ಶಾಲೆಯಿಂದ ಮರಳುತ್ತಿರುವ ಬಾಲಕಿಯೊಬ್ಬಳ ಮೇಲೆ ಬಾಲಕನೊಬ್ಬ ಆಸಿಡ್ ಎರಚಿರುವ ಘಟನೆ ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗೊಹಾನಾದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಅಭ್ಯಾಸ ನಡೆಸುತ್ತಿರುವ ಈ ಹುಡುಗಿ ತರಗತಿ ಮುಗಿಸಿ ಮನೆಗೆ ಮರಳುತ್ತಿದ್ದಾಗ ಸಜ್ಜನ್ ಅಲಿಯಾಸ್ ಮೀನು ಎಂಬ 14ರ ಹರೆಯದ ಬಾಲಕ ಆಸಿಡ್ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸಿಡ್ ದಾಳಿಗೀಡಾಗಿರುವ ಬಾಲಕಿಯನ್ನು ತಕ್ಷಣವೇ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದು, ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಬಾಲಕಿ ಸುಟ್ಟಗಾಯಗಳಿಂದ ಬಳಲುತ್ತಿದ್ದಾಳೆ.
ಪೊಲೀಸರು ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಸಿಡ್ ಎರಚಿದ ತಕ್ಷಣ ಆತ ಪರಾರಿಯಾಗಿದ್ದಾನೆ.