ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಲಾಕೃತಿಗಳನ್ನೇ ರಕ್ಷಿಸಲಾಗದವರು ನನ್ನ ರಕ್ಷಿಸ್ತಾರಾ: ಹುಸೇನ್ ಪ್ರಶ್ನೆ (Centre | M F Husain | exile | Paintings)
Feedback Print Bookmark and Share
 
IFM
"ತನ್ನ ಕಲಾಕೃತಿಗಳನ್ನು ರಕ್ಷಿಸಲಾಗದವರು ನನ್ನನ್ನು ರಕ್ಷಿಸುತ್ತಾರಾ, ಇದನ್ನು ನಾನು ಹೇಗೆ ನಂಬಲಿ" ಎಂಬುದಾಗಿ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ಪ್ರಶ್ನಿಸಿದ್ದಾರೆ. ತನ್ನ ವಿವಾದಾಸ್ಪದ ಕಲಾಕೃತಿಗಳಿಂದಾಗಿ ಗಡಿಪಾರಿಗೀಡಾಗಿರುವ ಹುಸೇನ್ ಅವರನ್ನು ಶೀಘ್ರವಾಗಿ ರಾಷ್ಟ್ರಕ್ಕೆ ಮರಳುವಂತೆ ಮಾಡಲು ಕೇಂದ್ರ ಗೃಹ ಸಚಿವಾಲಯದ ಪ್ರಯತ್ನಗಳಿಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ಹುಸೇನ್ ವಿರುದ್ಧ ದೆಹಲಿಯಲ್ಲಿ ದಾಖಲಾಗಿರುವ ಮೂರು ಕೇಸುಗಳನ್ನು ವಿಲೀನ ಮಾಡುವ ಮತ್ತು ದೇಶಾದ್ಯಂತವಿರುವ ಎಲ್ಲಾ ಪ್ರಕರಣಗಳಿಗೆ ತಾರ್ಕಿಕ ಮುಕ್ತಾಯ ಹಾಡಲು ಗೃಹಸಚಿವಾಲಯ ತರಾತುರಿ ತೋರಿದೆ.

ಅವರು ಟೈಮ್ಸ್ ಆಫ್ ಇಂಡಿಯಾ ವಾಹಿನಿಗೆ ದುಬೈಯಿಂದ ನೀಡಿರುವ ದೂರವಾಣಿ ಸಂದರ್ಶನದಲ್ಲಿ ತನಗೆ ರಕ್ಷಣೆ ಲಭಿಸುವ ಸಂಶಯ ವ್ಯಕ್ತಪಡಿಸಿದ್ದಾರೆ. "ಅವರೇನು ಮಾತಾಡುತ್ತಿದ್ದಾರೆ. ಈ ತಿಂಗಳ ಆಗಸ್ಟ್‌ನಲ್ಲಿ ನಡೆದ ಭಾರತೀಯ ಕಲಾ ಸಮ್ಮೇಳನದಲ್ಲಿ ನನ್ನ ಒಂದೇ ಒಂದು ಕಲಾಕೃತಿ ಪ್ರದರ್ಶನವಾಗಿಲ್ಲ. ಇದಕ್ಕೆ ನೀಡಿರುವ ಕಾರಣ ಅವರು ಯಾವುದೇ ಅಪಾಯವನ್ನು ಎದುರು ಹಾಕಿಕೊಳ್ಳಲು ಇಚ್ಚಿಸಿರಲಿಲ್ಲ. ಹೀಗಿರುವಾಗ, ನನ್ನ ಕಲಾಕೃತಿಗಳನ್ನು ರಕ್ಷಿಸಲು ಆಗದವರು ನನ್ನನ್ನು ಹೇಗೆ ರಕ್ಷಿಸುತ್ತಾರೆ. ನಾನು ಅವರನ್ನು ಹೇಗೆ ನಂಬಲಿ?" ಎಂಬುದಾಗಿ ಅವರು ಪ್ರಶ್ನಿಸಿದ್ದಾರೆ.

"ತನ್ನ ವಿರುದ್ಧವಿರುವ ಪ್ರಕರಣಗಳ ಪ್ರಶ್ನೆಯಲ್ಲ. ಇದರಿಂದಾಗಿ ತಾನು ದೇಶ ತೊರೆದಿಲ್ಲ. ಕೇಸರಿ ಪಂಗಡಗಳು ತನ್ನ ಮೇಲೆ ದೈಹಿಕ ಹಲ್ಲೆಮಾಡುವ ಬೆದರಿಕೆ ಒಡ್ಡಿರುವ ಕಾರಣ ದೇಶ ತೊರೆಯಬೇಕಾಯಿತು" ಎಂದಿರುವ ಹುಸೇನ್, ತಾನು ನಿಜವಾಗಿಯೂ ಮರಳಿದರೆ ಏನಾದೀತು ಎಂಬುದಾಗಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. "ಅವರು ನನಗೆ ಗುಂಡು ನಿರೋಧಕ ಕಾರು ಇತರ ಸವಲತ್ತುಗಳನ್ನು ಒದಗಿಸಬಹುದು. ಆದರೆ ಇಂದಿರಾಗಾಂಧಿ ಅಥವಾ ರಾಜೀವ್ ಗಾಂಧಿಯವರಿಗೇನು ಭದ್ರತೆ ಕಮ್ಮಿ ಇತ್ತಾ?" ಎಂಬುದಾಗಿ ಪ್ರಶ್ನಿಸಿದ್ದಾರೆ.

ತನ್ನ ಪ್ರಕರಣವೇನೂ ಹೊಸದಲ್ಲ. ಗೆಲಿಲಿಯೋನಿಂದ ಹಿಡಿದು ಪಬ್ಲೋ ನೆರುದ ತನಕ ಸೃಜನಶೀಲತೆಯು ಹಲವು ಬಾರಿ ಗಡಿಪಾರಿಗೀಡಾಗಿದೆ. ಆದರೂ, ಕೆಲವರು ತನ್ನನ್ನು ನಡೆಸಿಕೊಂಡಿರುವ ರೀತಿಯಿಂದ ಅತೀವ ನೋವಾಗಿದೆ ಎಂದು ಹೇಳಿಕೊಂಡಿರುವ ಕಲಾವಿದ ಹುಸೇನ್, "ಭಾರತ ನನ್ನ ದೇಶ. ನನ್ನದೇಶಕ್ಕೆ ಮರಳಿ ಕರೆಸಿಕೊಳ್ಳಲು ಈ ಜನರನ್ನು ನಾನ್ಯಾಕೆ ಬೇಡಲಿ "ಎಂದು ಹೇಳಿದ್ದಾರೆ.

ಎಂಎಫ್ ಹುಸೇನ್ ಶೀಘ್ರ ಮರಳಿಕೆಗೆ ಕೇಂದ್ರ ಪ್ರಕ್ರಿಯೆ
http://kannada.webdunia.com/newsworld/news/national/0910/29/1091029034_1.htm
ಸಂಬಂಧಿತ ಮಾಹಿತಿ ಹುಡುಕಿ