ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಬಾಮ ಕಮಾಂಡೋ ನಾಯಿ 'ಖಾನ್'ಗೆ ಪಾಸ್‌ಪೋರ್ಟ್ (Barack Obama | MWD Khan | Sniffer Dog | US Commando | Obama in Mumbai)
Bookmark and Share Feedback Print
 
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕ ವಾಯುಪಡೆಯ ಹರ್ಕ್ಯುಲಿಸ್ ಸಿ130 ವಿಮಾನದಲ್ಲಿ ಬಂದಿಳಿದ ಈ ಅತಿಥಿಯ ಹೆಸರು ಖಾನ್. ಎಂಡಬ್ಲ್ಯುಡಿ ಖಾನ್. ಈತ ಬಂದಿರುವುದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ರಕ್ಷಣೆಗೆ.

ಅಮೆರಿಕವಲ್ಲದೆ, ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ವಿರುದ್ಧ, ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಬರಾಕ್ ಒಬಾಮರಿಗೂ ಈ ಖಾನ್‌ಗೂ ಇರುವ ಸಂಬಂಧವೇನು ಎಂದು ಅಚ್ಚರಿಗೊಳ್ಳಬೇಡಿ. ಇದು ಅಮೆರಿಕ ವಾಯುಪಡೆಯ ಶ್ವಾನ. ಮುಂಬೈ ಭೇಟಿ ವೇಳೆ ಒಬಾಮ ಭದ್ರತೆಗೆ ಆಗಮಿಸಿರುವ ಕಮಾಂಡೋ ಪಡೆಯ ನಾಯಿಯಿದು.

ಬೆಲ್ಜಿಯನ್ ಮೂಲದ ಜರ್ಮನ್ ಶೆಫರ್ಡ್ ನಾಯಿಗೆ ಅಮೆರಿಕದ ಪಾಸ್‌ಪೋರ್ಟ್ ಕೂಡ ಇದೆ. ಅದರಲ್ಲಿ ಎಂಡಬ್ಲ್ಯುಡಿ ಖಾನ್ ಎಂಬ ಹೆಸರಿದೆ. ಎಂಡಬ್ಲ್ಯುಡಿ ಎಂದರೆ 'ಮಿಲಿಟರಿ ವರ್ಕಿಂಗ್ ಡಾಗ್' ಎಂಬುದರ ಸಂಕ್ಷಿಪ್ತರೂಪ.

ನಾಯಿಯ ಕೊರಳಲ್ಲಿ ಲೋಹದ ಪಟ್ಟಿಯಿದ್ದು, ಅದರಲ್ಲಿ ಈ ಹೆಸರು ಕೆತ್ತಲಾಗಿದೆ. ಅದರ ಬಾಯಿಗೆ ಚರ್ಮದ ಪಟ್ಟಿ ಸುತ್ತಲಾಗಿದೆ. ಬೇರೆ ಯಾರ ಮೈಕೈಗೂ ದಿಢೀರನೇ ಬಾಯಿ ಹಾಕಬಾರದೆಂಬ ಕಾರಣಕ್ಕೆ. ಮುಂದಿನ ಕೆಲವು ದಿನಗಳ ಕಾಲ ಒಬಾಮ ಅವರು ಎಲ್ಲೆಲ್ಲಾ ತಂಗುತ್ತಾರೋ ಅಲ್ಲೆಲ್ಲಾ ಇದು ಓಡಾಡಲಿದೆ. ಸೇನಾ ಕಮಾಂಡೋಗೆ ಯಾವೆಲ್ಲಾ ಸವಲತ್ತುಗಳಿವೆಯೋ, ಅವೆಲ್ಲವೂ ಈ ನಾಯಿಗೆ ದೊರೆಯುತ್ತಿದೆ.

ಭಯೋತ್ಪಾದಕ ಸಂಘಟನೆಗಳು ಹೆಚ್ಚಾಗಿ ಬಳಸುವ ಮಾರಣಾಂತಿಕವಾದ ಆರ್‌ಡಿಎಕ್ಸ್, ಸೆಮ್‌ಟೆಕ್ಸ್ ಮತ್ತು ಸಿ4 ಮುಂತಾದ ಸ್ಫೋಟಕ ವಸ್ತುಗಳನ್ನು ಆಘ್ರಾಣಿಸಿ ಪತ್ತೆ ಹಚ್ಚುವಂತೆ ಈ ನಾಯಿಗೆ ಸಖತ್ ತರಬೇತಿ ನೀಡಲಾಗಿದೆ.

ಮೂಸುವುದೇ ಇದರ ಕಾಯಕ. ಇದರ ಜೊತೆಗೆ ಅಮೆರಿಕ ಸೇನೆಯ ಬಾಂಬ್ ನಿಷ್ಕ್ರಿಯ ದಳವೂ ಸಹಕರಿಸಲಿದೆ.

ಇದೇ ವೇಳೆ ಒಬಾಮ ರಕ್ಷಣೆಗೆ 3 ಮಹಿಳೆಯರೂ ಇರುವ 40 ಸಾದಾ ದಿರಿಸಿನ ಕಮಾಂಡೋಗಳ ಪಡೆಯೂ ಸಿ130 ವಿಮಾನದಲ್ಲಿ ಬಂದಿಳಿದಿದೆ. ಈ ವಿಮಾನದಲ್ಲಿ ಒಬಾಮ ರಕ್ಷಣೆಗಾಗಿ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳೂ ತುಂಬಿವೆ. ಒಬಾಮ ಭಾರತ ಭೇಟಿ ವೇಳೆ, ದೀಪಾವಳಿ ಅವಧಿಯಲ್ಲಿ ಅಲ್ ಕೈದಾ ಉಗ್ರರು ದಾಳಿ ನಡೆಸುತ್ತಾರೆಂಬ ಕುರಿತು ಬೇಹುಗಾರಿಕಾ ಸುಳಿವು ದೊರೆತ ಹಿನ್ನೆಲೆಯಲ್ಲಿ ಈ ಪರಿಯ ರಕ್ಷಣಾ ವ್ಯವಸ್ಥೆ.
ಸಂಬಂಧಿತ ಮಾಹಿತಿ ಹುಡುಕಿ