ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೇಲ್ವರ್ಗದ ಬಡವರಿಗೂ ಮೀಸಲಾತಿ: ಹೈಕೋರ್ಟ್ ತೀರ್ಪು (Reservation | higher education | Kerala HC | Scheduled Caste)
Bookmark and Share Feedback Print
 
ಮುಂದುವರಿದ ಸಮುದಾಯಗಳ ಬಡವರಿಗೂ ಮೀಸಲಾತಿ ನೀಡುವ ಬಂದಿದ್ದ ಕೇರಳ ಸರಕಾರದ ನಿರ್ಧಾರವನ್ನು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಮುಸ್ಲಿಂ ಜಮಾತ್ ಹಿನ್ನಡೆ ಅನುಭವಿಸಿದ್ದು, ಆರ್ಥಿಕ ಪರಿಸ್ಥಿತಿಯನ್ನು ಮಾನದಂಡವಾಗಿರಿಸಿ ಮೀಸಲಾತಿ ನೀಡುವುದು ಸರಿ ಎಂದು ಕೋರ್ಟ್ ತೀರ್ಪಿತ್ತಿದೆ. ಇದರಿಂದ ಹಿಂದುಳಿದ ಸಮುದಾಯಗಳಿಗೆ ಹಿನ್ನಡೆಯುಂಟಾಗಿದೆ ಎಂಬ ಮಾತುಗಳೂ ಇದೇ ಸಂದರ್ಭದಲ್ಲಿ ಕೇಳಿ ಬಂದಿವೆ.

ಸರಕಾರಿ ಕಾಲೇಜುಗಳಲ್ಲಿ ಶೇ.10 ಹಾಗೂ ಯುನಿವರ್ಸಿಟಿಗಳಲ್ಲಿ ಶೇ.7.5ರಷ್ಟು ಸೀಟುಗಳನ್ನು ಮೇಲ್ವರ್ಗದ ಬಡತನ ರೇಖೆಯೊಳಗಿರುವ ವಿದ್ಯಾರ್ಥಿಗಳಿಗೆ ಮೀಸಲಾಗಿಡಬೇಕೆಂಬ ನಿರ್ಣಯವನ್ನು ಕೇರಳ ಸಚಿವ ಸಂಪುಟವು 2008ರ ಸೆಪ್ಟೆಂಬರ್‌ನಲ್ಲಿ ತೆಗೆದುಕೊಂಡಿತ್ತು. ಆದರೆ ಇದನ್ನು ಪ್ರಶ್ನಿಸಿದ್ದ ಮುಸ್ಲಿಂ ಜಮಾತ್, ಇದು ಸಂವಿಧಾನದ ಮೀಸಲಾತಿ ಹಂಚಿಕೆಗೆ ವಿರುದ್ಧವಾಗಿದೆ ಎಂದು ಹೈಕೋರ್ಟ್‌ನಲ್ಲಿ ವಾದಿಸಿತ್ತು.

ಮುಸ್ಲಿಂ ಜನಾಂಗದ ಪ್ರತಿನಿಧಿಯಾಗಿ ಜಮಾತ್ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿ ಹಾಕಿರುವ ಮುಖ್ಯ ನ್ಯಾಯಮೂರ್ತಿ ಎಸ್.ಆರ್. ಬನ್ನೂರ್‌ಮಠ ಮತ್ತು ಎ.ಕೆ. ಬಶೀರ್ ಅವರನ್ನೊಳಗೊಂಡ ಹೈಕೋರ್ಟ್ ವಿಭಾಗೀಯ ಪೀಠವು, ಧರ್ಮ ಮತ್ತು ಜಾತಿಯಾಧರಿತ ಮೀಸಲಾತಿ ವ್ಯವಸ್ಥೆಯಿಂದ ದೂರ ಸರಿಯಲು ಇದು ಸಕಾಲ ಎಂದು ತೀರ್ಪು ನೀಡಿದೆ.

ಮುಂದುವರಿದ ಸಮುದಾಯಗಳಲ್ಲಿನ ಅರ್ಹ ವಿದ್ಯಾರ್ಥಿಗಳು ಕೇವಲ ತಮ್ಮ ಆರ್ಥಿಕ ಸ್ಥಿತಿಯಿಂದಾಗಿ ಅವಕಾಶಗಳನ್ನು ಕಳೆದುಕೊಳ್ಳುವಂತಾಗಬಾರದು ಎಂದಿರುವ ನ್ಯಾಯಾಲಯವು, ಬಡತನ ಮತ್ತು ಆರ್ಥಿಕ ಹಿಂದುಳಿದಿರುವಿಕೆಗಳು ದುಷ್ಟ ಸಾಮಾಜಿಕ ಪಿಡುಗುಗಳು ಎಂದು ಇದೇ ಸಂದರ್ಭದಲ್ಲಿ ಬಣ್ಣಿಸಿದೆ.

ಹಿಂದುಳಿದವರಿಗೆ ಹಿನ್ನಡೆ?
ಉನ್ನತ ವ್ಯಾಸಂಗ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳ ಆರ್ಥಿಕ ಪರಿಸ್ಥಿತಿಗಳನ್ನು ಗಮನಿಸಿ ಮೀಸಲಾತಿ ನೀಡುವ ನ್ಯಾಯಾಲಯದ ತೀರ್ಪಿನಿಂದಾಗಿ ಹಿಂದುಳಿದ ವರ್ಗಗಳು ಹಿನ್ನಡೆ ಅನುಭವಿಸಿವೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ಸರಕಾರಿ ವಲಯಗಳಲ್ಲಿ ಮೀಸಲಾತಿ ನೀಡುವ ಸಂದರ್ಭ ಫಲಾನುಭವಿಗಳ ಪ್ರಗತಿಯನ್ನೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಸರಕಾರದ ನಿರ್ಧಾರವನ್ನು ಬೆಂಬಲಿಸಿ ತೀರ್ಪು ನೀಡಿತ್ತು.

ಮೀಸಲಾತಿ ಜಾರಿಯಾದಾಗಿನಿಂದ ಹಿಂದುಳಿದ ಜನಾಂಗಗಳು ಅದರ ಲಾಭವನ್ನು ಪಡೆಯುತ್ತಿದ್ದು ಪ್ರಸಕ್ತ ಸಾಕಷ್ಟು ಪ್ರಗತಿ ಕಂಡಿವೆ. ಮುಸ್ಲಿಂ ಸಮುದಾದ ಕೂಡ ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಸುಧಾರಣೆಯಾಗಿದೆ. ಹಾಗಾಗಿ ಔದ್ಯೋಗಿಕ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಮುದಾಯವನ್ನಾಧರಿತ ಮೀಸಲಾತಿಗಿಂತ ಆರ್ಥಿಕ ಪರಿಸ್ಥಿತಿಯನ್ನಾಧರಿಸಿದ ಮೀಸಲಾತಿ ಹೆಚ್ಚು ಸೂಕ್ತ. ಇದನ್ನು ಸಂಬಂಧಪಟ್ಟ ಜನಾಂಗಗಳು ಅರ್ಥ ಮಾಡಿಕೊಳ್ಳಬೇಕು ಎಂದು ವಿಭಾಗೀಯ ಪೀಠ ಹೇಳಿದೆ.

ನ್ಯಾಯಾಲಯದ ತೀರ್ಪು ನಮಗೆ ತೃಪ್ತಿ ತಂದಿಲ್ಲದಿರುವುದರಿಂದ ಮೇಲಿನ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸುವುದಾಗಿ ಮುಸ್ಲಿಂ ಸಂಘಟನೆಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ