ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ಮಾದರಿ ಉಗ್ರರ ದಾಳಿ ಬೆದರಿಕೆ ಪೊಳ್ಳು (Terror Attack | Mumbai | Calcutta | Bangalore)
Feedback Print Bookmark and Share
 
ಮುಂಬೈ ದಾಳಿಯಂತಹ ದಾಳಿ ಮತ್ತೊಮ್ಮೆ ನಡೆಯುವ ಸಾಧ್ಯತೆಗಳ ಕುರಿತು ಬೆಂಗಳೂರು, ಮುಂಬೈ ಹಾಗೂ ಕೋಲ್ಕತಾ ನಗರಗಳಿಗೆ ಸೋಮವಾರ ನಿರ್ದಿಷ್ಟವಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಇದು ಹುಸಿ ಎಂದು ಸಾಬೀತಾಗಿದೆ. ಇದಕ್ಕೆ ಮೊದಲು, ಪಾಕಿಸ್ತಾನದಲ್ಲಿ ಸಂಚು ಹೂಡಿ, ಸಮುದ್ರ ಮುಖೇನ ದಾಳಿಯೇ ಮತ್ತೊಮ್ಮೆ ನಡೆಯುವ ಕುರಿತು ಎಚ್ಚರಿಕೆ ನೀಡಲಾಗಿತ್ತು.

ದಾಳಿಯನ್ನು ದೊಡ್ಡಮಟ್ಟದಲ್ಲಿ ಯೋಜಿಸಲಾಗಿದ್ದು, ಈ ಕುರಿತು ಸರ್ಕಾರ ಚಿಂತಿತವಾಗಿದೆ ಹಿಂದೆ ವರದಿಯಾಗಿತ್ತು. ಆದರೆ ಗೃಹ ಸಚಿವಾಲಯವು ಈ ವರದಿಯ ಬಗ್ಗೆ ಪರಿಶೀಲನೆ ನಡೆಸಿದ ಬಳಿಕ ಇದು ನಿಜವಲ್ಲ ಎಂದು ದೃಢಪಟ್ಟಿರುವುದಾಗಿ ಮೂಲಗಳು ತಿಳಿಸಿವೆ.

ಈ ಎಚ್ಚರಿಕೆ ನೀಡಿ ಮೂರು ದಿನಗಳು ಕಳೆದಿದೆ. ಎಫ್‌ಬಿಐ ಬಂಧನಕ್ಕೀಡಾಗಿರುವ ಡೇವಿಡ್ ಕೋಲ್ಮನ್ ಹೆಡ್ಲೀ ಎಂಬಾತನ ತನಿಖೆಯಿಂದ ಹೊರಬಿದ್ದಿರುವ ಮಾಹಿತಿಗಳ ಆಧಾರದಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಶನಿವಾರ ಮಧುರೈಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಪಿ.ಚಿದಂಬರಂ ಅವರು ಪಾಕಿಸ್ತಾನಕ್ಕೆ ಅತ್ಯಂತ ಕಠಿಣ ಶಬ್ದಗಳಲ್ಲಿ ಎಚ್ಚರಿಕೆ ನೀಡದ್ದು, ಪಾಕಿಸ್ತಾನವು ಭಾರತದ ಇನ್ಯಾವುದೇ ಉಗ್ರವಾದ ದಾಳಿಗೆ ಜವಾಬ್ದಾರವಾಗಿದ್ದಲ್ಲಿ, ಸರ್ಕಾರ ಮತ್ತು ಸೇನೆಯು ಸೂಕ್ತ ಪ್ರತೀಕಾರ ತೆಗೆದುಕೊಳ್ಳಲಿದೆ ಎಂಬುದಾಗಿ ಹೇಳಿದ್ದರು.

ಪೂರಕ ಓದಿಗೆ ಎಫ್‌ಬಿಐ ಬಂಧಿತನಿಂದ 'ರಾಹುಲ್' ಹತ್ಯೆ ಸಂಚು ಓದಿರಿ
ಸಂಬಂಧಿತ ಮಾಹಿತಿ ಹುಡುಕಿ