ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಖ್ಯಾತ ಪತ್ರಕರ್ತ ಪ್ರಭಾಶ್ ಜೋಷಿ ಇನ್ನಿಲ್ಲ (Prabhash Joshi | Journalist | Heart Attack | dies)
Feedback Print Bookmark and Share
 
ಖ್ಯಾತ ಪತ್ರಕರ್ತ ಪ್ರಭಾಶ್ ಜೋಷಿ ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ರಾತ್ರಿ 11.30 ಗಂಟೆಯ ವೇಳೆಗೆ ಎದೆ ನೋವು ಎಂದು ಹೇಳಿದ್ದ ಅವರನ್ನು ಖಾಸಗೀ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ಘೋಷಿಸಲಾಯಿತು.

ಜೋಷಿ ಅವರು ಪತ್ನಿ ಉಷಾ ಜೋಷಿ, ಪುತ್ರರಾದ ಸಂದೀಪ್ ಹಾಗೂ ಸೋಪಾನ್ ಮತ್ತು ಪುತ್ರಿ ಸೋನಾಲ್ ಹಾಗೂ ತಾಯಿ ಲೀಲಾ ಬಾಯ್ ಅವರನ್ನು ಅಗಲಿದ್ದಾರೆ.

ಜೋಷಿ ಅವರು ತಮ್ಮ ವೃತ್ತಿ ಜೀವನವನ್ನು ನಯಿ ದುನಿಯಾ ಪತ್ರಿಕೆಯಿಂದ ಆರಂಭಿಸಿದ್ದರು. 1983ರಲ್ಲಿ ಜನಸತ್ತಾ ಪತ್ರಿಕೆಯ ಸಂಸ್ಥಾಪಕ ಸಂಪಾದಕರಾದರು. 1995ರಲ್ಲಿ ನಿವೃತ್ತಿಯ ಬಳಿಕ ಪ್ರಮುಖ ಸಂಪಾದಕೀಯ ಸಲಹಾಗಾರರಾಗಿದ್ದರು. ಇದಲ್ಲದೆ ಅವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಸ್ಥಾನೀಯ ಸಂಪಾದಕರಾಗಿ ಅಹಮದಾಬಾದ್, ಚಂಡೀಗಢ ಮತ್ತು ದೆಹಲಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

ಕ್ರೀಡಾ ಸುದ್ದಿಗಳನ್ನು ಅದರಲ್ಲೂ ಕ್ರಿಕೆಟ್ ಸುದ್ದಿಗಳನ್ನು ಅದ್ಭುತವಾಗಿ ಬರೆಯುತ್ತಿದ್ದ ಅವರು ಕಾಕತಾಳೀಯ ಎಂಬಂತೆ ಗುರುವಾರದ ಭಾರತ-ಆಸ್ಟ್ರೇಲಿಯ ಪಂದ್ಯಾವಳಿ ವೀಕ್ಷಿಸಿದ ಬಳಿಕ ಹೃದಯಾಘಾತಕ್ಕೀಡಾಗಿದ್ದಾರೆ. ಗುರುವಾರದ ಪಂದ್ಯದಲ್ಲಿ ಭಾರತ ಕೇವಲ ನಾಲ್ಕು ರನ್‌ಗಳಿಂದ ಸೋಲು ಅನುಭವಿಸಿದ್ದು, ಕೊನೆಯ ಕ್ಷಣದಲ್ಲಿ ಪಂದ್ಯ ತೀವ್ರ ರೋಚಕವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ