ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ.ಬಂಗಾಳ ಅರಣ್ಯದಲ್ಲಿ ಬೃಹತ್ ಶಸ್ತ್ರಾಸ್ತ್ರ ಪತ್ತೆ (West Bengal | RDX | Firearms | Bankura)
Feedback Print Bookmark and Share
 
ಪಶ್ಚಿಮ ಬಂಗಾಳದ ಬಂಕುರಾ ಅರಣ್ಯದಲ್ಲಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ. ಶನಿವಾರ 10 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತಲಿದ್ದು, ಇದಕ್ಕೆ ಮುನ್ನಾದಿನ ಪೊಲೀಸರು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

18 ಕೆಜಿ ಆರ್‌ಡಿಎಕ್ಸ್, ಮೂರು ರಾಕೆಟ್ ಲಾಂಚರ್‌ಗಳು, ಎರಡು ಪಿಸ್ತೂಲುಗಳು ಮತ್ತು ಒಂದು ನೆಲಬಾಂಬ್ ಅರಣ್ಯಪ್ರದೇಶದಲ್ಲಿ ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಸಂಬಂಧ ಪೊಲೀಸರು ಯಾರನ್ನೂ ಇದುವರೆಗೆ ಬಂಧಿಸಿಲ್ಲ. ಇದು ನಕ್ಸಲರಿಗೆ ಸೇರಿದ ಶಸ್ತ್ರಾಸ್ತ್ರವೇ ಎಂಬುದನ್ನೂ ಪೊಲೀಸರು ಸ್ಪಷ್ಟಪಡಿಸಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ