ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನ್ಯಾಯಮೂರ್ತಿ ಸೌಮಿತ್ರ ಸೇನ್ ವಿರುದ್ಧ ವಾಗ್ದಂಡನೆ (Misappropriation | Soumitra Sen | Calcutta High Court | Rajya Sabha | Impeachment)
PTI
ಹಣಕಾಸಿನ ಅವ್ಯವಹಾರಗಳಿಗಾಗಿ ವಾಗ್ದಾಂಡನೆ ಎದುರಿಸುತ್ತಿರುವ ಕೋಲ್ಕತಾ ಹೈಕೋರ್ಟ್‌ ನ್ಯಾಯಮೂರ್ತಿ ಸೌಮಿತ್ರಾ ಸೇನ್, ತಾವು ಮುಗ್ದರಾಗಿದ್ದು ತಮ್ಮ ಮೇಲಿನ ಆರೋಪಕ್ಕೆ ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರ ದ್ವಂದ ನೀತಿಯೇ ಕಾರಣವೆಂದು ಟೀಕಿಸಿದ್ದಾರೆ.

ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಉತ್ತಮ ನಡತೆಯನ್ನು ಹೊಂದಿದ್ದೇನೆ. ನನ್ನ ಪ್ರಾಮಾಣಿಕತೆ ಮತ್ತು ಬದ್ಧತೆಯ ಬಗ್ಗೆ ಇಲ್ಲಿಯವರೆಗೆ ಯಾರು ದೂರು ನೀಡಿಲ್ಲ ಎಂದು ನ್ಯಾಯಮೂರ್ತಿ ಸೇನ್ ಸಂಸತ್ತಿನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ.

ಸುಮಾರು 90 ನಿಮಿಷಗಳ ಕಾಲ ಸಂಸತ್ತಿನಲ್ಲಿ ತಮ್ಮ ಮೇಲಿನ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ ನ್ಯಾಯಮೂರ್ತಿ ಸೇನ್, ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾದ ಮಾಜಿ ನ್ಯಾಯಮೂರ್ತಿ ಬಾಲಕೃಷ್ಣನ್, ಆರಂಭದಿಂದಲೂ ದ್ವಂದ ನೀತಿ ತೋರುತ್ತಿದ್ದರು ಎಂದು ಆರೋಪಿಸಿದ್ದಾರೆ.

ರಾಜ್ಯಸಭಾ ಅದ್ಯಕ್ಷ ಹಮೀದ್ ಅನ್ಸಾರಿ ನೇಮಿಸಿದ ವಿಶೇಷ ಸಮಿತಿ, 1990ರಲ್ಲಿ ಸೇನ್ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾಗ 24 ಲಕ್ಷ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ವರದಿಯನ್ನು ಸಲ್ಲಿಸಿತ್ತು.

ಸೇನ್ ವಿಚಾರಣೆ ಸಂದರ್ಭದಲ್ಲಿ ರಾಜ್ಯಸಭೆ ಸಂಪೂರ್ಣವಾಗಿ ಕೋರ್ಟ್‌ಮಯವಾಗಿತ್ತು.ಪ್ರತಿಯೊಬ್ಬ ಸಂಸದರು ಜ್ಯೂರಿ ಸದಸ್ಯರಾಗಿದ್ದರಿಂದ ಸೇನ್ ವಾಗ್ದಂಡನೆ ಪರವಾಗಿ ಮತಚಲಾಯಿಸಬೇಕಾಗಿತ್ತು.

ಸಿಪಿಎಂ ಸಂಸತ್ ಸದಸ್ಯ ಸೀತಾರಾಮ್ ಯಚೂರಿ, ಸೇನ್ ವಿರುದ್ಧ ವಾಗ್ದಂಡೆಯ ಗೊತ್ತುವಳಿಯನ್ನು ಮಂಡಿಸಿದರು. ಗೊತ್ತುವಳಿಯನ್ನು ಮಂಡಿಸಿದ ನಂತರ ನ್ಯಾಯಮೂರ್ತಿ ಸೌಮಿತ್ರ ಸೇನ್ ಅವರನ್ನು ರಾಜ್ಯಸಭೆಗೆ ಕರೆ ತರಲಾಯಿತು.

ಇಂತಹ ಗೊತ್ತುವಳಿ ಮಂಡಿಸುವುದು ನಮ್ಮ ಇತಿಹಾಸದಲ್ಲಿಯೇ ನಡೆದಿಲ್ಲ. ಗೊತ್ತುವಳಿಯನ್ನು ಮಂಡಿಸಿರುವುದು ನ್ಯಾಯಾಂಗದ ವಿರುದ್ಧವಲ್ಲ. ಅವ್ಯವಹಾರ ನಡೆಸಿದ ಆರೋಪ ಎದುರಿಸುತ್ತಿರುವ ಏಕೈಕ ನ್ಯಾಯಮೂರ್ತಿಯ ವಿರುದ್ಧವಾಗಿದೆ ಎಂದು ಯಚೂರಿ ಸ್ಪಷ್ಟಪಡಿಸಿದರು.

ವಿಶೇಷ ಸಮಿತಿಗಳು ಜಸ್ಟಿಸ್ ಸೇನ್ ಅವರನ್ನು ಅಪರಾಧಿ ಎಂದು ಪರಿಗಣಿಸಿವೆ. ಆದ್ದರಿಂದ, ನ್ಯಾಯಮೂರ್ತಿಗಳಾಗಿ ಮುಂದುವರಿಯಲು ಸಮರ್ಥರಲ್ಲ. ಸೇನ್ ಸಮರ್ಥನೆಯನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯಸಭೆಯ ವಿಪಕ್ಷದ ನಾಯಕ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಸೌಮಿತ್ರ ಸೇನ್, ಹಣದ ಅವ್ಯವಹಾರ, ಕೋಲ್ಕತಾ ಹೈ ಕೋರ್ಟ್, ರಾಜ್ಯಸಭೆ, ವಾಗ್ದಂಡನೆ