ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರ ಡೀಲ್‌'ಗೆ ಸಿದ್ದವಾಗಿದ್ದ ಮನಮೋಹನ್ ಸಿಂಗ್-ಮುಷರ್ರಫ್ (Manmohan Singh | Pervez Musharraf | Kashmir deal | WikiLeaks | India News | Latest Politics News in Kannada)
PTI
ಪರ್ವೇಜ್ ಮುಷರ್ರಫ್ ಪಾಕಿಸ್ತಾನದ ಅಧ್ಯಕ್ಷರಾಗಿದ್ದಾಗ, ಕಳೆದ 2007ರ ಅವಧಿಯಲ್ಲಿ ಕಾಶ್ಮೀರ ಸಮಸ್ಯೆಗೆ ಭಾರತ ಮತ್ತು ಪಾಕಿಸ್ತಾನ ಒಪ್ಪಂದಕ್ಕೆ ಸಿದ್ಧವಾಗಿದ್ದವು ಎಂದು ವಿಕಿಲೀಕ್ಸ್‌ ವರದಿ ಮಾಡಿದೆ.

ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕಾಶ್ಮೀರ ಪ್ರದೇಶವನ್ನು 'ಭಯೋತ್ಪಾದನಾ ರಹಿತ ಪರಿಹಾರಕ್ಕಾಗಿ' 2008ರಲ್ಲಿ ಅಮೆರಿಕದ ನಿಯೋಗದ ಮುಂದೆ ಹೇಳಿದ್ದರು ಎಂದು ವರದಿಯಲ್ಲಿ ಬಹಿರಂಗವಾಗಿದೆ.

ಪಾಕಿಸ್ತಾನದ ರಾಜಕಾರಣಿಗಳು ಮತ್ತು ರಾಯಭಾರಿಗಳು ಕಾಶ್ಮೀರದ 'ಭಯೋತ್ಪಾದನಾ ರಹಿತ ಪ್ರದೇಶ' ಒಪ್ಪಂದ ಕುರಿತಂತೆ ಹಲವಾರು ಬಾರಿ ಮಾಧ್ಯಮಗಳಲ್ಲಿ ಪ್ರಸ್ತಾಪಿಸಿದ್ದಾರೆ. ಆದರೆ, ಭಾರತ ಮೊದಲ ಬಾರಿಗೆ ಹೇಳಿಕೆ ನೀಡಿರುವುದರಿಂದ ಸುದ್ದಿಗೆ ಮಹತ್ವ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಕೇಬಲ್ ವರದಿಯ ಪ್ರಕಾರ, ಮುಷರ್ರಫ್ ಪಾಕಿಸ್ತಾನದ ಅಧ್ಯಕ್ಷರಾಗಿದ್ದಾಗ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಬರಲಾಗಿತ್ತು ಎಂದು ಅಮೆರಿಕ ನಿಯೋಗದ ನೇತೃತ್ವ ವಹಿಸಿದ್ದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಹೊವಾರ್ಡ್ ಬೆರ್ಮನ್ ಅವರಿಗೆ, ಪ್ರಧಾನಿ ಮನಮೋಹನ್ ಸಿಂಗ್ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಪಾಕ್ ಅಧ್ಯಕ್ಷ ಮುಷರ್ರಫ್, ನಾಲ್ಕು ಅಂಶಗಳ ಪರಿಹಾರವನ್ನು ಮುಂದಿಟ್ಟಿದ್ದರು. ಮತ್ತು ಪ್ರಧಾನಿ ಕೂಡಾ ಸಿಯಾಚಿನ್ ಗಡಿಭಾಗಗಳಲ್ಲಿರುವ ಉದ್ರಿಕ್ತತೆ ಕಡಿಮೆ ಮಾಡಿ ಶಾಂತಿ ಸ್ಥಾಪಿಸುವಲ್ಲಿ ಕೈಜೋಡಿಸಬೇಕು ಎಂದು ಒತ್ತಡ ಹೇರಿದ್ದರು ಎಂದು ಕೇಬಲ್ ವರದಿಯಲ್ಲಿ ಬಹಿರಂಗಪಡಿಸಿದೆ.

ಮುಷರ್ರಫ್ ಅವರ ನಾಲ್ಕು ಅಂಶಗಳೆಂದರೆ, ಮಿಲಿಟರಿ ರಹಿತ ಪ್ರದೇಶ, ಗರಿಷ್ಠ ಸ್ವಾಯತ್ತತೆ, ಗಡಿಯಲ್ಲಿರುವ ಉದ್ರಿಕ್ತತೆ ಹಾಗೂ ಕಾಶ್ಮೀರ ಪ್ರದೇಶದಲ್ಲಿ ಜಂಟಿ ವ್ಯವಸ್ಥಾಪನೆ ಕುರಿತಂತೆ ಪ್ರಸ್ತಾಪಿಸಿದ್ದರು ಎಂದು ವಿಕಿಲೀಕ್ಸ್ ಪ್ರಕಟಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಮನಮೋಹನ್ ಸಿಂಗ್, ಪರ್ವೇಜ್ ಮುಷ್ರಫ್, ಕಾಶ್ಮೀರ ಒಪ್ಪಂದ, ವಿಕಿಲೀಕ್ಸ್, ಕನ್ನಡ ಸುದ್ದಿ, ರಾಷ್ಟ್ರೀಯ ಸುದ್ದಿ, ತಾಜಾ ಕನ್ನಡ ಸುದ್ದಿ, ರಾಜಕೀಯ, ಭಾರತೀಯ ಸುದ್ದಿ