ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಾನಂಗಳದಲ್ಲಿ ಸಹಸ್ರಮಾನದ ಕಂಕಣ ಸೂರ್ಯಗ್ರಹಣ ಕೌತುಕ (eclipse | India | solar eclipse | Earth)
Bookmark and Share Feedback Print
 
ಬೆಂಗಳೂರು, ತಮಿಳುನಾಡಿನ ಮಧುರೈ, ಕನ್ಯಾಕುಮಾರಿ, ಕೇರಳದ ವರ್ಕಾಲ, ತಿರುವನಂತಪುರ ಸೇರಿದಂತೆ ದೇಶದ ಹಲವೆಡೆ ಸಹಸ್ರಮಾನದಲ್ಲೇ ದೀರ್ಘಾವಧಿ ಎನಿಸುವ ಕಂಕಣ ಸೂರ್ಯಗ್ರಹಣವನ್ನು ಲಕ್ಷಾಂತರ ಮಂದಿ ವೀಕ್ಷಿಸಿದರು.
PR


ಮೋಡದ ಕಾರಣದಿಂದ ಹಲವೆಡೆ ಸಾಮಾನ್ಯ ದೂರದರ್ಶಕಗಳಿಂದ ನಿರಂತರ ವೀಕ್ಷಣೆಗೆ ತಡೆಯುಂಟಾದರೂ, ವಿಶೇಷ ದರ್ಶಕಗಳ ಮೂಲಕ ತಾರಾಲಯಗಳಲ್ಲಿ ಸೂರ್ಯಗ್ರಹಣವನ್ನು ವೀಕ್ಷಿಸಲಾಯಿತು. ಯಾವುದೇ ಕಾರಣಕ್ಕೂ ಬರಿಗಣ್ಣಿನಲ್ಲಿ ಗ್ರಹಣ ವೀಕ್ಷಿಸುವ ಅಪಾಯಕ್ಕೆ ಕೈ ಹಾಕಬೇಡಿ ಎಂದು ಇದೇ ಸಂದರ್ಭದಲ್ಲಿ ತಾರಾಲಯಗಳು ಜನತೆಗೆ ಮನವಿ ಮಾಡಿಕೊಂಡಿದ್ದ ಕಾರಣ ಗ್ರಹಣ ವೀಕ್ಷಿಸುವ ಗ್ಲಾಸುಗಳು ಮತ್ತು ಇತರೆ ಸಾಧನಗಳ ಮೂಲಕ ಆಸಕ್ತರು ಗ್ರಹಣದ ಸುಂದರ ಕ್ಷಣಗಳನ್ನು ಸವಿದಿದ್ದಾರೆ.

ಭಾರತದಲ್ಲಿ ಬೆಳಿಗ್ಗೆ 11.05ಯಿಂದ ಅಪರಾಹ್ನ 3.11ರವರೆಗೆ ಕಂಕಣ ಸೂರ್ಯಗ್ರಹಣ ವೀಕ್ಷಣೆಗೆ ಲಭ್ಯವಾಗಿತ್ತು. ಬೆಂಗಳೂರು ಮತ್ತು ರಾಜ್ಯದ ಇತರೆಡೆ ಬೆಳಿಗ್ಗೆ 11.16ರಿಂದ ಅಪರಾಹ್ನ 3.11ರವರೆಗೆ ಸರಾಸರಿ ಶೇ.45ರ ಪ್ರಮಾಣದಲ್ಲಿ ಕಂಡು ಬಂದಿತ್ತು.

ಗ್ರಹಣವು ಭಾರತೀಯ ಕಾಲಮಾನದಂತೆ 9.35ಕ್ಕೆ ಉಗಾಂಡದಿಂದ ಆರಂಭಗೊಂಡು ನೈರೋಬಿ, ಆಫ್ರಿಕಾ, ಏಷಿಯಾ ಮೂಲಕ ಹಾದು ಹೋಗಿ ಸಂಜೆ 4.22ಕ್ಕೆ ಚೀನಾದಲ್ಲಿ ಅಂತ್ಯ ಕಂಡಿದ್ದು, ಭಾರತದ ಕನ್ಯಾಕುಮಾರಿ, ತೂತುಕುಡಿ, ರಾಮೇಶ್ವರ ಸಮೀಪದ ಧನುಷ್ಕೋಡಿ ಮುಂತಾದ ಕಡೆ 10 ನಿಮಿಷಗಳ ವೀಕ್ಷಣೆಗೆ ಲಭ್ಯವಾಗಿದೆ.

ಕೆಲವು ಕಡೆ ಮೂಢನಂಬಿಕೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಉಪವಾಸ ಮಾಡುವುದು ಮತ್ತು ದೇವಸ್ಥಾನಗಳನ್ನೂ ತೆರೆಯದೆ ಇದ್ದದ್ದು, ಸೇರಿದಂತೆ ಅಂಗವಿಕಲರ ಉದ್ಧಾರಕ್ಕಾಗಿ ಮಣ್ಣಿನಲ್ಲಿ ಕತ್ತುಮಟ್ಟ ಹೂತು ಹಾಕಿದ ಹಲವು ಪ್ರಸಂಗಗಳೂ ವರದಿಯಾಗಿವೆ.

ಈ ಗ್ರಹಣದ ವಿಶೇಷವೇನು?
ಭೂಮಿ ಮತ್ತು ಸೂರ್ಯನ ನಡುವೆ ಚಂದ್ರ ಅಡ್ಡ ಬಂದಾಗ ಸೂರ್ಯಗ್ರಹಣ ಸಂಭವಿಸುವುದು ಸಾಮಾನ್ಯ. ಆದರೆ ಈ ಬಾರಿಯ ಕಂಕಣ ಸೂರ್ಯಗ್ರಹಣದಲ್ಲಿ ಚಂದ್ರನು ಭೂಮಿಯಿಂದ ಸಾಮಾನ್ಯಕ್ಕಿಂತ ಹೆಚ್ಚು ದೂರದಲ್ಲಿರುತ್ತಾನೆ. ಹಾಗಾಗಿ ಸೂರ್ಯನನ್ನು ಸಂಪೂರ್ಣವಾಗಿ ಕಣ್ಮರೆ ಮಾಡುವಷ್ಟು ದೊಡ್ಡ ಗಾತ್ರದಲ್ಲಿರುವುದಿಲ್ಲ. ಆ ಕಾರಣದಿಂದ ಸೂರ್ಯನ ಮಧ್ಯಭಾಗ ಮಾತ್ರ ನಮಗೆ ಕಾಣಲು ಸಿಗುವುದಿಲ್ಲ. ಗೃಹಣದ ಗೋಚರತೆ ಕಂಕಣಾಕೃತಿಯಲ್ಲಿ ನಮಗೆ ಲಭ್ಯವಾಗುತ್ತದೆ.

ಇಂದಿನ ಕಂಕಣ ಸೂರ್ಯಗ್ರಹಣ ಹೊರತುಪಡಿಸಿದರೆ ಇದೇ ಗ್ರಹಣವನ್ನು ಮತ್ತೆ ನೋಡಬೇಕಾದರೆ 2020ರ ಜೂನ್ 21ರವರೆಗೆ ಕಾಯಬೇಕು. ಅಲ್ಲದೆ ಸುದೀರ್ಘ ಕಂಕಣ ಸೂರ್ಯಗ್ರಹಣವನ್ನೇ ವೀಕ್ಷಿಸಬೇಕಾದಲ್ಲಿ ಅದು 3043ರವರೆಗೆ ಸಾಧ್ಯವಿಲ್ಲ.
ಸಂಬಂಧಿತ ಮಾಹಿತಿ ಹುಡುಕಿ