ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆಂಡ್ತಿಗೆ ರಾಖಿ ಕಟ್ಟಿ ಪ್ರಿಯಕರನ ಕೈಗೊಪ್ಪಿಸಿದ ವರ! (Husband agrees to treat wife as sister)
WD
ಇದು ಸಿನಿಮಾ ಕಥೆಯಲ್ಲ. ನಿಜ ಘಟನೆ. ಇಷ್ಟವಿಲ್ಲದೆ ಮದುವೆಯಾಗಿದ್ದ ತನ್ನ ಪತ್ನಿಯನ್ನು ಸಹೋದರಿ ಎಂದು ಪರಿಗಣಿಸಿದ ನವ ವಿವಾಹಿತನೊಬ್ಬ, ಆಕೆಯನ್ನು ಅವಳ ಪ್ರಿಯಕರನ ಕೈಗೊಪ್ಪಿಸಿ ಪ್ರೇಮಿಗಳನ್ನು ಒಂದುಗೂಡಿಸಿದ್ದಾನೆ.

ನಿತೇಶ್ ತ್ಯಾಗಿ ಎಂಬ 21ರ 'ವರ', ತನ್ನನ್ನು ಆಗಷ್ಟೇ ಮದುವೆಯಾಗಿದ್ದ ಆರತಿಯ ಕೈಗೆ ರಾಖಿ ಕಟ್ಟಿ, ಅವಳ ಪೋಷಕರ ವಿರೋಧ, ಬೆದರಿಕೆಗಳಿಗೆಲ್ಲಾ ಮಣಿಯದೆ, ಅವಳನ್ನು ಅವಳ ಪ್ರಿಯಕರನಿಗೆ ವಿವಾಹ ಮಾಡಿಸಿಬಿಟ್ಟಿದ್ದಾನೆ.

"ಇಷ್ಟವಿಲ್ಲದೆ ಬೇರೊಬ್ಬ ಮಾಲೀಕನ ಕೈಗೆ ಒಪ್ಪಿಸಲಾಗುವ ಪ್ರಾಣಿ ಕೂಡ ವಾಪಸ್ ತನ್ನ ಒಡೆಯನ ಬಳಿಗೇ ಓಡಿ ಬರುತ್ತದೆ. ಇಷ್ಟವಿಲ್ಲದಿದ್ದರೂ ಮದುವೆಯಾದ ಸುಶಿಕ್ಷಿತ ಮತ್ತು ಸೂಕ್ಷ್ಮಪ್ರಜ್ಞೆಯ ಯುವತಿಯ ಜೀವನದ ಪ್ರಶ್ನೆಯಿದು. ನನ್ನ ಮಗನ ನಿರ್ಧಾರದ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ನಿತೇಶ್ ತಂದೆ ಅನಿಲ್ ತ್ಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದೀಗ ಈ ಯುವತಿ ಆರತಿ, ತನ್ನ ಪೊಲೀಸ್ ಅಧಿಕಾರಿಯಾಗಿರುವ ತನ್ನ ತಂದೆಯಿಂದಲೇ ಜೀವಬೆದರಿಕೆಯಿದೆ, ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆ ಹೋಗಿದ್ದಾಳೆ.

ಮತ್ತೂ ವಿಶೇಷವೆಂದರೆ, ಆರತಿಯ ತಂದೆ ಅನಿಲ್ ತ್ಯಾಗಿ ಉತ್ತರಾಖಂಡದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್. ಮೇ 6ರಂದು ದೇವಲೋಕ ಕಾಲನಿ ನಿವಾಸಿ ನಿತೀಶ್ ಜತೆಗೆ ಆರತಿಯ ವಿವಾಹವಾಗಿತ್ತು. ಆದರೆ 'ನನ್ನ ಇಷ್ಟಕ್ಕೆ ವಿರುದ್ಧವಾಗಿ ಪೋಷಕರು ಮದುವೆ ಮಾಡಿಸಿದ್ದಾರೆ. ನಾನು ಈ ಹಿಂದೆಯೇ ವಿನೀತ್ ಎಂಬಾತನನ್ನು ಪ್ರೇಮಿಸಿ ದೇವಸ್ಥಾನದಲ್ಲಿ ರಹಸ್ಯವಾಗಿ ಮದುವೆಯಾಗಿದ್ದೇನೆ. ದಯವಿಟ್ಟು ನನ್ನನ್ನು ಪ್ರಿಯಕರನೊಂದಿಗೆ ಬಾಳಲು ಬಿಡಿ' ಎಂದು ಆರತಿ, ತನ್ನ ಹೊಸ ಪತಿಯ ಕಾಲಿಗೆ ಬಿದ್ದು ಅಳುತ್ತಾ ಹೇಳಿದ್ದಳು.

ಹಾಗಿದ್ದರೆ, ಈಕೆ ನಿತೀಶ್‌ನನ್ನೇಕೆ ವರಿಸುವ ಅನಿವಾರ್ಯತೆ ಉಂಟಾಯಿತು? ಇದಕ್ಕೆ ಮತ್ತೊಂದು ಕಥೆಯಿದೆ!

ಆರತಿಯ ಅಕ್ಕನ ಮದುವೆಯು ನಿತೀಶ್ ಜತೆ ನಿಶ್ಚಯವಾಗಿತ್ತು. ಆದರೆ, ಅವಳು ಕೂಡ ತನ್ನ ಪ್ರಿಯಕರ (ಆತ ಕೂಡ ತರಬೇತಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್) ನೊಂದಿಗೆ ಓಡಿ ಹೋದಾಗ, ಮುಖವುಳಿಸಿಕೊಳ್ಳುವ ಪ್ರಯತ್ನವಾಗಿ ಆರತಿಯ ತಂದೆಯು, ಅದೇ ದಿನ ಅದೇ ಮಂಟಪದಲ್ಲಿ ತನ್ನ ಕಿರಿಯ ಮಗಳನ್ನು ನಿತೀಶ್‌ಗೆ ಕೊಟ್ಟು ವಿವಾಹ ಮಾಡಿಸಬೇಕಾಗಿಬಂದಿತ್ತು.

ಅಂತೆಯೇ ನಿತೀಶ್‌ನ ತಂದೆಯು 'ಸೊಸೆ'ಯಾಗಿದ್ದ ಆರತಿಯನ್ನು ತನ್ನ ಮಗಳು ಎಂದೇ ಪರಿಗಣಿಸಲು ಒಪ್ಪಿದ್ದಾರೆ. ವಿವಾಹದ ಮರುದಿನವೇ ಆರತಿಯು ತನ್ನ ಪರಿಸ್ಥಿತಿಯನ್ನು ನಿತೀಶ್ ಜತೆ ಹೇಳಿಕೊಂಡಿದ್ದಳು. ತಕ್ಷಣವೇ ನಿತೀಶ್, ಆಕೆಗೆ ರಾಖಿ ಕಟ್ಟಿದ. ಆತನ ತಂದೆ ತಾಯಿ ಕೂಡ ಇದಕ್ಕೊಪ್ಪಿ, ಅಂದಿನಿಂದ ಇದುವರೆಗೆ ಅವರ ಮನೆಯಲ್ಲಿಯೇ ಮನೆಮಗಳು ಅಂತ ಇರಿಸಿಕೊಂಡಿದ್ದರು.
ಇವನ್ನೂ ಓದಿ