ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಅಣುವ್ಯಾಪಾರಕ್ಕೆ ಸಂಪೂರ್ಣ ವಿನಾಯಿತಿ ಇದೆ: ಪ್ರಣಬ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣುವ್ಯಾಪಾರಕ್ಕೆ ಸಂಪೂರ್ಣ ವಿನಾಯಿತಿ ಇದೆ: ಪ್ರಣಬ್
PTI
ತನ್ನ ಅಣು ಯೋಜನೆಗೆ ಭಾರತವು ಅಣು ಪೂರೈಕೆ ಸಮೂಹ(ಎನ್ಎಸ್‌ಜಿ)ದಿಂದ ಸಂಪೂರ್ಣ ವಿನಾಯಿತಿ ಪಡೆದಿದೆ ಮತ್ತು "ಜಿ8 ಸಮೂಹದ ಹೇಳಿಕೆಯಿಂದ ನಾವು ಕಳವಳಗೊಂಡಿಲ್ಲ" ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಸೋಮವಾರ ಹೇಳಿದ್ದಾರೆ.

ಅಣು ಪ್ರಸರಣ ತಡೆ ನೀತಿಗೆ(ಎನ್‌ಪಿಟಿ) ಸಹಿಹಾಕದ ರಾಷ್ಟ್ರಗಳಿಗೆ ಅಣುಸಂವರ್ಧನೆ ಮತ್ತು ಮರುಪ್ರಕ್ರಿಯೆ ವಸ್ತುಗಳ ವರ್ಗಾವಣೆಗೆ ನಿಷೇಧ ಹೇರಲು ಇತ್ತೀಚೆಗೆ ಇಟಲಿಯಲ್ಲಿ ಜರುಗಿದ ಜಿ8 ರಾಷ್ಚ್ರಗಳ ಸಮೂಹವು ಮಸೂದೆ ಅಂಗೀಕರಿಸಿದ ಬಳಿಕ ಅವರು ರಾಜ್ಯ ಸಭೆಯಲ್ಲಿ ಮಾತನಾಡುತ್ತಿದ್ದರು.

ಎನ್‌ಪಿಟಿಗೆ ಸಹಿಮಾಡದ ಪ್ರಮುಖ ರಾಷ್ಟ್ರಗಳಲ್ಲಿ ಭಾರತ ಸೇರಿದೆ.

ಭಾರತಕ್ಕೆ ಅಣುವಸ್ತುಗಳು, ಇಂಧನ ಹಾಗೂ ತಂತ್ರಜ್ಞಾನವನ್ನು ಮಾರಾಟ ಮಾಡಲು ಕಳೆದ ವರ್ಷ ಎನ್‌ಎಸ್‌ಜಿಯು ತನ್ನ ರಫ್ತು ನಿಯಮಗಳಿಗೆ ವಿನಾಯಿತಿ ನೀಡಿತ್ತು. ಆಗಿನ ಅಮೆರಿಕ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್ ಅವರು ಈ ಕುರಿತು ಎನ್‌ಎಸ್‌ಜಿ ಸದಸ್ಯ ರಾಷ್ಟ್ರಗಳ ಮನಒಲಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೈಲಿನಲ್ಲಿ ಆತ್ಮಹತ್ಯೆ ಬೆದರಿಕೆ ಹಾಕಿದ ಸಾಧ್ವಿ ಪ್ರಜ್ಞಾ ಸಿಂಗ್
ದೆಹಲಿ ಮೆಟ್ರೋ ಮತ್ತೊಂದು ಅವಘಡ: ಉರುಳಿಬಿದ್ದ ಕ್ರೇನುಗಳು
ದೆಹಲಿ ಮೆಟ್ರೋ ಮುಖ್ಯಸ್ಥರ ರಾಜೀನಾಮೆ ತಿರಸ್ಕೃತ
ಬಗ್ಲಿಹಾರ್ ವಿದ್ಯುತ್ ಘಟಕ ಸ್ಫೋಟಕ್ಕೆ ಉಗ್ರರಿಗೆ ತರಬೇತಿ
ಬಸ್-ಲಾರಿ ಢಿಕ್ಕಿ: 11 ಸಾವು
ಜ್ಯೋತಿ ಬಸು ಆಸ್ಪತ್ರೆಗೆ ದಾಖಲು