ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಮ್ಮ ಎಂಪಿಗಳಿಗೆ ದಿಲ್ಲಿಯಲ್ಲಿನ್ನು ಹೈಟೆಕ್ ಮನೆಗಳು (Hi-tech Houses for MPs | South | North Avenue)
ಇನ್ನು ಸಂಸತ್ ಸದಸ್ಯರಾಗುವವರಿಗೆ ಗದ್ದುಗೆಯಿರುವ ದಿಲ್ಲಿಯಲ್ಲಿ ಭರ್ಜರಿ ಬಂಗಲೆಗಳು ದೊರೆಯಲಿವೆ. ನಾರ್ತ್ ಮತ್ತು ಸೌತ್ ಅವೆನ್ಯೂಗಳಲ್ಲಿರುವ ಈಗಿನ ಮನೆಗಳನ್ನು ನಾಶಪಡಿಸಿ ಹೊಚ್ಚ ಹೊಸದಾಗಿ, ಮೂರು ಮಹಡಿಗಳುಳ್ಳ, ಅತ್ಯಾಧುನಿಕ ಮನೆಗಳು ರೂಪುಗೊಳ್ಳಲಿವೆ.

ತಲಾ 55 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಮನೆಗಳಲ್ಲಿ, ಡಿಜಿಟಲ್ ನಿಯಂತ್ರಣವಿರುವ ಬಾಗಿಲುಗಳು ಇರಲಿವೆ. ಪ್ರಸ್ತುತ ನಾರ್ತ್ ಅವೆನ್ಯೂನಲ್ಲಿ 193 ಹಾಗೂ ಸೌತ್ ಅವೆನ್ಯೂನಲ್ಲಿ 163 ಸಂಸದರು ಮನೆಗಳಲ್ಲಿ ವಾಸಿಸುತ್ತಿದ್ದಾರೆ.

ಪುನರುತ್ಥಾನ ಯೋಜನೆ ಪ್ರಕಾರ, ಒಟ್ಟು 414 ಅತ್ಯಾಧುನಿಕ ಟೈಪ್-6 ಮನೆಗಳನ್ನು ನಿರ್ಮಿಸಲಾಗುತ್ತದೆ. ಹೊಸ ಬ್ಲಾಕ್‌ಗಳ ಸೇರ್ಪಡೆಯೊಂದಿಗೆ 58 ಸಂಸದರ ಮನೆಗೆ ಹೆಚ್ಚು ಅವಕಾಶ ದೊರೆಯುತ್ತದೆ ಎಂದು ನಗರಾಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

80 ವರ್ಷಗಳ ಹಿಂದೆ ಕಟ್ಟಲಾಗಿರುವ ಈಗಿನ ಮನೆಗಳ ನಿರ್ವಹಣೆಯೇ ದೊಡ್ಡ ತ್ರಾಸದಾಯಕ ಕೆಲಸ. ಅವುಗಳಿಗೆ ಒಬ್ಬೊಬ್ಬ ಸಂಸದರ ಇಚ್ಛೆಯಂತೆ ಸಾಕಷ್ಟು ಮಾರ್ಪಾಟುಗಳನ್ನು ಮಾಡಲಾಗಿದ್ದು, ಆಕಾರವೆಲ್ಲವೂ ಕೆಟ್ಟು ಹೋಗಿವೆ. ಇದರನ ನಿರ್ವಹಣೆಗೂ ಸಾಕಷ್ಟು ಹಣ ವ್ಯರ್ಥವಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಲುಟ್ಯೆನ್ ಪ್ರದೇಶದಲ್ಲಿರುವ 27.4 ಎಕರೆ ಭೂಮಿಯಲ್ಲಿ ನಾರ್ತ್ ಅವೆನ್ಯೂನಲ್ಲಿ 40 ಬ್ಲಾಕ್‌ಗಳು ಹಾಗೂ ಸೌತ್ ಅವೆನ್ಯೂನಲ್ಲಿ 37 ಬ್ಲಾಕ್‌ಗಳು ಇರಲಿವೆ. ಎಲ್ಲೆಡೆ ಸಿಸಿಟಿವಿ ಅಳವಡಿಸಲಾಗುತ್ತದೆ. ಈ ಪ್ರದೇಶದಲ್ಲಿ ಸಾಕಷ್ಟು ಕಳ್ಳತನಗಳೂ ಆಗಿರುವುದರಿಂದ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ.

ಕಟ್ಟಡ ವಿನ್ಯಾಸವನ್ನು ಸಿಪಿಡಬ್ಲ್ಯುಡಿ ತಜ್ಞರು ಮಾಡಿದ್ದು, ನಾಲ್ಕು ಬೆಡ್ ರೂಂಗಳು, ಅಟ್ಯಾಚ್ಡ್ ಬಾತ್‌ರೂಂ, ಅಡುಗೆ ಮನೆ, ಕಚೇರಿ/ಅಧ್ಯಯನ ಕೊಠಡಿ, ಡ್ರಾಯಿಂಗ್ ರೂಂ ಮತ್ತು ಡೈನಿಂಗ್ ಹಾಲ್‌ಗಳು ಇರಲಿವೆ. ಜೊತೆಗೆ ಗ್ಯಾರೇಜುಗಳು, ಆಳುಗಳ ಕ್ವಾರ್ಟರ್ಸ್‌ಗಳು, ಡಿಸ್ಪೆನ್ಸರಿ, ಕ್ಯಾಂಟೀನ್, ಸಮುದಾಯ ಭವನಗಳು ಕೂಡ ಇರಲಿವೆ. ದೆಹಲಿ ನಗರಾಭಿವೃದ್ಧಿ ಆಯುಕ್ತರಿಂದ ಅಂಗೀಕಾರ ದೊರೆತ ಬಳಿಕ ಪ್ರಸ್ತಾವನೆಯನ್ನು ಪ್ರಧಾನಿ ಕಚೇರಿಗೆ ಅಂತಿಮ ಅನುಮತಿಗಾಗಿ ಕಳುಹಿಸಿಕೊಡಲಾಗುತ್ತದೆ. ನಂತರ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ.
ಇವನ್ನೂ ಓದಿ