ಪೆಟ್ರೋಲ್ ಮತ್ತು ಡೀಸೆಲ್ ದರಗಳ ಹೆಚ್ಚಳಕ್ಕೆ ಬುಧವಾರ ಬಿಜೆಪಿ ವ್ಯಂಗ್ಯವಾಗಿ ಟೀಕೆ ಮಾಡಿದೆ. ಇದು ಕಾಂಗ್ರೆಸ್ ಸರ್ಕಾರದ ಉದಾತ್ತ ಧನ್ಯವಾದ ಅರ್ಪಣೆ ಮತ್ತು ಪ್ರಥಮ ನೂರುಗಳಲ್ಲಿ ಸಾಬೀತಾದ ಸಾಧನೆ ಎಂದು ಅದು ಬಣ್ಣಿಸಿದೆ.
ನೂತನ ಸರ್ಕಾರ ರಚನೆಯಾದ ಬಳಿಕ ಉದಾತ್ತವಾಗಿ ಧನ್ಯವಾದ ಅರ್ಪಿಸಿದ ಮಾದರಿಯಿದು. ಚುನಾವಣೆಗೆ ಮುಂಚೆ ಪೆಟ್ರೋಲ್, ಡೀಸೆಲ್ ದರಗಳನ್ನು ತಗ್ಗಿಸಿ ಫಲಿತಾಂಶದ ಬಳಿಕ ಮತ್ತು ಸರ್ಕಾರ ರಚನೆಯಾದ ಬಳಿಕ ಪೆಟ್ರೋಲ್, ಡೀಸೆಲ್ ಹೆಚ್ಚಳಕ್ಕೆ ನಿರ್ಧರಿಸಿದೆಯೆಂದು ಬಿಜೆಪಿ ವಕ್ತಾರ ರಾಜೀವ್ ಪ್ರತಾಪ್ ರೂಡಿ ವ್ಯಂಗ್ಯವಾಡಿದರು. ಚುನಾವಣೆಗೆ ಮುಂಚೆ ಅಂತಾರಾಷ್ಟ್ರೀಯ ತೈಲ ಬೆಲೆ ಇಳಿಕೆಯಾದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಸರ್ಕಾರ ಇಳಿಸಿತ್ತು. ಆದರೆ ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಹೆಚ್ಚಳವಾಗಿದ್ದರಿಂದ ಪೆಟ್ರೋಲ್, ಡೀಸೆಲ್ ದರ ಹೆಚ್ಚಳವನ್ನು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವೋರಾ ಪ್ರಕಟಿಸಿದ್ದರು. ಪೆಟ್ರೋಲ್, ಡೀಸೆಲ್ ದರ ಹೆಚ್ಚಳವು ಸರ್ಕಾರದ ನೂರುದಿನಗಳ ಮಹಾನ್ ಸಾಧನೆಯೆಂದು ರೂಡಿ ವ್ಯಂಗ್ಯವಾಗಿ ಹೇಳಿದರು. |