ್‌ಜೆಡಿ 8 ಹಾಗೂ ಲೋಕ ಜನಶಕ್ತಿ (ಎಲ್‌ಜೆಪಿ) 2 ಸೇರಿ 36.
ಈ ಸಮೀಕ್ಷೆಯ ಪ್ರಕಾರ, ಆಂಧ್ರದಲ್ಲಿ ಚಿರಂಜೀವಿ ಸ್ಥಾಪಿಸಿದ ಹೊಸ ಪ್ರಜಾ ರಾಜ್ಯಂ ಪಕ್ಷಕ್ಕೆ ಯಾವುದೇ ಸ್ಥಾನಗಳಿಲ್ಲ.

ಸಿಎನ್ಎನ್-ಐಬಿಎನ್-ದೈನಿಕ ಭಾಸ್ಕರ ಸಮೀಕ್ಷೆ
ಕಾಂಗ್ರೆಸ್+ಮಿತ್ರರಿಗೆ (ಯುಪಿಎ) 185ರಿಂದ 205 ಸ್ಥಾನಗಳು. ಇದರಲ್ಲಿ ಕಾಂಗ್ರೆಸ್‌ಗೆ 135ರಿಂದ 160 ಸ್ಥಾನಗಳೂ ಸೇರಿವೆ.
ಬಿಜೆಪಿ+ಮಿತ್ರರಿಗೆ (ಎನ್‌ಡಿಎ) 165ರಿಂದ 185. ಇದರಲ್ಲಿ ಬಿಜೆಪಿಗೆ ಮಾತ್ರ 135ರಿಂದ 150 ಸ್ಥಾನಗಳು.
ತೃತೀಯ ರಂಗಕ್ಕೆ 110ರಿಂದ 130 ಸ್ಥಾನಗಳು. ಇದರಲ್ಲಿ ಎಡರಂಗಕ್ಕೆ 30ರಿಂದ 40, ಬಿಎಸ್ಪಿಗೆ 25ರಿಂದ 35.
ಚತುರ್ಥ ರಂಗಕ್ಕೆ 25ರಿಂದ 35 ಸ್ಥಾನಗಳು ದೊರೆಯಲಿದ್ದರೆ, ಬಿಜು ಜನತಾ ದಳ (ಬಿಜೆಡಿ) ಸೇರಿದಂತೆ "ಇತರರು" 20ರಿಂದ 30 ಸ್ಥಾನಗಳನ್ನು ಬಾಚಿಕೊಳ್ಳಲಿದ್ದಾರೆ.

ಇಂಡಿಯಾ ಟಿವಿ - ಸಿ-ವೋಟರ್ ಸಮೀಕ್ಷೆ
ಯುಪಿಎಗೆ 189ರಿಂದ 201. ಕಾಂಗ್ರೆಸಿಗೆ 149ರಿಂದ 155, ಡಿಎಂಕೆಗೆ 9ರಿಂದ 13, ಎನ್‌ಸಿಪಿಗೆ 12ರಿಂದ 16 ಮತ್ತು ತೃಣಮೂಲ ಕಾಂಗ್ರೆಸಿಗೆ 12ರಿಂದ 16 ಸ್ಥಾನಗಳು ದೊರೆಯಲಿವೆ.
ಬಿಜೆಪಿ ನೇತೃತ್ವದ ಎನ್‌ಡಿಎಗೆ 183ರಿಂದ 195 ಸ್ಥಾನಗಳು ದೊರೆಯಲಿವೆ. ಇದರಲ್ಲಿ ಬಿಜೆಪಿಗೆ 140-146, ಜೆಡಿಯು 17-21 ಸೇರಿವೆ.
ತೃತೀಯ ರಂಗವು 105ರಿಂದ 121 ಸ್ಥಾನಗಳು ಪಡೆದುಕೊಳ್ಳಲಿವೆ. ಇದರಲ್ಲಿ ಎಡಪಕ್ಷಗಳು 31ರಿಂದ 37, ಬಿಎಸ್ಪಿ 24ರಿಂದ 30, ಎಐಎಡಿಎಂಕೆ 23-39, ಟಿಡಿಪಿ/ಟಿಆರ್ಎಸ್ 13ರಿಂದ 19 ಮತ್ತು ಬಿಜೆಡಿ 6ರಿಂದ 8 ಸ್ಥಾನಗಳನ್ನು ಗೆದ್ದುಕೊಳ್ಳುವ ನಿರೀಕ್ಷೆಯಿದೆ. ಪ್ರಜಾ ರಾಜ್ಯಂಗೆ ಸೊನ್ನೆಯಿಂದ 4ರಷ್ಟು ಸ್ಥಾನ ದೊರೆಯಲಿದೆಯೆಂದು ಅಂದಾಜಿಸಲಾಗಿದೆ.

ಟೈಮ್ಸ್ ನೌ ಸಮೀಕ್ಷೆ
ಯುಪಿಎ 198, ಕಾಂಗ್ರೆಸ್‌ಗೆ 154
ಎನ್‌ಡಿಎ 183, ಬಿಜೆಪಿಗೆ 142
ಎಡರಂಗ - 38

ಹೆಡ್‌ಲೈನ್ಸ್ ಟುಡೇ ಸಮೀಕ್ಷೆ
ಯುಪಿಎಗೆ 191
ಎನ್‌ಡಿಎ 180
ಎಡರಂಗ 38
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎನ್‌ಡಿಎಗೆ ಬೆಂಬಲ: ನಿತೀಶ್‌
ಬಿಜೆಪಿ ಅತಿ ದೊಡ್ಡ ಪಕ್ಷ: ರಾಜನಾಥ್‌ ಸಿಂಗ್
ಎಡಪಕ್ಷದ ಪಾತ್ರ ಮಹತ್ವದ್ದು: ಸೋಮನಾಥ ಚಟರ್ಜಿ
ಲೋಕಸಭೆ ಮತಸಮರ ಅಂತ್ಯ-ಎಲ್ಲರ ಚಿತ್ತ 16ರತ್ತ...
ಸ್ವಿಸ್‌ಗೆ ನಕಲಿ ದಾಖಲೆ ನೀಡಿದ ಯುಪಿಎ: ಬಿಜೆಪಿ ಆರೋಪ
'ಎಡ' ಕೈಗೆ ಅಧಿಕಾರ ನೀಡದಂತೆ ಅಮೆರಿಕ ಒತ್ತಡ?