ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ: ಶಾಸಕರ ಸಾಮೂಹಿಕ ರಾಜೀನಾಮೆ, 'ಕೈ'ಗೆ ಸಂಕಟ (Andhra Pradesh | Telangana State | Congress | Resignation)
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗಾಗಿನ ಹೋರಾಟ ನಿರ್ಣಾಯಕ ಘಟ್ಟ ತಲುಪಿದ್ದು, ಆಂಧ್ರ ಪ್ರದೇಶದಲ್ಲಿ ಕಾಂಗ್ರೆಸ್, ಟಿಡಿಪಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇಂದ್ರದ ಮೇಲೆ ಒತ್ತಡ ಹೇರಲು ಆರಂಭಿಸಿದ್ದಾರೆ. ಕಾಂಗ್ರೆಸ್ ಸದಸ್ಯರ ರಾಜೀನಾಮೆ ಅಂಗೀಕಾರವಾದರೆ ಆಂಧ್ರ ಪ್ರದೇಶದ ಕಾಂಗ್ರೆಸ್ ಸರಕಾರವು ಅಲ್ಪಮತಕ್ಕೆ ಕುಸಿಯಲಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆಡಳಿತಾರೂಢ ಕಾಂಗ್ರೆಸ್‌ನ ನಾಲ್ಕು ಮಂದಿ ಸಚಿವರೂ ಸೇರಿದಂತೆ 37 ಶಾಸಕರು ಹಾಗೂ ಪ್ರತಿಪಕ್ಷ ಟಿಡಿಪಿಯಿಂದ ತೆಲಂಗಾಣ ಪ್ರದೇಶದ 28 ಶಾಸಕರು ರಾಜೀನಾಮೆ ನೀಡಿದ್ದಾರೆ. 2009ರ ಡಿಸೆಂಬರ್ 9ರಂದು ಭರವಸೆ ನೀಡಿದಂತೆ ತೆಲಂಗಾಣ ರಾಜ್ಯ ರಚನೆಗಾಗಿ ಒತ್ತಾಯಿಸಿ ಈ ಶಾಸಕರು ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.

294 ಮಂದಿ ಸದಸ್ಯರ ಸದನದಲ್ಲಿ, ತೆಲಂಗಾಣದಿಂದ 119 ಶಾಸಕರಿದ್ದಾರೆ. ಇಲ್ಲಿ ಕಾಂಗ್ರೆಸ್‌ನ 50 ಮಂದಿ ಹಾಗೂ ಕಾಂಗ್ರೆಸ್ ಸೇರಿರುವ ನಟ ಚಿರಂಜೀವಿ ಅವರ ಪ್ರಜಾರಾಜ್ಯಂನ 2 ಶಾಸಕರಿದ್ದಾರೆ. ತೆಲಂಗಾಣ ಪ್ರದೇಶದಲ್ಲಿ ಟಿಡಿಪಿಯ 37 ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) 11 ಶಾಸಕರಿದ್ದಾರೆ.

ಇತ್ತ ದೆಹಲಿಯಲ್ಲಿ, ಕಾಂಗ್ರೆಸ್ ಸಂಸದರ ರಾಜೀನಾಮೆಯೊಂದು ಪ್ರಹಸನದಂತೆ ನಡೆದಿದ್ದು, ರಾಜೀನಾಮೆ ನೀಡಲೆಂದು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರ ಕಚೇರಿಗೆ ಹೋದ ಕಾಂಗ್ರೆಸ್ ಸಂಸದರಿಗೆ ನಿರಾಶೆ ಕಾದಿತ್ತು. ಅವರಾಗಲೇ ಅಲ್ಲಿಂದ ತೆರಳಿದ್ದರು. ಕಾಂಗ್ರೆಸ್ ಸಂಸದರೊಂದಿಗೆ ಭೇಟಿ ಕಾರ್ಯಕ್ರಮ ನಿಗದಿಯಾಗಿತ್ತಾದರೂ, ಅವರು ಸರಿಯಾದ ಸಮಯಕ್ಕೆ ಬಂದಿಲ್ಲ, ಕಾದ ಬಳಿಕ ಅಲ್ಲಿಂದ ತೆರಳಿರುವುದಾಗಿ ಮೀರಾ ಕುಮಾರ್ ಹೇಳಿಕೆ ನೀಡಿದ್ದು, ಸಾಯಂಕಾಲ ಮತ್ತೆ ಭೇಟಿ ನಿಗದಿಯಾಗಿದೆ.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಆಗ್ರಹಿಸಿ ಆಂಧ್ರದ ನಾಲ್ವರು ಸಚಿವರಾದ ಕೆ.ಜನಾ ರೆಡ್ಡಿ, ಜೆ.ಗೀತಾ ರೆಡ್ಡಿ, ಪೊನ್ನಲ ಲಕ್ಷ್ಮಣಯ್ಯ ಮತ್ತು ಕೋಮತಿರೆಡ್ಡಿ ವೆಂಕಟರೆಡ್ಡಿ ಅವರು ರಾಜೀನಾಮೆ ಸಲ್ಲಿಸಿದ ಮಂತ್ರಿಗಳು. ಮಧ್ಯಾಹ್ನದ ಹೊತ್ತಿಗೆ ಅವರು ವಿಧಾನಸಭೆಯ ಉಪಸಭಾಪತಿಗೆ ತಮ್ಮ ರಾಜೀನಾಮೆ ಪತ್ರ ರವಾನಿಸಿದ್ದರು.

ಈ ರಾಜೀನಾಮೆ ಪ್ರಹಸನದಿಂದಾಗಿ ಕಾಂಗ್ರೆಸ್ ಗೊಂದಲದಲ್ಲಿ ಸಿಲುಕಿದ್ದು, ಮುಂದಿನ ನಡೆ ಏನು ಎಂಬುದು ಕಾದು ನೋಡಬೇಕಾಗಿದೆ. ಈಗಾಗಲೇ ಡ್ಯಾಮೇಜ್ ಕಂಟ್ರೋಲ್ ಕಾರ್ಯಕ್ಕೆ ಮುಂದಾಗಿರುವ ಕಾಂಗ್ರೆಸ್, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕೇಂದ್ರ ಮಂತ್ರಿ ಗುಲಾಂ ನಬೀ ಆಜಾದ್ ಅವರನ್ನು ಕಳುಹಿಸಿದೆ. ಅವರು ಮತ್ತೊಂದು ಸುತ್ತಿನ ಮಾತುಕತೆಗಾಗಿ ತೆಲಂಗಾಣದ ಕಾಂಗ್ರೆಸ್ ಶಾಸಕರನ್ನು ಕರೆದಿದ್ದಾರೆ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ಇವನ್ನೂ ಓದಿ