ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೌನ ಮುರಿದ ಪಿಎಂ:ಯಾರ ಕೈಗೊಂಬೆ ಅಲ್ಲ; ನಾನೇ ಬಾಸ್! (Manmohan Singh | lameduck | Congress party | Sonia Gandhi | Rahul Gandhi)
PTI
ದೇಶದಲ್ಲಿ ಏನೇ ಆದರೂ ನಮ್ಮ ಪ್ರಧಾನಮಂತ್ರಿ ತುಟಿಬಿಚ್ಚುತ್ತಿಲ್ಲ ಎಂಬ ಟೀಕೆಯಿಂದ ಕೊನೆಗೂ ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಪತ್ರಿಕಾ ಸಂಪಾದಕರ ಜತೆ ಮಾತನಾಡುವ ಮೂಲಕ ಮೌನ ಮುರಿದಿದ್ದು, 'ತಾನು ಯಾರ ಕೈಗೊಂಬೆಯೂ ಅಲ್ಲ, ದುರ್ಬಲನೂ ಅಲ್ಲ, ನಾನೇ ಬಾಸ್' ಎಂದು ತಿಳಿಸಿದ್ದಾರೆ.

ತಾನು ಕೈಗೊಂಬೆಯಂತಿರುವ ಪ್ರಧಾನಿ ಎಂಬ ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಮನಮೋಹನ್ ಸಿಂಗ್,ಪ್ರಧಾನಿಯಾಗಿ ನನ್ನ ಕಾರ್ಯಗಳು ನನಗೆ ತೃಪ್ತಿ ತಂದಿದೆ. ಆ ಬಗ್ಗೆ ಕಾಂಗ್ರೆಸ್‌ನಿಂದಲೂ ಯಾವುದೇ ಆಕ್ಷೇಪಾರ್ಹ ದೃಷ್ಟಿಕೋನ ಹೊಂದಿಲ್ಲ. ನನಗೆ ಪಕ್ಷದ ಸಂಪೂರ್ಣ ಬೆಂಬಲವಿರುವುದಾಗಿ ಹೇಳಿದರು.

ಬುಧವಾರ ಪ್ರಧಾನಿ ನಿವಾಸದಲ್ಲಿ ಸಂಪಾದಕರ ಜತೆ ನಡೆದ ಸಂವಾದದಲ್ಲಿ ಅವರು ಹಗರಣ, ವಿವಾದ ಹಾಗೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ವಿಸ್ತ್ರವಾಗಿ ಮಾತನಾಡಿದರು.

ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರ ಸಹಕಾರ ನನಗಿದೆ. ಆದರೆ ಅವರು ಯಾವತ್ತೂ ನನ್ನ ಕಾರ್ಯವ್ಯಾಪ್ತಿಯಲ್ಲಿ ಮೂಗು ತೂರಿಸುವುದಾಗಲಿ, ಅಡ್ಡಿಪಡಿಸುವಂತಹ ಕೆಲಸ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದರು.

ಪ್ರಧಾನಿಯನ್ನು ಲೋಕಪಾಲ್ ವ್ಯಾಪ್ತಿಗೆ ತರಲು ತೊಂದರೆಯಿಲ್ಲ:
ಲೋಕಪಾಲ್ ವ್ಯಾಪ್ತಿಯಲ್ಲಿ ಪ್ರಧಾನಿಯನ್ನು ತರುವ ಬಗ್ಗೆ ನನಗೆ ಯಾವ ಹಿಂಜರಿಕೆಯೂ ಇಲ್ಲ ಎಂದು ಸ್ಪಷ್ಟಪಡಿಸಿದ ಮನಮೋಹನ್ ಸಿಂಗ್, ಏನೇ ಆದರೂ ತನ್ನ ಸಚಿವ ಸಂಪುಟದ ಕೆಲವು ಸಹೋದ್ಯೋಗಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಹುದ್ದೆಯನ್ನು ಲೋಕಪಾಲ್ ವ್ಯಾಪ್ತಿಯಲ್ಲಿ ತರುವುದರಿಂದ ಅಸ್ಥಿರತೆ ಉಂಟಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿರುವುದಾಗಿ ಹೇಳಿದರು.

ಆದರೆ ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಬದ್ಧ ಎಂದ ಅವರು ಲೋಕಪಾಲ್ ಮಸೂದೆ ಜಾರಿಗೆ ಸಂಬಂಧಿಸಿದಂತೆ ಒಮ್ಮತಾಭಿಪ್ರಾಯ ತರಲು ಪ್ರಯತ್ನಿಸುವ ಮೂಲಕ ಸುಗಮ ಹಾದಿಯನ್ನು ಕಂಡುಕೊಳ್ಳಲಾಗುವುದು ಎಂದರು. ಅಲ್ಲದೇ ತಾನು ಅಣ್ಣಾ ಹಜಾರೆ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರನ್ನು ನಾನು ಗೌರವಿಸುತ್ತೇನೆ. ಬಾಬಾ ಜತೆಗೆ ಮಾತುಕತೆಗೆ ನಾನೇ ಮುತುವರ್ಜಿ ವಹಿಸಿರುವುದಾಗಿಯೂ ವಿವರಿಸಿದರು.

ರಾಹುಲ್ ಪ್ರಧಾನಿಯಾಗ್ಲಿ,ನನ್ನ ಅಭ್ಯಂತರವಿಲ್ಲ:
ರಾಹುಲ್ ಗಾಂಧಿ ಈ ದೇಶದ ಪ್ರಧಾನಿಯಾಗುವುದಾದ್ರೆ ಆಗಲಿ, ಇದರಲ್ಲಿ ನನ್ನ ಅಭ್ಯಂತರವೇನೂ ಇಲ್ಲ. ಆದರೆ ಈ ಬಗ್ಗೆ ಆಡಳಿತ ಪಕ್ಷದೊಳಗೆ ಈ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.

ಯುವಕರು ಈ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬೇಕು. ಹಾಗಾಗಿ ಯುವಕನಾಗಿರುವ ರಾಹುಲ್ ಗಾಂಧಿ ಪ್ರಧಾನಿಯಾಗುವುದಿದ್ದರೆ ಅದಕ್ಕೆ ಯಾವುದೇ ಆಕ್ಷೇಪ ಇಲ್ಲ ಎಂದರು.

ಸಚಿವ ಸಂಪುಟ ಪುನಾರಚನೆಯ ಬಗ್ಗೆಯೂ ಮಾತನಾಡಿದ ಪ್ರಧಾನಿ,ಸಂಪುಟ ಪುನಾರಚನೆ ಕುರಿತಂತೆ ಮಾತುಕತೆ ನಡೆಯುತ್ತಿದೆ ಎಂದರು. ಆದರೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ನೀಡಲು ಅವರು ನಿರಾಕರಿಸಿದರು. ಸಂಪುಟ ಪುನಾರಚನೆಯ ನಂತರ, ಕೆಲವು ಹೊಸ ಮುಖಗಳನ್ನು ನೀವು ಕಾಣುತ್ತೀರಿ ಎಂದು ತಿಳಿಸಿದರು.
ಇವನ್ನೂ ಓದಿ