ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತ್ಯಾನಂದ ಸ್ವಾಮಿ ಮಹಿಮೆಯ ತಮಿಳು ನಟಿ ರಂಜಿತಾಳಂತೆ..! (Paramahamsa Nityananda Swami | Tamil Nadu | Ranjitha | SUN news)
Bookmark and Share Feedback Print
 
PR
ತಮಿಳುನಾಡಿನ ಪರಮಹಂಸ ನಿತ್ಯಾನಂದ ಸ್ವಾಮೀಜಿಯ ಬಹಿರಂಗಗೊಂಡ ರಾಸಲೀಲೆ ವೀಡಿಯೋದಲ್ಲಿ ಕಾಣಿಸಿಕೊಂಡಿರುವವಳು ಒಂದು ಕಾಲದ ಜನಪ್ರಿಯ ನಟಿ ರಂಜಿತಾ ಎನ್ನುವುದು ಬಹುತೇಕ ಖಚಿತವಾಗಿದೆ.

ಸೀರೆ ಮತ್ತು ಚೂಡಿದಾರ್ ಹಾಕಿಕೊಂಡಿದ್ದ ಇಬ್ಬರು ಮಹಿಳೆಯರ ಜತೆ ರಾಸಲೀಲೆ ನಡೆಸುವ ವೀಡಿಯೋಗಳನ್ನು 'ಸನ್ ನ್ಯೂಸ್' ವಾರ್ತಾವಾಹಿನಿ ಪ್ರಸಾರ ಮಾಡಿತ್ತಾದರೂ ಅದು ನಟಿಯರ ಹೆಸರುಗಳನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಇಂಗ್ಲೀಷಿನ 'ಆರ್' ಅಕ್ಷರದಿಂದ ನಟಿಯ ಹೆಸರು ಆರಂಭವಾಗುತ್ತದೆ ಎಂಬ ಕ್ಲೂ ನೀಡಿತ್ತು.

ಇದು ರಂಜಿತಾ ಅಥವಾ ಮತ್ತೊಬ್ಬ ನಟಿ ರಾಗಸುಧಾ ಆಗಿರಬಹುದು ಎಂದೆಲ್ಲಾ ಇಂಟರ್ನೆಟ್ಟಿನಲ್ಲಿ ಭಾರೀ ಚರ್ಚೆಗಳು ನಡೆಯುತ್ತಿದ್ದವು. ತಮಿಳು ಮಾಧ್ಯಮಗಳ ಪ್ರಕಾರ ಸ್ವಾಮೀಜಿಯ ಕಾಮಕಾಂಡದಲ್ಲಿ ಪಾಲು ತೆಗೆದುಕೊಂಡವಳು ರಂಜಿತಾ ಎಂಬುದು ಖಚಿತವಾಗಿದೆ.

ಯಾರೀಕೆ ರಂಜಿತಾ?
ಜನಪ್ರಿಯ ನಿರ್ದೇಶಕ ಭಾರತೀರಾಜ ಅವರ ನಾಡೋಡಿ ತೆಂಡ್ರಾಲ್ (1992) ಚಿತ್ರದ ಮೂಲಕ ಈಕೆ ಸಿನಿಮಾ ಜಗತ್ತಿಗೆ ಪರಿಚಯಗೊಂಡಿದ್ದವಳು. ಆ ಬಳಿಕ ಹತ್ತಾರು ಚಿತ್ರಗಳಲ್ಲಿ ನಟಿಸುತ್ತಾ, ಕೊನೆ ಕೊನೆಗೆ ಮಸಾಲೆ ಪಾತ್ರಗಳಿಗಷ್ಟೇ ಸೀಮಿತವಾಗುತ್ತಾ ಬಂದವಳು.

ಜಾನಿ ವಾಕರ್, ಅಮಿದಿ ಪಾಡೈ, ಸುಂದರಿ ನೀಯುಂ ಸುಂದರನ್ ನಾನುಂ, ಕರ್ಮ, ಚಿನ್ನ ವತಿಯಾರ್, ಮಾವಿಚಿಗುರು, ಸುವರ್ಣ ಸಿಂಹಾಸನಂ, ಮೈಸಮ್ಮ ಐಪಿಎಸ್, ಕುಬೇರುಲು ಮತ್ತು ಆಂಜನೇಯುಲು ಮುಂತಾದ ತಮಿಳು-ತೆಲುಗು-ಮಲಯಾಳಂ ಚಿತ್ರಗಳಲ್ಲಿ ಈ ರಂಜಿತಾ ನಟಿಸಿದ್ದಾಳೆ.

ಸೆಕ್ಸ್ ಮತ್ತು ಆಧ್ಯಾತ್ಮ ಪರಸ್ಪರ ವೈರುಧ್ಯವಲ್ಲ!
ಬೆಂಗಳೂರಿನ ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ಕಲ್ಲುಗುಪ್ಪಹಳ್ಳಿಯಲ್ಲಿ ಸುಮಾರು 30 ಎಕರೆ ಪ್ರದೇಶದಲ್ಲಿ ಆಶ್ರಮ ಹೊಂದಿರುವ ಪರಮಹಂಸ ನಿತ್ಯಾನಂದ ಸ್ವಾಮೀಜಿ ರಾಸಲೀಲೆ ಬಹಿರಂಗವಾಗುತ್ತಿದ್ದಂತೆ ಇಲ್ಲಿನ ನಿತ್ಯಾನಂದ ಧ್ಯಾನಪೀಠದ ನಿತ್ಯ ಸಚ್ಚಿದಾನಂದ ಎಂಬವರು ಸ್ಪಷ್ಟನೆ ನೀಡಿರುವುದು ಹೀಗೆ.
PR


ಭೋಗ ಪುರುಷಾರ್ಥ ಮತ್ತು ಆಧ್ಯಾತ್ಮ ಎರಡನ್ನೂ ಪಾಲಿಸುವಂತೆ ನಿತ್ಯಾನಂದ ಧ್ಯಾನಪೀಠದ ಅನುಯಾಯಿಗಳಿಗೆ ಸ್ವಾಮೀಜಿಯವರು ಅನುಮತಿ ನೀಡಿದ್ದರು. ಭೋಗೈಕ್ಯ ಮತ್ತು ಆಧ್ಯಾತ್ಮ ಭಾವ ಪರಾಕಾಷ್ಠೆಯಲ್ಲಿರಬೇಕು ಎಂಬುದರಲ್ಲಿ ಸ್ವಾಮೀಜಿ ನಂಬಿಕೆ ಹೊಂದಿದ್ದರು ಎಂದು 45ರ ಹರೆಯದ ಸಚ್ಚಿದಾನಂದ 'ಡೆಕ್ಕನ್ ಹೆರಾಲ್ಡ್' ಪತ್ರಿಕೆಗೆ ತಿಳಿಸಿದ್ದಾರೆ.

ಮೋದಿ, ಯಡಿಯೂರಪ್ಪ, ಡಿಕೆಶಿ ಹಲವು ಬಾರಿ ಭೇಟಿಯಾಗಿದ್ದರು!
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕರ್ನಾಟಕದ ಹಲವು ರಾಜಕಾರಣಿಗಳು ಈ ಕಾಮುಕ ಸ್ವಾಮೀಜಿ ಜತೆ ವೇದಿಕೆ ಹಂಚಿಕೊಂಡಿದ್ದರು ಎಂಬ ವಿಚಾರಗಳು ಬಯಲಾಗುತ್ತಿದೆ.

ಸ್ವಾಮೀಜಿ ಅಕ್ರಮಗಳು ಬಯಲಿಗೆ ಬರುವ ಮೊದಲು ಸಾಚಾನಂತೆ ಇದ್ದ ಕಾರಣ ವೇದಿಕೆ ಹಂಚಿಕೊಳ್ಳದೇ ಇರಲು ಕಾರಣಗಳೇ ಇರಲಿಲ್ಲ ಎನ್ನುವುದು ಹಲವರ ಅಭಿಪ್ರಾಯ.

ರಾಜ್ಯಪಾಲ ಟಿಎನ್ ಚತುರ್ವೇದಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಡಿ.ಕೆ. ಶಿವಕುಮಾರ್ ಮತ್ತು ಚಿತ್ರತಾರೆಗಳಾದ ಸುದೀಪ್, ತಾರಾ, ಭಾರತಿ ವಿಷ್ಣುವರ್ದನ್ ಮತ್ತು ಅಂಬರೀಷ್ ಕೂಡ ಹಲವು ಬಾರಿ ಸ್ವಾಮೀಜಿಯನ್ನು ಭೇಟಿಯಾಗಿದ್ದರು ಎಂದು ತಾರಾ ಅವರ ಪತಿ ಎಚ್.ಸಿ. ವೇಣು ತಿಳಿಸಿದ್ದಾರೆ.

ಆಲದ ಮರ ತೋರಿಸಿ ಫೂಲ್ ಮಾಡಿದ್ದ!
ತಾನೇ ಭಗವಂತ, ಶಿವ ಎಂದೆಲ್ಲ ಪೋಸ್ ಕೊಡುತ್ತಾ ಆಂಗ್ಲ ಭಾಷೆಯಲ್ಲಿ ಪರಿಶುದ್ಧ ಪ್ರವಚನಗಳನ್ನು ನೀಡುತ್ತಾ ಭಕ್ತವೃಂದವನ್ನು ಮೋಸ ಮಾಡುತ್ತಾ ಬಂದಿರುವ 32ರ ಹರೆಯದ ನಿತ್ಯಾನಂದ ಸ್ವಾಮೀಜಿ, ಆಶ್ರಮದ ಬಳಿಯಿದ್ದ ಆಲದ ಮರವೊಂದನ್ನು ತೋರಿಸಿ ಭಕ್ತಾದಿಗಳಿಗೆ ಮಂಕುಬೂದಿ ಎರಚುತ್ತಿದ್ದ.

ತಾನು ಅಮೆರಿಕಾದಲ್ಲಿ ವಿಜ್ಞಾನಿಯಾಗಿದ್ದೆ ಎಂದೂ ಹೇಳಿಕೊಳ್ಳುತ್ತಿದ್ದ ನಿತ್ಯಾನಂದ ಸ್ವಾಮೀಜಿ ವಿದೇಶಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿರುವುದು ವಾಸ್ತವ ವಿಚಾರ. ಹಲವು ಅಂತಾರಾಷ್ಟ್ರೀಯ ಯುನಿವರ್ಸಿಟಿಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಛಾತಿಯೂ ಈ ಸ್ವಾಮೀಜಿಯದ್ದು.

ಅಂತಹ ಸ್ವಾಮೀಜಿ ಬೆಂಗಳೂರಿನಲ್ಲಿ ಏಳು ವರ್ಷಗಳ ಹಿಂದೆ ಆಶ್ರಮವೊಂದನ್ನು ತೆರೆದು, ಅಲ್ಲಿದ್ದ ಹಳೆಯ ಆಲದ ಮರವೊಂದನ್ನು ತೋರಿಸಿ, ಇದು 600 ವರ್ಷ ಹಳೆಯದ್ದಾಗಿದೆ, ಇಲ್ಲಿ ತಪಸ್ಸು ಮಾಡಿದರೆ, ಧ್ಯಾನ ಮಾಡಿದರೆ ಮುಕ್ತಿ ಖಚಿತ ಎಂದೆಲ್ಲಾ ಭಕ್ತರ ಕಿವಿಗಳಿಗೆ ಹೂವನ್ನಿಟ್ಟಿದ್ದ.

ಹಲವು ಸ್ವಾಮೀಜಿಗಳು, ರಾಜಕಾರಣಿಗಳು, ಗಣ್ಯ ವ್ಯಕ್ತಿಗಳು, ಜನಪ್ರಿಯ ಸಿನಿಮಾ ತಾರೆಗಳನ್ನು ಇಲ್ಲಿಗೆ ಕರೆಸಿ 'ಆನಂದೋತ್ಸವ' ಎಂಬ ಕಾರ್ಯಕ್ರಮವನ್ನೂ ನಡೆಸುತ್ತಿದ್ದ. ಈ ಕಾರ್ಯಕ್ರಮದಲ್ಲಿ ವಿದೇಶೀಯರೂ ಭಾರೀ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಎಂದು ಭಕ್ತರಾಗಿದ್ದವರು ವಿವರಿಸುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ