ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋವಾಸ್ಫೋಟಕ್ಕೆ ಗುಪ್ತಚರ ವೈಫಲ್ಯ ಕಾರಣ: ರವಿನಾಯ್ಕ್ (Goa | Sanatan Sanstha | intelligence | Ravi Naik)
Feedback Print Bookmark and Share
 
ಗೋವಾದಲ್ಲಿ ದೀಪಾವಳಿ ಸಂದರ್ಭದಲ್ಲಿ ನಡೆಸಲಾಗಿರುವ ಬಾಂಬ್ ಸ್ಫೋಟಕ್ಕೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ ಎಂದು ಗೋವಾ ಮುಖ್ಯಮಂತ್ರಿ ರವಿಕುಮಾರ್ ಹೇಳಿದ್ದಾರೆ. ಬಲಪಂಥೀಯ ಹಿಂದೂ ಸಂಘಟನೆ ಸನಾತನ ಸಂಸ್ಥಾದ ಇಬ್ಬರು ಸಹಚರರು ಬಾಂಬ್ ಒಯ್ಯುತ್ತಿರುವ ವೇಳೆ ಸ್ಫೋಟ ಸಂಭವಿಸಿದ್ದು, ಅವರಿಬ್ಬರು ಸಾನ್ನಪ್ಪಿದ್ದರು.

ಮೇಲ್ವಿಚಾರಣಾ ಗುಪ್ತಚರ ಅಧಿಕಾರಿಗಳು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಮ ಕ್ರಮವನ್ನು ಕೈಗೊಳ್ಳಲಾಗುವುದು ಎಂಬುದಾಗಿ ನಾಯ್ಕ್ ಅವರು ಹೇಳಿದ್ದಾರೆ.

"ಮಡ್ಗಾಂವ್ ಸ್ಫೋಟವು ಗುಪ್ತಚರ ಯಂತ್ರದ ವೈಫಲ್ಯ ಎಂಬುದಾಗಿ ಹೇಳಿದರೆ ತಪ್ಪಾಗಲಾರದು" ಎಂಬುದಾಗಿ ಅವರು ಸೋಮವಾರ ತಡರಾತ್ರಿ ಖಾಸಗಿ ವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಗುಪ್ತಚರ ಲೋಪಗಳ ಕುರಿತು ಸೂಕ್ತ ತನಿಖೆಗೆ ಕರೆ ನೀಡಿದ ಅವರು ಗುಪ್ತಚರ ಮಾಹಿತಿ ಸಂಗ್ರಹಿಸುವಲ್ಲಿ ಉಂಟಾಗಿರುವ ತಪ್ಪನ್ನು ಸರಿಪಡಿಸುವ ಅವಶ್ಯಕತೆ ಇದೆ ಎಂಬುದಾಗಿ ಅವರು ಹೇಳಿದ್ದರು. ಗುಪ್ತಚರ ವೈಫಲ್ಯದಿಂದಾಗೇ ದುಷ್ಕರ್ಮಿಗಳು ಜಿಲೆಟಿನ್ ಕಡ್ಡಿಗಳನ್ನುಒಯ್ಯಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸನಾತನ ಸಂಸ್ಥಾದ ಮಲ್ಗೊಂಡ ಪಾಟಿಲ್ ಹಾಗೂ ಯೋಗೇಶ್ ನಾಯ್ಕ್ ಎಂಬವರಿಬ್ಬರು, ದಿಪಾವಳಿ ಆಚರಣೆ ವೇಳೆ ಜನಸಂದಣಿಯಲ್ಲಿ ಸ್ಫೋಟಿಸಲೆಂದು ಸ್ಕೂಟರ್‌ನಲ್ಲಿ ಬಾಂಬ್ ಒಯ್ಯುತ್ತಿರುವ ವೇಳೆ ಅದು ಸ್ಫೋಟಗೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ