ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದೇಶ ಕಂಡ 11 ಪ್ರಮುಖ ವಿಮಾನ ದುರಂತಗಳು (Mangalore Plane Crash | Plane Accidents in India | Bajpe Airport | Mishap)
Bookmark and Share Feedback Print
 
ಮಂಗಳೂರಿನಲ್ಲಿ ಶನಿವಾರ 158 ಮಂದಿಯನ್ನು ಬಲಿತಗೆದುಕೊಂಡ ವಿಮಾನ ದುರಂತವು, 1962ರಿಂದೀಚೆಗೆ ದೇಶ ಕಂಡ 11ನೇ ಭಾರತೀಯ ವಿಮಾನ ದುರಂತವಾಗಿದೆ.

ಈ ಹಿಂದೆ ನಡೆದಿರುವ ವಿಮಾನ ದುರಂತಗಳ ಪಟ್ಟಿ ಇಲ್ಲಿದೆ

* 1962, ಜುಲೈ 7: ಸಿಡ್ನಿಯಿಂದ ಬರುತ್ತಿದ್ದ ಆಲಿಟಾಲಿಯಾ 771 ವಿಮಾನವು ಮುಂಬೈಯ ಈಶಾನ್ಯ ಭಾಗದಲ್ಲಿ ಪತನವಾಗಿ ಎಲ್ಲ 94 ಮಂದಿಯ ಸಾವು

* 1978, ಜನವರಿ 1: ದುಬೈಗೆ ತೆರಳುತ್ತಿದ್ದ ಏರ್ ಇಂಡಿಯಾ 855 ವಿಮಾನವು ಮುಂಬಯಿಯ ಬಾಂದ್ರಾ ತೀರದಲ್ಲಿ ಅಪ್ಪಳಿಸಿ ಎಲ್ಲ 213 ಮಂದಿ ಸಾವು

* 1982 ಜೂನ್ 21: ಕೌಲಾಲಂಪುರದಿಂದ ಚೆನ್ನೈ ಮೂಲಕ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಮುಂಬಯಿ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ 12 ಸಿಬ್ಬಂದಿಗಳಲ್ಲಿ ಇಬ್ಬರು ಹಾಗೂ 99 ಪ್ರಯಾಣಿಕರಲ್ಲಿ 15 ಮಂದಿ ಸಾವು.

* 1985 ಜೂನ್ 23: ಮಾಂಟ್ರಿಯಲ್‌ನಿಂದ ಲಂಡನ್-ದೆಹಲಿ ಮಾರ್ಗವಾಗಿ ಮುಂಬಯಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಐರಿಷ್ ವಾಯುಕ್ಷೇತ್ರದಲ್ಲಿ ಸ್ಫೋಟಿಸಿ ಎಲ್ಲ 329 ಮಂದಿ ಮೃತ್ಯು

* 1988 ಅಕ್ಟೋಬರ್ 19: ಮುಂಬಯಿಯಿಂದ ಅಹಮದಾಬಾದ್‌ಗೆ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ ಗಮ್ಯ ನಿಲ್ದಾಣದಲ್ಲಿ ಪತನವಾಗಿ 130 ಮಂದಿ ಸಾವು

* 1990 ಫೆಬ್ರವರಿ 14: ಮುಂಬಯಿಯಿಂದ ಬರುತ್ತಿದ ಇಂಡಿಯನ್ ಏರ್‌ಲೈನ್ಸ್ ವಿಮಾನ ಬೆಂಗಳೂರು ನಿಲ್ದಾಣದಲ್ಲಿ ಪತನವಾಗಿ 92 ಮಂದಿ ಸಾವು. ಇದರಲ್ಲಿ 54 ಮಂದಿ ಬದುಕುಳಿದಿದ್ದರು.

* 1991 ಆಗಸ್ಟ್ 16: ಕೋಲ್ಕತಾದಿಂದ ಬರುತ್ತಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನ ಇಂಫಾಲದ ನೈಋತ್ಯ ಭಾಗದಲ್ಲಿ ಪತನವಾಗಿ ಎಲ್ಲ 69 ಮಂದಿ ಮರಣ

* 1993 ಏಪ್ರಿಲ್ 26: ದೆಹಲಿಯಿಂದ ಮುಂಬಯಿಗೆ ಕನೆಕ್ಟಿಂಗ್ ಪಥದಲ್ಲಿದ್ದ ಮತ್ತು ಜೈಪುರ ಹಾಗೂ ಉದಯಪುರಗಳಲ್ಲಿ ನಿಲುಗಡೆಯಿದ್ದ ಇಂಡಿಯನ್ ಏರ್‌ಲೈನ್ಸ್ ವಿಮಾನವು ಔರಂಗಾಬಾದ್‌ನಲ್ಲಿ ಟೇಕಾಫ್ ಆಗುತ್ತಿದ್ದಾಗ ಟ್ರಕ್ ಒಂದಕ್ಕೆ ಬಡಿದು, 63 ಮಂದಿ ಮೃತ್ಯು. 55 ಮಂದಿ ಪಾರು.

* 1996 ನವೆಂಬರ್ 12: ದೆಹಲಿ ಸಮೀಪದ ಚರ್ಖಿ ದಾದ್ರಿ ಆಕಾಶದಲ್ಲಿ ಸೌದಿ ಅರೇಬಿಯ ಏರ್‌ಲೈನ್ಸ್ ಮತ್ತು ಕಜಕಿಸ್ತಾನ ಏರ್‌ಲೈನ್ಸ್ ವಿಮಾನಗಳು ಡಿಕ್ಕಿಯಾಗಿ ಎರಡೂ ವಿಮಾನಗಳ ಎಲ್ಲ 349 ಮಂದಿ ಸಾವು

* 2000 ಜುಲೈ 17: ಪಾಟ್ನಾ ವಿಮಾನ ನಿಲ್ದಾಣದಲ್ಲಿ ಅಲಯನ್ಸ್ ಏರ್ ವಿಮಾನ ಪತನವಾಗಿ 60 ಮಂದಿ ಸಾವು

* 2010 ಮೇ 22: ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುರಂತ ನಡೆದು 158 ಮಂದಿ ಸಾವು, 8 ಮಂದಿ ಪಾರು
ಸಂಬಂಧಿತ ಮಾಹಿತಿ ಹುಡುಕಿ