ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಬ್ಬಾ...ಆಕಸ್ಮಿಕ ಸಾವಿನ ಕುಣಿಕೆಯಿಂದ ಪಾರಾದೆ: ಫಾರೂಕ್ (Umar Farooq | Air India | aircraft crashed | surviving passengers)
Bookmark and Share Feedback Print
 
'ಇದೊಂದು ಜೀವಮಾನದಲ್ಲಿ ಮರೆಯಲಾರದ ಘಟನೆ, ಅಬ್ಬಾ ಅಂತೂ ಈ ದುರಂತದಲ್ಲಿ ಆಕಸ್ಮಿಕವಾಗಿ ಬದುಕಿಕೊಂಡೆ'...ಹೀಗೆಂದು ಅಭಿಪ್ರಾಯವ್ಯಕ್ತಪಡಿಸಿದವರು, ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತದಲ್ಲಿ ಸಾವಿನ ಮನೆಯ ಕದತಟ್ಟಿ ಬದುಕುಳಿದ ಉಮರ್ ಫಾರೂಕ್ ಎಂಬವರ ಮಾತು.

ಶನಿವಾರ ಮುಂಜಾನೆ ಮಂಗಳೂರಿನ ವಿಮಾನ ನಿಲ್ದಾಣದ ಕೆಂಜಾರುವಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಫಾರೂಕ್ ಅವರ ಮುಖ ಮತ್ತು ಕೈಯ ಭಾಗಗಳು ಸುಟ್ಟು ಹೋಗಿದ್ದವು. ಆದರೆ ವಿಮಾನ ಲ್ಯಾಂಡ್ ಆಗುವ ಮುನ್ನವೇ ವಿಮಾನದ ಟೈಯರ್ ಸ್ಫೋಟಗೊಂಡು, ವಿಮಾನದ ರೆಕ್ಕೆಯ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಈ ಸಂದರ್ಭದಲ್ಲಿ ಫಾರೂಕ್ ವಿಮಾನದಿಂದ ಹೊರಜಿಗಿಯುವ ಮೂಲಕ ಸಾವಿನ ಕುಣಿಕೆಯಿಂದ ಪಾರಾಗಿದ್ದರು.

ಲ್ಯಾಂಡ್ ಆಗುವ ಸಂದರ್ಭದಲ್ಲಿ ಭಾರೀ ಸದ್ದು ಕೇಳಿಸಿತ್ತು, ನಂತರ ಬೆಂಕಿ ಹೊತ್ತಿಕೊಂಡ ವಿಮಾನದ ಸುತ್ತ ಭಾರೀ ಪ್ರಮಾಣದಲ್ಲಿ ಹೊಗೆ ಎದ್ದಿರುವುದಾಗಿ ಫಾರೂಕ್ ವಿವರಿಸಿದ್ದರು. ಅಲ್ಲದೇ ವಿಮಾನದ ಒಂದು ಭಾಗ ಮುರಿಯುತ್ತಿರುವುದನ್ನು ಕಂಡ ತಾನು ಹೊರ ಜಿಗಿದಿರುವುದಾಗಿ ಹೇಳಿದರು.

ಹೊರಬಿದ್ದ ನಂತರ ತಾನು ಕಡಿದಾದ ದಾರಿಯಲ್ಲಿ ಸುಮಾರು ಅರ್ಧ ಕಿಲೋ ಮೀಟರ್‌ನಷ್ಟು ನಡೆದುಕೊಂಡು ಬರುತ್ತಿರುವಾಗ ತನ್ನನ್ನು ಸ್ಥಳೀಯರು ಗಮನಿಸಿದ್ದರು. ನಂತರ ಫಾರೂಕ್ ಅವರನ್ನು ಮೋಟಾರ್ ಸೈಕಲ್‌ನಲ್ಲಿ ಸ್ಥಳೀಯರು ಕರೆದುಕೊಂಡು ಹೋಗಿ, ನಂತರ ರಿಕ್ಷಾದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದರು ಎಂದು ತಿಳಿಸಿದರು.

ವಿಮಾನ ದುರಂತದಲ್ಲಿ 158 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದರು, ಆದರೆ ಅದೃಷ್ಟವಶಾತ್ ಎಂಬಂತೆ ಫಾರೂಕ್ ಸೇರಿದಂತೆ ಎಂಟು ಮಂದಿ ಪ್ರಯಾಣಿಕರು ಸಾವಿನ ದವಡೆಯಿಂದ ಪಾರಾಗಿದ್ದರು.
ಸಂಬಂಧಿತ ಮಾಹಿತಿ ಹುಡುಕಿ